ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಬ್ಲಾಕ್ ವ್ಯಾಪ್ತಿಯ  ಗ್ಯಾರಂಟಿ ಸಮಿತಿಯ ಸದಸ್ಯರು ಮತ್ತು ಗ್ಯಾರಂಟಿ ಯೋಜನೆಯ ಬಾರಕೂರು ವ್ಯಾಪ್ತಿಯ ಫಲಾನುಭಾವಿಗಳ ಸಮಾಲೋಚನ ಸಭೆ

ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ದಿನೇಶ್ ಹೆಗ್ಡೆ ಮೊಳಹಳ್ಳಿ ಇವರ ನೇತೃತ್ವದಲ್ಲಿ ಕೋಟ ಮಹಿಳಾ ಕಾಂಗ್ರೆಸ್ ಸಮಿತಿಯ ಅದ್ಯಕ್ಷರಾದ ಶ್ರೀಮತಿ ರೇಖಾ.ಪಿ.ಸುವರ್ಣ ಇವರ ಅಧ್ಯಕ್ಷತೆಯಲ್ಲಿ ಹಾಗೂ ಗ್ಯಾರಂಟಿ ಅನುಷ್ಠಾನ  ಸಮಿತಿ ಬ್ರಹ್ಮಾವರ ತಾಲ್ಲೂಕಿನ  ಅದ್ಯಕ್ಷರಾದ ಡಾ.ಸುನೀತಾ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಕೋಟ ಬ್ಲಾಕ್ ವ್ಯಾಪ್ತಿಯ  ಗ್ಯಾರಂಟಿ ಸಮಿತಿಯ ಸದಸ್ಯರು ಮತ್ತು ಗ್ಯಾರಂಟಿ ಯೋಜನೆಯ ಬಾರಕೂರು  ವ್ಯಾಪ್ತಿಯ ಫಲಾನುಭಾವಿಗಳ ಸಮಾಲೋಚನ ಸಭೆ ಜರಗಿತು.

ಗ್ಯಾರಂಟಿ ಸಭೆಯ ಉದ್ದೇಶ: ಕೋಟ ಬ್ಲಾಕ್ ವ್ಯಾಪ್ತಿಯಲ್ಲಿ ಎದುರಾಗುತ್ತಿರುವ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಯ ಸಮಸ್ಯೆ ಪರೀಶಿಲಿಸಿ ಕಾರ್ಯಕರ್ತರ ಸಲಹೆಯನ್ನು ಪಡೆದು ಫಲಾನುಭಾವಿಗಳಿಗೆ ಪರಿಹಾರ ಒದಗಿಸುವ ಕುರಿತು ಸಮಾಲೋಚನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಶ್ರೀ ಭುಜಂಗ ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅದ್ಯಕ್ಷರಾದ ಶ್ರೀಮತಿ ಜ್ಯೋತಿ ಹೆಬ್ಬಾರ್, ಟ್ರಿಬ್ಯೂನಲ್ ಸದಸ್ಯರಾದ ಮಮತಾ ಶೆಟ್ಟಿ, ಕೆ.ಡಿ.ಪಿ‌ ಸದಸ್ಯರಾದ ಚಂದ್ರ ಹಂದಟ್ಟು, ಬ್ರಹ್ಮಾವರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ರಮೇಶ್ ತಿಂಗಳಾಯ, ಸುಧಾಕರ್ ಶೆಟ್ಟಿ, ಸುರೇಶ್ ಕಚ್ಕೆರಿ, ಶ್ರೀಕಾಂತ್ ಆಚಾರ್ಯ. ಹಾಗೂ ಪಕ್ಷದ ಮುಖಂಡರಾದ ಕಿಶೋರ್ ಕುಮಾರ್ ಶೆಟ್ಟಿ, ಹೇಮಲತಾ ಬಾರಕೂರು, ವಿಜಯ ಪೂಜಾರಿ, ಅನಿಲ್ ಪೆರ್ನಾಂಡಿಸ್ ಮತ್ತು ಟೆಲ್ಮಾ ಸೇರಿದಂತೆ ಆನೇಕ ಕಾರ್ಯಕರ್ತರು ಮತ್ತು ಫಲಾನುಭಾವಿಗಳು ಬಾಗವಹಿಸಿ ನಜೀರ್ ಬಾರಕೂರು ಧನ್ಯವಾದ ಸಮರ್ಪಣೆ ಮಾಡಿದರು.

Leave a Reply

Your email address will not be published. Required fields are marked *