ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಯಕ್ಷದೇಗುಲ  ಪ್ರಶಸ್ತಿ – 2025 ಮತ್ತು ಮಕ್ಕಳ “ಏಕಲವ್ಯ ಮತ್ತು ರತ್ನಾವತಿ ಕಲ್ಯಾಣ” ಯಕ್ಷಗಾನ ಪ್ರದರ್ಶನ

ಕೋಟ: ಕಳೆದ 45 ವರ್ಷದಿಂದ ಬೆಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಸದಾ ಚಟುವಟಿಕೆಯಿಂದಿರುವ ಕೆ. ಮೋಹನ್ ನಿರ್ದೇಶನದ ಬೆಂಗಳೂರಿನ ಯಕ್ಷದೇಗುಲ ತಂಡ ಪ್ರತೀ ವರ್ಷ ಯಕ್ಷಗಾನದ ಸಾಧಕರೊಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಈವರೆಗೇ 30 ಕಲಾವಿದರು ಯಕ್ಷದೇಗುಲ ಪ್ರಶಸ್ತಿಗೆ ಭಾಜಕರಾಗಿದ್ದಾರೆ.

ಪ್ರಸ್ತುತ ಡಿ.25ರಂದು ಸಂಜೆ 4ಕ್ಕೆ ಬೆಂಗಳೂರಿನ ಡಾ.ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೋನಿ ಬಸವನ ಗುಡಿಯಲ್ಲಿ ಯಕ್ಷಗಾನದ ಎಲ್ಲಾ ಅಂಗಗಳಲ್ಲೂ ಜ್ಞಾನ ಹೊಂದಿರುವ ಹಾಗೂ ಯಕ್ಷ ಶಿಕ್ಷಣದ ಗುರುಗಳಾಗಿ ಖ್ಯಾತಿ ಪಡೆದಿರುವ , ಕಳೆದ ಐವತ್ತು ವರ್ಷಗಳಿಂದ ಯಕ್ಷ ಶಿಕ್ಷಣದ ಗುರುಗಳಾಗಿ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಖ್ಯಾತಿ ಪಡೆದು, ಯಕ್ಷ ಕಲೆಯ ಕುರಿತಾದ ಸಮಗ್ರ ಜ್ಞಾನವನ್ನು ಹೊಂದಿದ ಇವರು ಅನೇಕ ವಿಚಾರ ಸಂಕಿರಣ, ಕಮ್ಮಟಗಳಲ್ಲಿ ಭಾಗವಹಿಸುವ ಮೂಲಕ ಯಕ್ಷಕಲೆಯ ಸಮರ್ಥ ನಿರ್ದೇಶಕರಾದ ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳರನ್ನು ಯಕ್ಷದೇಗುಲ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ, ನಂತರ ತನ್ನ ಚಿಕ್ಕ ವಯಸ್ಸಿನಲ್ಲೇ ಯಕ್ಷಗಾನದಲ್ಲಿ ಪರಿಣಿತಿ ಪಡೆದು ಕೇವಲ ಕಲಾವಿದೆಯಾಗಿ ತನ್ನ ಕಲಾವಂತಿಕೆಗೆ ಸೀಮಾರೇಖೆ ಎಳೆದುಕೊಳ್ಳದೆ ಕಲಿತ ಕಲೆಯು ಸಾವಿರ ಸಾವಿರ ಚಿಗುರೊಡೆಯಬೇಕೆಂಬ ಧ್ಯೇಯ ಅವರನ್ನು ಗುರುವನ್ನಾಗಿ ರೂಪಿಸಿ ಮಹಾನಗರದ ಸಾವಿರಾರು ಚಿಣ್ಣರು, ಮಹಿಳೆಯ, ವಿದೇಶಿ ಪ್ರಜೆಗಳು, ಉದ್ಯೋಗಿಗಳು ಆಸ್ಟೆçÃಲಿಯಾ ಕ್ರಿಕೆಟಿಗರು ಹೀಗೆ ಅಸಂಖ್ಯಾರಿಗೆ ಯಕ್ಷಕಲೆ ಕಲಿಸಿದ, ದೇಶದ ಅತ್ಯುತ್ತಮ ಮಹಿಳಾ ಯಕ್ಷಗಾನ ನೃತ್ಯಗಾರ್ತಿ ಎಂಬ ಖ್ಯಾತಿಗೆ ಪಾತ್ರರಾದ ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ 70 ಮಕ್ಕಳಿಂದ “ಏಕಲವ್ಯ ಮತ್ತು ರತ್ನಾವತಿ ಕಲ್ಯಾಣ” ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಸೂಕ್ಷö್ಮ, ಸಣ್ಣ ಮತ್ತು ಮದ್ಯಮ ಉದ್ಯಮಿಗಳ ಸಚಿವಾಲಯದ ರಾಜ್ಯ ಸಚಿವಾಲಯದÀ ಕವಿತಾ ಎಸ್. ಗೌಡ (ಕೆ.ಎ.ಎಸ್.), ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಬೆಂಗಳೂರು ನಗರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ, ಯಕ್ಷಗಾನ ವಿದ್ವಾಂಸರಾದ ಡಾ. ಆನಂದರಾಮ ಉಪಾಧ್ಯ ಮತ್ತು ಸಿಂಗಾರ ಸಾಧನ ಪುರಸ್ಕೃತರಾದ ಉದ್ಯಮಿ ವೈಕುಂಠ ನಕ್ಷತ್ರಿ ಸಿಂಗಾಪುರ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಂತರ ನಡೆಯುವ ಯಕ್ಷಗಾನದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಲಂಬೋದರ ಹೆಗಡೆ ನಿಟ್ಟೂರು, ಪ್ರಸನ್ನ ಭಟ್, ಮದ್ದಲೆಯಲ್ಲಿ ಸಂಪತ್ ಕುಮಾರ್, ಚಂಡೆವಾದನದಲ್ಲಿ ಸುದೀಪ ಉರಾಳರವರು ಭಾಗವಹಿಸಲಿದ್ದಾರೆಂದು ಯಕ್ಷದೇಗುಲದ ಅಧ್ಯಕ್ಷರಾದ ಬಾಲಕೃಷ್ಣ ಭಟ್‌ರು ಸುದ್ಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *