ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ತಾಲೂಕು ಮಟ್ಟದ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ

ಕೋಟ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ತಾಲೂಕು ಮಟ್ಟದ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಇತ್ತೀಚಿಗೆ ಶ್ರೀ ದೇಗುಲದಲ್ಲಿ ನಡೆಯಿತು. ವಿಶ್ರಾಂತ ಆಡಳಿತ ಧರ್ಮದರ್ಶಿಗಳಾದ ಕೆ.ಸೂರ್ಯನಾರಾಯಣ ಉಪಾಧ್ಯಾಯರು ಆನೆಗುಡ್ಡೆ ಸ್ವಾಗತ ಗೋಪುರದಿಂದ ಭವ್ಯಶೋಭಯಾತ್ರೆಗೆ ಚಾಲನೆ ನೀಡಿದರು.

ಉಡುಪಿಯ ಅದಮಾರು ಮಠದ ಶ್ರೀ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀ ಪಾದಂಗಳವರನ್ನು ಈ ಭವ್ಯ ಮೆರವಣಿಗೆಯ ಮೂಲಕ ಪರ್ಯಾಯ ಅರ್ಚಕರಾದ ಕೆ. ವ್ಯಾಸ ಉಪಾಧ್ಯಾಯ ಹಾಗೂ ಸಹೋದರರಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಆನೆಗುಡ್ಡೆ ದೇವಸ್ಥಾನಕ್ಕೆ ಸ್ವಾಗತಿಸಲಾಯಿತು.

ಶ್ರೀಗಳು ಶ್ರೀ ದೇವರಿಗೆ ವಿಶೇಷ ಮಂಗಳಾರತಿ ನೆರವೇರಿಸಿದರು. ದೇವಳದ ವತಿಯಿಂದ ಆಡಳಿತ ಧರ್ಮದರ್ಶಿ ಕೆ ಶ್ರೀರಮಣ ಉಪಾಧ್ಯಾಯ ಫಲಕಾಣಿಕೆಯನ್ನು ನೀಡಿ ಸ್ವಾಮಿಗಳನ್ನು ಸಭಾ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು. ದೀಪ ಪ್ರಜ್ವಲನೆ ಮೂಲಕ ಶ್ರೀಗಳು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಿಬಿರಾರ್ಥಿಗಳಿಗೆ ಆಶೀರ್ವದಿಸಿದರು.

ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಧಾರ್ಮಿಕ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಶೇಟ್ ಜುವೆಲರ್ಸ್ ನ ಪ್ರಶಾಂತ್ ಶೆಟ್, ಉದ್ಯಮಿಗಳಾದ ದಿನೇಶ್ ಹೆಗಡೆ ಮೊಳಹಳ್ಳಿ, ಆನಂದ್ ಸಿ.ಕುಂದರ್, ಶ್ರೀರಾಮ ಕೋಟಿಲಿಂಗೇಶ್ವರ ಕಲಾಸಂಘದ ಅಧ್ಯಕ್ಷ ಬಿ.ಜಿ. ಸೀತಾರಾಮ ಧನ್ಯ, ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆನಂದ ಪೂಜಾರಿ, ರಥಶಿಲ್ಪಿಗಳಾದ ಕೋಟೇಶ್ವರ ರಾಜಗೋಪಾಲ್ ಆಚಾರ್ಯ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಭಜನಾ ಶಿಬಿರದ ಹಲವು ಪ್ರಮುಖರಿಗೆ ಶ್ರೀದೇವಳದ ವತಿಯಿಂದ ಸ್ಮರಣಿಕೆ ಹಾಗೂ ಪ್ರಸಾದವನ್ನು ನೀಡುವುದರ ಮೂಲಕ ಗೌರವಿಸಲಾಯಿತು. ಐವತ್ತಕ್ಕೂ ಹೆಚ್ಚಿನ ಕಿರಿಯ ಹಾಗೂ ಹಿರಿಯ ಭಜನಾ ತಂಡದ ಶಿಬಿರಾರ್ಥಿ ಗಳಿಂದ ಪ್ರಾತ್ಯಕ್ಷಿತೆ, ಕುಣಿತ ಹಾಗೂ ಕುಳಿತು ಭಜನಾ ಮಂಗಲೋತ್ವವ ನೆರವೇರುವುದರೊಂದಿಗೆ ಕಾರ್ಯಕ್ರಮವು ಸುಸಂಪನ್ನಗೊoಡಿತು.

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ತಾಲೂಕು ಮಟ್ಟದ ಭಜನಾ ತರಬೇತಿ ಶಿಬಿರದ ಸಮಾರೋಪಕ್ಕೆ ಉಡುಪಿಯ ಅದಮಾರು ಮಠದ ಶ್ರೀ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀ ಪಾದಂಗಳ ಭಾಗಿಯಾದರು. ದೇವಳದ ವತಿಯಿಂದ ಆಡಳಿತ ಧರ್ಮದರ್ಶಿ ಕೆ ಶ್ರೀರಮಣ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ಕೆ. ವ್ಯಾಸ ಉಪಾಧ್ಯಾಯ, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಧಾರ್ಮಿಕ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಶೇಟ್ ಜುವೆಲರ್ಸ್ ನ ಪ್ರಶಾಂತ್ ಶೆಟ್, ಉದ್ಯಮಿಗಳಾದ ದಿನೇಶ್ ಹೆಗಡೆ ಮೊಳಹಳ್ಳಿ ಇದ್ದರು.

Leave a Reply

Your email address will not be published. Required fields are marked *