ಕೋಟ: ಕೋಟದಲ್ಲಿ ಸಂತ ಜೊಸೆಫರ್ ಇಗರ್ಜಿಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಗಾಯನ ಮಂಡಳಿಯವರು ಕ್ಯಾರಲ್ಸ್ ಗಾಯಗಳನ್ನು ಹಾಡುವುದರೊಂದಿಗೆ ಸಂಭ್ರಮ ಚಾಲನೆಗೊಂಡಿತು. ವಿಶೇಷವಾಗಿ ಪುಟ್ಟ ಮಕ್ಕಳ ಕ್ಯಾರಲ್ಸ್ ಗಾಯನ ಎಲ್ಲರನ್ನು ರಂಜಿಸಿತು.
ಇದೇ ವೇಳೆ ಪವಿತ್ರ ಬಲಿಪೂಜೆ ನಡೆಯಿತು. ಅತಿಥಿಗಳಾಗಿ ಮಂಗಳೂರಿನ ಧರ್ಮಗುರು ಫಾದರ್ ಮುಲ್ಲರ್ ಸಂಸ್ಥೆಯ ಆಡಳಿತದಾರರಾದ ಫಾದರ್ ಮಾಯ್ಕಲ್ ಸಾಂತ್ಕಾಯೊರ್ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ಕೋಟ ಚರ್ಚಿನ ಧರ್ಮಗುರುಗಳಾದ ಫಾದರ್ ಸ್ಪ್ಯಾನಿತಾ ಅವರು ಸಹಕರಿಸಿದರು.
ಬಲಿಪೂಜೆಯ ನಂತರ ಕಾರ್ಯಕ್ರಮದಲ್ಲಿ ಸಂತಾಕ್ಲಾಸ್ ಹಾಗು ವಿವಿಧ ಸ್ಪರ್ಧೆಗಳು ಜನರನ್ನು ರಂಜಿಸಿದವು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕೇಕ್, ಕುಸ್ವಾರ್‌ಗಳನ್ನು ಜನರು ಸೇವಿಸಿ ಪರಸ್ಪರ ಕ್ರಿಸ್ಮಸ್ ಶುಭಾಶಯಗಳನ್ನು ಕೋರಿದರು. ಆಕರ್ಷಿತ ಬೃಹತ್ ಗೋದಳಿ ಪ್ರಮುಖ ಆಕರ್ಷಣೆಯ ಕೇಂದ್ರವಾಗಿತ್ತು. ನೂರಾರು ಕ್ರಿಶ್ಚಿಯನ್ ಬಾಂಧವರು ಈ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಭಾಗಿಯಾದರು.












Leave a Reply