ಕೋಟ: ಪಡುಕರಾವಳಿ ಜಿಲ್ಲೆಯ ನಡುಪ್ರಾಂತ ದೇವರನಾಡು ಉಡುಪಿ ಜಿಲ್ಲೆಯ ಶಿಕ್ಷಣ ಕಾಶಿ ಎಂದು ಜನಜನಿತವಾದ ತ್ರಿವಳಿ ವಿದ್ಯಾ ಕ್ಷೇತ್ರದಲ್ಲಿ ಮಕ್ಕಳ ವಾರ್ಷಿಕ ಹಬ್ಬ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ ಎಂದು ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಪ್ರವರ್ತಕ ಆನಂದ ಸಿ ಕುಂದರ್ ಪ್ರಶಂಸೆ ವ್ಯಕ್ತಪಡಿಸಿದರು
ಅವರು ಡಿ.11,12ರಂದು ಕೋಟ ಮಣೂರು ಪಡುಕರೆ ಸರಕಾರಿ ಪದವಿಪೂರ್ವ ಕಾಲೇಜು,ಪ್ರೌಢಶಾಲೆ,ಪ್ರಾಥಮಿಕ ಶಾಲೆ ಇಲ್ಲಿ ಎರಡು ದಿನಗಳು ಕಾಲ ನಡೆದ ವಾರ್ಷಿಕೋತ್ಸವ ವಾರಿಧಿ ಸನ್ಮಾನ,ಪ್ರತಿಭಾ ಪುರಸ್ಕಾರ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಣ ಎನ್ನುವುದು ಜ್ಞಾನಗಳಿಕೆಯೊಂದಿಗೆ ಸರ್ವಾಂಗೀಣ ವ್ಯಕ್ತಿತ್ವ ವಿಕಾಸದ ಮೂಲ ನೆಲೆ ಎನ್ನುವುದು ಶಾಲೆ ಗುರುಶಿಷ್ಯರ ಸಂಬoಧ ಗಟ್ಟಿಗೊಳಿಸುವಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು , ಸಂಯಮ, ಪ್ರಾಮಾಣಿಕತೆ , ಗುರುಹಿರಿಯರಲ್ಲಿ ಪ್ರೀತಿ , ಗೌರವದ, ಭಾವನೆ, ಮಾನವೀಯ ಮೌಲ್ಯ ಅಗತ್ಯ ಎಂದು ಬಹುಮಾನ ವಿತರಿಸಿ ನುಡಿದರು.
ರಾಜ್ಯ ಉತ್ತಮ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಮಾತನಾಡಿ ಮಕ್ಕಳ ವಿಕಸಿತ ಬದುಕಿನಲ್ಲಿ ಶಿಕ್ಷಣ ಅತ್ಯಗತ್ಯ ಎಂಬುದನ್ನು ಐದು ಬದುಕಿಗೆ ಹತ್ತಿರವಾದ ಕಥೆಗಳನ್ನು ಹೇಳುವುದರ ಮೂಲಕ ತಾನು ಕಲಿತ ಪ್ರೌಢಶಾಲೆ ಮೊದಲು ಆರಂಭಗೊoಡ ಪ್ರಾರಂಭದ ಬ್ಯಾಚಿನ ವಿದ್ಯಾರ್ಥಿ ಎಂದು ಶಿಕ್ಷಕ-ವಿದ್ಯಾರ್ಥಿಯ ಸಂಬoಧದ ಬಗ್ಗೆ ವಿವರವಾಗಿ ತಿಳಿಸಿದರು.
ಇದೇ ಸಂದಭ9ದಲ್ಲಿ ಉಡುಪಿ ಜಿಲ್ಲಾ ಶಾಲಾಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಲೋಕೇಶ ಇವರನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ವಿಭಾಗದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಭೆಯಲ್ಲಿ ಡಯೆಟ್ ಪ್ರಾಂಶುಪಾಲ ಅಶೋಕ ಕಾಮತ್, ವಾಹಿನಿ ಯುವಕ ಮಂಡಲ ಅಧ್ಯಕ್ಷ ರಮೇಶ್ ಕುಂದರ್, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಮಾರುತಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪ್ರೌಢ ವಿಭಾಗದ ಅಧ್ಯಕ್ಷ ನಾಗರಾಜ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪ್ರಾಥಮಿಕ ವಿಭಾಗ ಅಧ್ಯಕ್ಷ ವಿನಯ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಹುಮಾನ ವಿಜೇತರು ಪದವಿಪೂರ್ವ ವಿಭಾಗದಲ್ಲಿ ಡಾ. ಸಹನಾ, ಸತ್ಯನಾರಾಯಣ, ರತ್ನ, ಇವರು ವಾಚಿಸಿದರು. ಪ್ರೌಢ ವಿಭಾಗದಲ್ಲಿ ಶಿಕ್ಷಕರಾದ ರೂಪ, ರಾಜು, ಚಂದ್ರಶೇಖರ ವಿದ್ಯಾರ್ಥಿಗಳ ಸಾಧನೆಯ ಕುರಿತು ವಿವಿವಿಧ ವಿಭಾಗ ಸ್ಪರ್ಧೆಗಳ ಪಟ್ಟಿ ವಾಚಿಸಿದರು. ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ಪದವಿ ಪೂರ್ವ ವಿಭಾಗ ಮಣೂರು ಪಡುಕರೆ ಪ್ರಾಂಶುಪಾಲ ಡೆನ್ನಿಸ್ ಬಾಂಜಿ ಕೆ ಪ್ರಾಸ್ತಾವನೆಗೈದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ವಿವೇಕಾನಂದ ವಿ ಗಾಂವಕಾರ ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಮಂಜುನಾಥ ಹೊಳ್ಳ ವಂದಿಸಿದರು.
ಡಿ.11,12ರoದು ಕೋಟ ಮಣೂರು ಪಡುಕರೆ ಸರಕಾರಿ ಪದವಿಪೂರ್ವ ಕಾಲೇಜು,ಪ್ರೌಢಶಾಲೆ,ಪ್ರಾಥಮಿಕ ಶಾಲೆ ಇಲ್ಲಿ ಎರಡು ದಿನಗಳು ಕಾಲ ನಡೆದ ವಾರ್ಷಿಕೋತ್ಸವ ವಾರಿಧಿ ಸನ್ಮಾನ,ಪ್ರತಿಭಾ ಪುರಸ್ಕಾರ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಪ್ರವರ್ತಕ ಆನಂದ ಸಿ ಕುಂದರ್ ಉದ್ಘಾಟಿಸಿದರು. ರಾಜ್ಯ ಉತ್ತಮ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ,ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಮಾರುತಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪ್ರೌಢ ವಿಭಾಗದ ಅಧ್ಯಕ್ಷ ನಾಗರಾಜ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪ್ರಾಥಮಿಕ ವಿಭಾಗ ಅಧ್ಯಕ್ಷ ವಿನಯ್ ಕುಮಾರ್ ಇದ್ದರು.












Leave a Reply