ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ- ಪಟ್ಟಣ ಪಂಚಾಯತ್ ವತಿಯಿಂದ ಒಂದು ದಿನ ಒಂದು ಗಂಟೆ ವಿನೂತನ ಸ್ವಚ್ಛತಾ ಅಭಿಯಾನ

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್,ಆಶ್ರೀತ್ ನರ್ಸಿಂಗ್ ಕಾಲೇಜ್ ಕೋಟ ಆಶ್ರಯದಲ್ಲಿ ಸ್ವಚ್ಛತಾ ಹೀ ಸೇವಾ-2025ರ ಪ್ರಯುಕ್ತ ಒಂದು ದಿನ ಒಂದು ಗಂಟೆ  ಎಂಬ ಸ್ವಚ್ಛತಾ ಅಭಿಯಾನದ ಘೋಷಣೆಯಡಿಯಲ್ಲಿ ಶ್ರಮದಾನ ಕಾರ್ಯಕ್ರಮ ಗುರುವಾರ ಜರಗಿತು.

ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಚಿತ್ರಪಾಡಿ ಗ್ರಾಮದ ಕೋಟ ಮೂರುಕೈ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜೆ ಶೆಟ್ಟಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣಪಂಚಾಯತ್  ಸದಸ್ಯರಾದ ಶ್ಯಾಮಸುಂದರ್ ನಾಯರಿ , ಗೆಳೆಯರ ಬಳಗ ಕಾರ್ಕಡ ಸಾಲಿಗ್ರಾಮ ಅಧ್ಯಕ್ಷ ಕೆ.ತಾರನಾಥ ಹೊಳ್ಳ  ,ಪಟ್ಟಣ ಪಂಚಾಯತ್‌ನ  ಕಿರಿಯ ಆರೋಗ್ಯ ನಿರೀಕ್ಷಕಿ ಮಮತಾ, ಪ್ರಭಾರ ಕಂದಾಯ ನಿರೀಕ್ಷಕ ಚಂದ್ರಶೇಖರ ಸೋಮಯಾಜಿ ಮತ್ತು ಆಶ್ರಿತ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಪಟ್ಟಣ ಪಂಚಾಯತ್  ಸಿಬ್ಬಂದಿ ವರ್ಗ  ಹಾಗೂ ಪೌರಕಾರ್ಮಿಕರು ಹಾಗೂ ಸಾರ್ವಜನಿಕರು  ಇದ್ದರು.

ಅಭಿಯಾನದಲ್ಲಿ ಮಾನವಿಯತೆ ಮರೆದ ಪೌರಕಾರ್ಮಿಕ
ಸ್ವಚ್ಛತಾ ಅಭಿಯಾನದಲ್ಲಿ  ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಪೌರಕಾರ್ಮಿಕ ಸುರೇಶ್ ಬಿ. ಇವರಿಗೆ ಅಂದಾಜು 2 ಪವನ್  ಮೌಲ್ಯದ ಚಿನ್ನಾಭರಣ  ರಸ್ತೆಯಲ್ಲಿ ದೊರಕಿದ್ದು ಚಿನ್ನಾಭರಣದ ಮಾಲಿಕರಾದ ಚಿತ್ರಪಾಡಿ ಗ್ರಾಮದ ವೆಂಕಟೇಶ  ನಾಯರಿ ಇವರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದರು.

ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಚಿತ್ರಪಾಡಿ ಗ್ರಾಮದ ಕೋಟ ಮೂರುಕೈ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜೆ ಶೆಟ್ಟಿ ಚಾಲನೆ ನೀಡಿದರು. ಪಟ್ಟಣ ಪಂಚಾಯತ್  ಸದಸ್ಯರಾದ ಶ್ಯಾಮಸುಂದರ್ ನಾಯರಿ , ಗೆಳೆಯರ ಬಳಗ ಕಾರ್ಕಡ ಸಾಲಿಗ್ರಾಮ ಅಧ್ಯಕ್ಷ ಕೆ.ತಾರನಾಥ ಹೊಳ್ಳ  ,ಪಟ್ಟಣ ಪಂಚಾಯತ್‌ನ  ಕಿರಿಯ ಆರೋಗ್ಯ ನಿರೀಕ್ಷಕಿ ಮಮತಾ ಇದ್ದರು.

Leave a Reply

Your email address will not be published. Required fields are marked *