ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹೊಳೆ ಹೂಳೆತ್ತದಿದ್ದರೆ ಮತ್ತೆ ಧರಣಿ- ರೈತ ಸಂಘಟನೆ ಘೋಷಣೆ

ಕೋಟ: ಇಲ್ಲಿನ ತೆಕ್ಕಟ್ಟೆ ಗ್ರಾಮಪಂಚಾಯತ್‌ನ ಕೆದೂರಿನಿಂದ ಕೋಟ, ಸಾಲಿಗ್ರಾಮದ ಚಿತ್ರಪಾಡಿಯ ಸೂಲ್ಲಡ್ಪು ಹೊಳೆಯವರೆಗೆ ಹೂಳೆತ್ತುವ ಕಾರ್ಯ ಮರಿಚಿಕೆಯಾದ ಹಿನ್ನಲ್ಲೆಯಲ್ಲಿ ಇಲ್ಲಿನ ಕೋಟದ ರೈತಧ್ವನಿ ಸಂಘಟನೆ ಗುರುವಾರ ದಿಢೀರ್ ಸಭೆ ಸೇರಿತು.
ಕಳೆದ ಹಲವಾರು ವರ್ಷಗಳಿಂದ ಪ್ರತಿಭಟನೆಯ ಮೂಲಕ ಗಮನ ಸೆಳೆದ ಇಲ್ಲಿನ ರೈತ ಸಂಘಟನೆಗಳು ಹೊಳೆ ಹೂಳೆತ್ತುವ ಕುರಿತು ಕಳೆದ ವರ್ಷ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ಉಪಮುಖ್ಯಮಂತ್ರಿಳನ್ನು ಭೇಟಿ ಮಾಡಿ ಸುಮಾರು 4.50 ಕೋಟಿ ರೂಗಳ ಅನುದಾನದ ಭರವಸೆ ಪಡೆದು ಹಿಂತಿರುಗಿತು.

ಆದರೆ ನಂತರ ದಿನಗಳಲ್ಲಿ ಈ ಬಗ್ಗೆ  ಸಂಬoಧಿಸಿದoತೆ ಸಣ್ಣನೀರಾವರಿ ಇಲಾಖೆ ನಿಲನಕ್ಷೆ ಸಿದ್ಧಪಡಿಸಿ ಸರ್ವೆಕಾರ್ಯ ಪೂರ್ಣಗೊಳಿಸಿತು.ಆದರೆ ಇನ್ನೇನು ಕೆಲವೆ ದಿನಗಳಲ್ಲಿ ಹೊಳೆ ಹೂಳೆತ್ತುವ ಆಶಾಭಾವನೆ ರೈತಸಂಘಟನೆಯಲ್ಲಿ ಮೊಳಗಿತ್ತಾದರೂ ಸಂಬoಧಿಸಿದ ಇಲಾಖೆ ಅದನ್ನು ತೆರೆಯ ಮರೆಗೆ ಸರಿಸಿ ಕೈಕಟ್ಟಿ ಕೂರಿತು.
ಆದರೆ ಇದೀಗ ಮತ್ತೆ ರೈತ ಸಂಘಟನೆಗಳು ದೊಡ್ಡ ಮಟ್ಟದ ಪ್ರತಿಭಟನೆಗೆ ಸಜ್ಜಾಗಿದ್ದು ಈ ಬಗ್ಗೆ ಗುರುವಾರ ಕೋಟದಲ್ಲಿ ಪುನಃ ಸಭೆ ನಡೆಸಿ ಕೆಲ ನಿರ್ಧಾರಗಳನ್ನು ಕೈಗೊಂಡಿದೆ.

ಹೋರಾಟದ ಮೊದಲ ಭಾಗವಾಗಿ ತಾಲೂಕು ಆಡಳಿತ, ಜಿಲ್ಲಾಡಳಿತ ಸೇರಿದಂತೆ ಸಂಬoಧಿಸಿದ ಇಲಾಖೆಗೆ ಮನವಿ ನೀಡಿ ಮುಂದಿನ ದಿನಗಳಲ್ಲಿ ತಾಲೂಕು  ಮತ್ತು ಜಿಲ್ಲಾಡಳಿತ ಕಛೇರಿ ಎದುರು ಧರಣಿ ಕೂರುವುದಾಗಿ ಸಭೆಯಲ್ಲಿ ತಿರ್ಮಾನ ಕೈಗೊಂಡಿದೆ. ಸಭೆಯಲ್ಲಿ ರೈತ ಧ್ವನಿ ಸಂಘದ ಅಧ್ಯಕ್ಷ ಎಂ ಜಯರಾಮ ಶೆಟ್ಟಿ, ಪ್ರಮುಖರಾದ ಟಿ.ಮಂಜುನಾಥ್ ಗಿಳಿಯಾರು, ಬಾಬು ಶೆಟ್ಟಿ, ಮಹೇಶ್ ಶೆಟ್ಟಿ, ಮಹಾಬಲ ಪೂಜಾರಿ, ತಿಮ್ಮ ಕಾಂಚನ್, ಶಿವಮೂರ್ತಿ ಉಪಾಧ್ಯಾ, ಕೇಶವ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

ತೆಕ್ಕಟ್ಟೆ ಗ್ರಾಮಪಂಚಾಯತ್‌ನ ಕೆದೂರಿನಿಂದ ಕೋಟ,ಸಾಲಿಗ್ರಾಮದ ಚಿತ್ರಪಾಡಿಯ ಸೂಲ್ಲಡ್ಪು ಹೊಳೆಯವರೆಗೆ ಹೂಳೆತ್ತುವ ಕಾರ್ಯ ಮರಿಚಿಕೆಯಾದ ಹಿನ್ನಲ್ಲೆಯಲ್ಲಿ ಇಲ್ಲಿನ ಕೋಟದ ರೈತಧ್ವನಿ ಸಂಘಟನೆ ಗುರುವಾರ ದಿಢೀರ್ ಸಭೆ ಸೇರಿತು.

Leave a Reply

Your email address will not be published. Required fields are marked *