ಉಡುಪಿ ನಗರದ ಕೊಡವೂರು ವಾರ್ಡ್ ನ ಅಭಿವೃದ್ಧಿಗೆ ಹೊಸತನದ ಪರಿಕಲ್ಪನೆ ಆಗಿದೆ. ಇದಕ್ಕೆ ಶ್ರಮಿಸಿದಂತಹ ಎಲ್ಲಾ ಕಾರ್ಯಕರ್ತರನ್ನು ಸೇರಿಸಿ, ಅವಲೋಕನ ಕಾರ್ಯವು ನಿತ್ಯ ನಿರಂತರ ನಡೆಯುತ್ತಿದೆ. ಕೊಡವೂರು ವಾರ್ಡಿನ ಲಕ್ಷ್ಮೀ ನಗರ ಗರ್ಡೇ ಪರಿಸರದಲ್ಲಿ ಎಲ್ಲಾ ಕಾರ್ಯಕರ್ತರನ್ನು ಸೇರಿಸಿಕೊಂಡು. ಇದುವರೆಗೂ ಆಗಿರುವಂತಹ ಅಭಿವೃದ್ಧಿ ಕಾರ್ಯದ ಮೂಲಸೌಕರ್ಯಗಳಾದ ರಸ್ತೆ, ಚರಂಡಿ, ದಾರಿದೀಪದ ಜೊತೆಯಲ್ಲಿ ಕುಂದು ಕೊರತೆಗಳಿಗೆ ಉತ್ತರ ಕೊಡುವಂತದ್ದನ್ನು ಕೊಡವೂರು ವಾರ್ಡಿನಲ್ಲಿ ನಡೆಯುತ್ತಿದೆ.
28 ಕ್ಕಿಂತಲೂ ಅಧಿಕ ಮನೆಗಳು ಮತಾಂತರವಾದದ್ದನ್ನು ತಡೆಯಲೆಂದೆ “ಕೇಶವ” ತಂಡವನ್ನು ರಚಿಸಿಕೊಂಡು ಕೇಶವ ಜ್ಞಾನ ಮಂದಿರದಲ್ಲಿ ನಿತ್ಯ ನಿರಂತರ ಭಗವದ್ಗೀತೆ ರಾಮಾಯಣವನ್ನು ತಿಳಿಸಿ ಕೊಡುವ ಕಾರ್ಯ ನಡೆಯುತ್ತಿದೆ. ಅದೇ ರೀತಿ ಆರೋಗ್ಯದ ದೃಷ್ಟಿಯಿಂದ ಕೊಡವೂರಿಗೆ “ನಮ್ಮ ಕ್ಲಿನಿಕ್” ಅನ್ನು ತರಿಸಿಕೊಂಡು ಉಚಿತವಾಗಿ ಔಷಧಿ ಕೊಡುವ ಕಾರ್ಯವು ನಡೆಯುತ್ತಿದೆ. ನಡೆಯಲು ಸಾಧ್ಯವಿಲ್ಲದವರು ಮತ್ತು ವಿಕಲಚೇತನರ ಮನೆ ಮನೆಗೆ “ಸಂಚಾರಿ ಆಸ್ಪತ್ರೆ”ಯ ಮೂಲಕ ಆರೋಗ್ಯ ರಕ್ಷಣೆಯ ಕಾರ್ಯವು ನಡೆಯುತ್ತಿದೆ. ಉದ್ಯೋಗವಿಲ್ಲದ ತರುಣರಿಗೆ ಉದ್ಯೋಗ ನೀಡಲೆಂದೆ 10 ಬಾರಿ ಉದ್ಯೋಗ ಮೇಳವನ್ನು ನಡೆಸಿಕೊಂಡು, ಸರಕಾರಿ ಶಾಲೆಗಳಿಗೆ ಉಚಿತ ಆರೋಗ್ಯ ವಿಮೆಗಳನ್ನು ಮಾಡುವ ಕಾರ್ಯವು ನಿತ್ಯ ನಿರಂತರ ನಡೆಯುತ್ತಿದೆ.
ಆದ್ದರಿಂದ ಕೊಡವೂರು ವಾರ್ಡಿಗೆ ಮೂಲ ಸೌಕರ್ಯದ ಜೊತೆಯಲ್ಲಿ ಅನೇಕ ಅಭಿವೃದ್ಧಿ ಮತ್ತು ಸೇವಾ ಕಾರ್ಯಗಳನ್ನು ಮಾಡಿರುವಂತಹದ್ದು ತಿಳಿದ ಸಂಗತಿ 3 ಕೆರೆಗಳ ನಿರ್ಮಾಣಕ್ಕೆ, ಅದೇ ರೀತಿ 4 ಬಸ್ಸು ತಂಗುದಾನ ನಿರ್ಮಾಣ, 26 ಹೊಸ ರಸ್ತೆಗಳ ನಿರ್ಮಾಣ, 27 ಬಾರಿ ಗ್ರಾಮ ಸಭೆ, ತುರ್ತು ಜನ ಸ್ಪಂದನೆಗಾಗಿ ಜನ ಸೇವಾ ಕೇಂದ್ರ, ನಿತ್ಯ ನಿರಂತರ ಸೇವಾ ಕಾರ್ಯ ಸ್ವಚ್ಛ ಭಾರತ್ ನ ಅಡಿಯಲ್ಲಿ 225 ಕ್ಕಿಂತಲೂ ಅಧಿಕ ಸ್ವಚ್ಛ ಮಾಡುವ ಕೆಲಸ ನಿತ್ಯ ನಿರಂತರ ನಡೆಯುತ್ತಿದೆ. ಆದ್ದರಿಂದ ಒಬ್ಬ ನಗರ ಸಭಾ ಸದಸ್ಯನಾಗಿ ಮನೆ ಮಗನಾಗಿ ಜವಾಬ್ದಾರಿ ವಹಿಸಿ ಕಾರ್ಯಕರ್ತರ ಸಹಕಾರದಲ್ಲಿ ಎಲ್ಲರೂ ಸೇರಿಕೊಂಡು ನಿಮ್ಮ ಮನೆ ಮಗನಾಗಿ ಕೆಲಸ ನಿರ್ವಹಿಸುತ್ತಾರೆ. ಇಲ್ಲಿ ನಡೆದ ಎಲ್ಲಾ ಕಾರ್ಯಗಳ ಪುಸ್ತಕ ಬಿಡುಗಡೆ ಮಾಡಿ ಅಭಿವೃದ್ಧಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ನಗರ ಸಭಾ ಸದಸ್ಯರಾದ ಕೆ ವಿಜಯ ಕೊವೂರು ಭ್ರಷ್ಟಾಚಾರವಿಲ್ಲದೆ ನಡೆಸಿದ ಅಭಿವೃದ್ಧಿ ಕಾರ್ಯವನ್ನು ಇಲ್ಲಿಯ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು.ಎಲ್ಲಾ ಕಾರ್ಯಕರ್ತರು ಸೇರಿಕೊಂಡು ದಯಾನಂದ ಕುಂದರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಪ್ರೇಮ ಗರ್ಡೇ ಮತ್ತು ವಾಸು ಆಚಾರ್ಯ ಹಾಗೂ ಗರ್ಡೇ ಪರಿಸರದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕರ್ತರ ಶಪಥದಿಂದ ಕೊಡವೂರಿನ ಅಭಿವೃದ್ಧಿಯಾಗಿದೆ ಎಂದು ಇಲ್ಲಿಯ ನಾಗರಿಕರು ತಿಳಿಸಿದರು.












Leave a Reply