ಕೋಟ: ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾಗಿರಿ, ತೆಕ್ಕಟ್ಟೆ ಇಲ್ಲಿ ವಾರ್ಷಿಕೋತ್ಸವ ಬಹುಮಾನ ವಿತರಣಾ ಕಾರ್ಯಕ್ರಮ ಸೋಮವಾರ ಶಾಲಾ ಸಭಾಂಗಣದಲ್ಲಿ ಜರಗಿತು.
ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಅನಂತ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿ ಜೀವನದ ಅವಿಸ್ಮರಣೀಯ ಸಂಭ್ರಮದ ಕ್ಷಣ, ನೆನಪಿನ ಬುತ್ತಿಯಲ್ಲಿ ಉಳಿದು ಜೀವನದ ಅತ್ಯುತ್ತಮ ಸಾಧನೆಗೆ ಪೂರಕವಾಗುವ, ಪ್ರಚೋದನೆಗೆ ಒಳಗಾಗುವ ಮೂಲಕ ಸಾಧಕನಾಗಲು ಸ್ಪೂರ್ತಿ ತುಂಬುವ ಕಾರ್ಯಕ್ರಮ ಎಂದರು.
ಮುಖ್ಯ ಅತಿಥಿಗಳಾಗಿ ಕೋಟೇಶ್ವರ ಇಲ್ಲಿನ ಲೆಕ್ಕಪರಿಶೋಧಕ ಸಿ.ಎ ಭಾರತೀಶ ಉಪಾಧ್ಯ ಕೋಟೇಶ್ವರ, ಸಿದ್ಧಿ ವಿನಾಯಕ ಕ್ಯಾಶ್ಯೂ ಕೆದೂರು ಇದರ ಮಾಲಿಕ ಅರುಣ್ ಕುಮಾರ್ ಶೆಟ್ಟಿ ಹಾಗೂ ರೋಟರಿ ಕ್ಲಬ್ ತೆಕ್ಕಟ್ಟೆ ಮಲ್ಯಾಡಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಇವರು ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದು, ಮುಖ್ಯೋಪಾಧ್ಯಾಯರಾದ ಹರ್ಷ ಕೋಟೇಶ್ವರ ಸ್ವಾಗತಿಸಿ, ಶಿಕ್ಷಕಿ ಜಯಲಕ್ಷ್ಮೀ ವಂದಿಸಿದರೆ, ಶ್ರುತಿ ಕಾರ್ಯಕ್ರಮ ನಿರೂಪಿಸಿದರು.
ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾಗಿರಿ, ತೆಕ್ಕಟ್ಟೆ ಇಲ್ಲಿ ವಾರ್ಷಿಕೋತ್ಸವ ಬಹುಮಾನ ವಿತರಣಾ ಕಾರ್ಯಕ್ರಮ ಸೋಮವಾರ ಶಾಲಾ ಸಭಾಂಗಣದಲ್ಲಿ ಜರಗಿತು. ಕೋಟೇಶ್ವರ ಇಲ್ಲಿನ ಲೆಕ್ಕಪರಿಶೋಧಕ ಸಿ.ಎ ಭಾರತೀಶ ಉಪಾಧ್ಯ ಕೋಟೇಶ್ವರ, ಸಿದ್ಧಿ ವಿನಾಯಕ ಕ್ಯಾಶ್ಯೂ ಕೆದೂರು ಇದರ ಮಾಲಿಕ ಅರುಣ್ ಕುಮಾರ್ ಶೆಟ್ಟಿ ಹಾಗೂ ರೋಟರಿ ಕ್ಲಬ್ ತೆಕ್ಕಟ್ಟೆ ಮಲ್ಯಾಡಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಇದ್ದರು.












Leave a Reply