ಕೋಟ: ಸೇವಾ ಸಂಗಮ ವಿದ್ಯಾಕೇಂದ್ರ ವಿದ್ಯಾಗಿರಿ ತೆಕ್ಕಟ್ಟೆ ಇಲ್ಲಿ ಮಕ್ಕಳ ವಾರ್ಷಿಕ ಸಂಭ್ರಮ ಪರ್ವ ಡಿ.24ರ ಬುಧವಾರ ನಡೆಯಿತು. ಮುಖ್ಯ ಅತಿಥಿಗಳಾಗಿ ಕರ್ಣಾಟಕ ಬ್ಯಾಂಕ್‌ನ ಪ್ರಾದೇಶಿಕ ಕಛೇರಿ ಉಡುಪಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಮೇಶ್ ವೈದ್ಯ ಮಕ್ಕಳ ಪರ್ವದಲ್ಲಿ ಮಕ್ಕಳ ಪ್ರತಿಭೆ ಅರಳಿ, ಶಾಲೆಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಶಕ್ತಿಯನ್ನು ಪ್ರದರ್ಶಿಸುವ ವಿಶಿಷ್ಟ ವೇದಿಕೆ ಎಂದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕುಂದಾಪುರ ತಾಲೂಕು ಸಂಘ ಚಾಲಕ ರವಿಚಂದ್ರ ಶೆಟ್ಟಿ ತಲ್ಲೂರು ದೊಡ್ಮನೆ, ಶಾಲಾ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಸಂಜೀವ ಜಿ. ಗುಂಡ್ಮಿ, ಮುಖ್ಯೋಪಾದ್ಯಾಯ ಹರ್ಷ ಕೋಟೇಶ್ವರ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುರೇಶ್ ಬೆಟ್ಟಿನ್ ವಹಿಸಿದ್ದರು. ಸಂಚಾಲಕರಾದ ಕಮಲಾಕ್ಷ ಪೈ ಸ್ವಾಗತಿಸಿ , ಸಂಧ್ಯಾ ಭಟ್ ವಂದಿಸಿದರೆ, ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.
ಸೇವಾ ಸಂಗಮ ವಿದ್ಯಾಕೇಂದ್ರ ವಿದ್ಯಾಗಿರಿ ತೆಕ್ಕಟ್ಟೆ ಇಲ್ಲಿ ಮಕ್ಕಳ ವಾರ್ಷಿಕ ಸಂಭ್ರಮ ಪರ್ವ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್‌ನ ಪ್ರಾದೇಶಿಕ ಕಛೇರಿ ಉಡುಪಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಮೇಶ್ ವೈದ್ಯ ಭಾಗವಹಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕುಂದಾಪುರ ತಾಲೂಕು ಸಂಘ ಚಾಲಕ ರವಿಚಂದ್ರ ಶೆಟ್ಟಿ ತಲ್ಲೂರು ದೊಡ್ಮನೆ ಇದ್ದರು.












Leave a Reply