ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಡ್ಡರ್ಸೆ-ಗ್ರಾಮೀಣ ಹಳ್ಳಿ ಭಾಗಕ್ಕೂ ಕಾಂಗ್ರೆಸ್ ಶಕ್ತಿ ಯೋಜನೆಗೆ ಚಾಲನೆ

ಕೋಟ: ರಾಜ್ಯದ  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರದ ಪ್ರಸಿದ್ಧ ಐದು ಗ್ಯಾರಂಟಿ  ಯೋಜನೆಗಳಲ್ಲಿ ಒಂದಾದ ರಾಷ್ಟ್ರೀಯ ಪ್ರಶಸ್ತಿ ಪಡೆದ ಶಕ್ತಿ ಯೋಜನೆ ಹಳ್ಳಿಹಳ್ಳಿಗೂ ವಿಸ್ತರಣೆಯಾಗುತ್ತಿದೆ.

ಈ ಹಿನ್ನಲ್ಲೆಯಲ್ಲಿ ಕುಂದಾಪುರದಿoದ ಕೋಟ, ವಡ್ಡರ್ಸೆ, ಸಾಹೇಬರ ಕಟ್ಟೆ, ಗೋಳಿಯಂಗಡಿ ಮಾರ್ಗವಾಗಿ ಮಂದರ್ತಿಗೆ ಸಂಚರಿಸುವ ಉಚಿತ ಸರಕಾರಿ ಬಸ್ಸಿನ ಉದ್ಘಾಟನಾ ಸಮಾರಂಭ ಸೋಮವಾರ ವಡ್ಡರ್ಸೆ ಬಸ್ ನಿಲ್ದಾಣದ ಹತ್ತಿರ ನಡೆಯಿತು.

ಉದ್ಘಾಟನೆಯನ್ನು ನೆರವೇರಿಸಿದ  ರಾಜ್ಯ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷೆ ಡಾ. ಬಿ ಪುಷ್ಪ ಅಮರನಾಥ್ ಮಾತನಾಡಿ ಕಾಂಗ್ರೆಸ್ ಸರಕಾರ ಜಾರಿಗೆ ತಂದ ನಿರುದ್ಯೋಗಿ ಗ್ರಾಮೀಣ ಪ್ರದೇಶದ ಬಡ ಜನರ ಬದುಕಿಗೆ ಆಸರೆಯಾಗಿದ್ದ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ಬದಲಾಯಿಸಿದ್ದೆ ಬಿಜೆಪಿ ಸರಕಾರದ ದೊಡ್ಡ ಸಾಧನೆ ಬಿಟ್ಟರೆ ಜನರಿಗೆ ಏನು ನೀಡಿದೆ? ಸುಳ್ಳುಗಳು ಎಲ್ಲಾ ಕಾಲಕ್ಕೂ ನಡೆಯಲಾರದು ಅದಕ್ಕೂ ಒಂದು ಅಂತ್ಯ ಇದ್ದೇ ಇದೆ ರಾಜ್ಯ ಸರಕಾರದ ಜನೋಪಯೋಗಿ ಯೋಜನೆಗಳು ಜನರ ಹಿತಕಾಯುವ ಯೋಜನೆಗಳಾಗಿ ಹೊರಹೊಮ್ಮಿವೆ ಎಂದರಲ್ಲದೆ, ಉಡುಪಿ ದಕ್ಷಿಣ ಕನ್ನಡ ಜಿಲ್ಲೆ ಬುದ್ದಿವಂತರ ಜಿಲ್ಲೆ ಅಂತ ಕೇಳಿದ್ದೇನೆ. ಆದ್ದರಿಂದ ಮುಂದಿನ ದಿನಗಳಲ್ಲಿ ಬಿಜೆಪಿಯ ಸುಳ್ಳುಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ, ಸರಕಾರದ  ಯೋಜನೆಗಳನ್ನು ಸದುಪಯೋಗಪಡಿಸಿ ಕೊಳ್ಳುವುದರ ಜೊತೆಗೆ ಕಾಂಗ್ರೆಸ್ ಸರಕಾರಕ್ಕೆ ತಮ್ಮೆಲ್ಲರ ಬೆಂಬಲ ಸದಾ ಇರಬೇಕು ಎಂದರು.

ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಅಶೋಕ್ ಕುಮಾರ್ ಕೊಡವೂರು, ಡಾ. ಸುನೀತಾ ಶೆಟ್ಟಿ, ವಡ್ಡರ್ಸೆ ಪಂಚಾಯತ್ ಅಧ್ಯಕ್ಷ ಲೋಕೇಶ್ ಕಾಂಚನ್, ರೇಖಾ ಸುವರ್ಣ, ಅಜಿತ್ ಶೆಟ್ಟಿ, ಶ್ರೀನಿವಾಸ್ ವಡ್ಡರ್ಸೆ, ಚಂದ್ರ ಶೆಟ್ಟಿ ಯಾಳ್‌ಹಕ್ಲು, ಸುಕುಮಾರ್ ಶೆಟ್ಟಿ ಕಾವಡಿ, ಶೇಖರ್ ಶೆಟ್ಟಿ ಯಾಳ್‌ಹಕ್ಲು, ಭಾಸ್ಕರ್ ಪೂಜಾರಿ ಬನ್ನಾಡಿ, ಗಣೇಶ್ ಕೊತ್ತಾಡಿ, ಮಹಿಳೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *