ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರ ಉದ್ಯೋಗ ನೇಮಕಾತಿಯ ಆಡಿಯೋ ಈಗಾಗಲೇ ರಾಜ್ಯ ಮಟ್ಟದಲ್ಲಿ ಸದ್ದು ಮಾಡಿದ್ದು ಜಿಲ್ಲಾದ್ಯಾಂತ ಈ ಬಗ್ಗೆ ಸೂಕ್ತ ತನಿಖೆಗೆ ಅನೇಕ ಹಿರಿಯರು ಆಗ್ರಹಿಸಿರುತ್ತಾರೆ. ಬೀಜಾಡಿ ಮೀನುಗಾರರ ಸಹಕಾರಿ ಸಂಘವು ಉದ್ಯೋಗ ನೀಡುವ ಬಗ್ಗೆ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸೇರಿ ಜಂಟಿ ಜಾಹೀರಾತನ್ನು ಹೊರಡಿಸಿ ರಾಜ್ಯಾದ್ಯಂತ ಅನೇಕ ಉದ್ಯೋಗ ಆಕಾಂಕ್ಷಿಗಳಿಗೆ ಕೆಲಸ ಕೊಡಿಸುವ ಒಂದು ಉದ್ದೇಶವನ್ನು ಇರಿಸಲಾಗಿತ್ತು.ಬೀಜಾಡಿ ಮುಖ್ಯ ಕಚೇರಿ ಅಕ್ಕಪಕ್ಕದಲ್ಲಿ ಸಹಸ್ರಾರು ಓದಿದ ನಿರುದ್ಯೋಗಿಗಳಿದ್ದರೂ ಕೂಡ ಈ ಜಾಹೀರಾತು ರಾಜ್ಯ ಮಟ್ಟದಲ್ಲಿ ಯಾಕೆ? ಪ್ರಕಟಿಸಿದ್ದಾರೆ ಎಂದು ಸ್ಥಳೀಯ ಸದಸ್ಯರು ಇಂದಿಗೂ ಒಳಗಿಂದ ಒಳಗೆ ಅಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಬೇರೆ ಬೇರೆ ಭಾಗದ ಸಂಘದ ಸದಸ್ಯರು ಕೂಡ ಈ ಮೊದಲೇ ಅಲ್ಲಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಸ್ಥಳೀಯ ಸದಸ್ಯರ ವಿರೋಧದ ನಡುವೆಯೂ ಕೂಡ ಈ ಜಾಹೀರಾತು ರಾಜ್ಯ ಮಟ್ಟದಲ್ಲಿ ಸದ್ದು ಮಾಡಿ ಅನೇಕ ಉದ್ಯೋಗ ಆಕಾಂಕ್ಷಿಗಳು ಅರ್ಜಿ ಪಡೆದು ಉದ್ಯೋಗಕ್ಕಾಗಿ ಅರ್ಜಿಯನ್ನು ಸಲ್ಲಿಸುವಂತೆ ಕಾರಣವಾದದ್ದು ಕ್ಷಣ ಕ್ಷಣಕ್ಕೂ ಕೂತುಹಲ ಮೂಡಿಸಿತ್ತು. 85% ಪರೀಕ್ಷೆ ಮೂಲಕ 15% ಮೌಖಿಕವಾಗಿ ಅಂಕ ನೀಡುವುದೆಂದು ಇವರೇ ಜಾಹೀರಾತು ಮೂಲಕ ಹೇಳಿಕೆ ಹೊರಡಿಸಿದ್ದರು. ಆದರೆ ಎಲ್ಲಿಯೂ ಯಾವ ರೀತಿಯ ಸಂಬಳ ಇದೆ ಎಂದು ಜಾಹೀರಾತಿನಲ್ಲಿ ದಾಖಲಾಗಿಲ್ಲ!.

ಬೀಜಾಡಿ ಮೀನುಗಾರರ ಸಹಕಾರಿ ಸಂಘ ಬೀಜಾಡಿಯ ಮುಖ್ಯ ಕಚೇರಿ ಸೇರಿದಂತೆ ವಡೇರಹೋಬಳಿ, ಕೋಟೇಶ್ವರ, ಹುಣ್ಸಮಕ್ಕಿ ಮತ್ತು ತೆಕ್ಕಟ್ಟೆ ಹೀಗೆ ಮತ್ತೆ ಒಟ್ಟು ನಾಲ್ಕು ಶಾಖೆಗಳಿದೆ.ಹೀಗೆ ಅಂಬೆಗಾಲಿಡುತ್ತಿದ್ದ* ಸಹಕಾರಿ ಸಂಘ ಅನೇಕ ಶಾಖೆಗಳ ಮೂಲಕ ಇನ್ನಷ್ಟು ಸೇವೆಯನ್ನು ವಿಸ್ತಾರ ಮಾಡಿಕೊಳ್ಳುತ್ತಿತ್ತು.ಬೀಜಾಡಿ ಮೀನುಗಾರರ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಬಿಜೆಪಿ ಬೆಂಬಲಿತ ಶ್ರೀ ಮಂಜುನಾಥ ಕುಂದರ್. ಈ ಬಾರಿ ಇಲ್ಲಿ ಚುನಾವಣೆಯಾಗದೆ ಬಿಜೆಪಿ ಮತ್ತು ಕಾಂಗ್ರೆಸ್ ಹೊಂದಾಣಿಕೆಯ ನಡೆಯನ್ನು ಅನುಸರಿಸಿತ್ತು. ಬಿಜೆಪಿಯ ಬೆಂಬಲಿತ ಪಡೆಗೆ ಮಂಜುನಾಥ್ ಕುಂದರ್ ಇವರು ನಾಯಕತ್ವ ವಹಿಸಿದರೆ ಕಾಂಗ್ರೆಸ್ ಬೆಂಬಲಿತ ಪಡೆಗೆ ಅಶೋಕ್ ಪೂಜಾರಿ ಇವರು ನಾಯಕತ್ವ ವಹಿಸಿದ್ದರು.
ಎರಡು ವರ್ಷಕ್ಕೂ ಅಧಿಕವಾಗಿ ಬೀಜಾಡಿ ಗ್ರಾಮ ಪಂಚಾಯಿತಿಯನ್ನು ಅಧ್ಯಕ್ಷರಾದ ಶ್ರೀಮತಿ ಸುಮತಿ ಜೊತೆ ಸೇರಿ ನಿಭಾಯಿಸಿ ಕೊನೆಗೆ ಪ್ರಕಾಶ್ ಪೂಜಾರಿಯವರ ಹೆಗಲಿಗೆ ಏರಿಸಿದ ಮಂಜುನಾಥ್ ಕುಂದರ್ ಇವರು ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಹಕಾರಿ ಸಂಘಕ್ಕೆ ಸಂಬಂಧಿತ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತನ್ನನ್ನ ತಾನು ಬಿಜೆಪಿ ಪಕ್ಷದ ಆಣತಿಯಂತೆ ತೊಡಗಿಸಿಕೊಂಡಿದ್ದರು.
ಈ ಹಿಂದಿನಿಂದಲೂ ಕೂಡ ಈ ಭಾಗದಲ್ಲಿ ಪ್ರತಿಯೊಂದು ಸಾರ್ವಜನಿಕ ಕೆಲಸ ಕಾರ್ಯಗಳ ಬಗ್ಗೆ ಮತ್ತು ಸಾಮಾಜಿಕ ಸೇವೆಗಳ ಬಗ್ಗೆ ಏನಾದರೂ ತೊಂದರೆಗಳು ಕಂಡು ಬಂದಲ್ಲಿ ಶ್ರೀನಿವಾಸ* ಕುಂದರ್ ಇವರು ಸಾರ್ವಜನಿಕವಾಗಿ ಲೆಕ್ಕಾಚಾರದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತುತ್ತಿದ್ದರು. ಕೆಲವು ಬಾರಿ ಶ್ರೀನಿವಾಸ್ ಕುಂದರ್ ಅವರು ಸಾರ್ವಜನಿಕವಾಗಿ ಕೆಲವು ಪ್ರಶ್ನೆಗಳನ್ನು ಕೇಳಿದಾಗ ಹೆಚ್ಚಿನವರು ತಬ್ಬಿಬ್ಬಾಗಿ ಘರ್ಷಣೆಗಳು ನಡೆಯುತ್ತಿರುವುದು ಸರ್ವೆಸಾಮಾನ್ಯವಾಗಿರುತ್ತದೆ.
ಆದರೆ ಈ ಬಾರಿ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಉದ್ಯೋಗ ನೇಮಕಾತಿಯ ಜಾಹೀರಾತು ಸಂಘದ ಸ್ಥಳೀಯ ಅನೇಕ ಸದಸ್ಯ ರಲ್ಲಿ ಬೇಸರ ಉಂಟು ಮಾಡಿತ್ತು.ಬೀಜಾಡಿ ಮುಖ್ಯ ಕಾರ್ಯಾಲಯದ ಪರಿಸರದಲ್ಲಿಯೇ ಹಲವಾರು ಯುವ ಉದ್ಯೋಗ ಆಕಾಂಕ್ಷಿಗಳು ಇರುವಾಗ ರಾಜ್ಯ ಮಟ್ಟದ ಜಾಹೀರಾತು ಭಾರೀ ಕೂತುಹಲ ಕೆರಳಿಸಿತ್ತು. ಸ್ಥಳೀಯರು ಇಂದಿಗೂ ಆಕ್ರೋಶ ವ್ಯಕ್ತಪಡಿಸುವಂತೆ ಈ ಹಿಂದಿನ ಕೆಲಸದ ನೇಮ ಕಾತಿಯಲ್ಲಿಯೂ ಕೂಡ ಪಾರದರ್ಶಕತೆಯ ಕೊರತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಆದರೆ ಈ ಬಾರಿ ಸಂಘದ ಅಧ್ಯಕ್ಷರಾದ ಮಂಜುನಾಥ ಕುಂದರ್ ಇವರದ್ದು ಎನ್ನಲಾದಂತಹ ಬ್ರಹ್ಮಾಂಡ ಭ್ರಷ್ಟಾಚಾರದ ಆಡಿಯೋದ ಬಗ್ಗೆ ಸಂಘದ ಕಾಂಗ್ರೆಸ್ಸಿನ ಬೆಂಬಲಿತ ನಿರ್ದೇಶಕರುಗಳೇ ಅವಿಶ್ವಾಸ ನಿರ್ಣಯ ಕೈಗೊಳ್ಳುವ ಬಗ್ಗೆ AR/DR ರವರಿಗೆ ಲಿಖಿತ ವಾಗಿ ತಿಳಿಸಿದ್ದು ಅದರಂತೆ 7/2025 ಕ್ಕೆ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷರು ಎಲ್ಲಾ ನಿರ್ದೇಶಕರ ಬೆಂಬಲ ಪಡೆಯಲೇ ಬೇಕಾಗಿರುತ್ತದೆ. ಸದಾ ಕಾಂಗ್ರೆಸ್ಸಿನ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿ ಈ ಬೀಜಾಡಿಯಲ್ಲಿ ಮೌನ ಆಗಿರುವ ಬಗ್ಗೆ ಅನೇಕ ಸದಸ್ಯರ ಆಕ್ರೋಶ ಇದೆ.

ಇಲ್ಲಿ ಕೌತುಕ ಎಂದರೆ ಒಂದೊಮ್ಮೆ ವಿಶ್ವಾಸದ ಮತ ನಿರ್ಣಯ ಆಗದೆ ಹೋದರೆ ಅಧ್ಯಕ್ಷರಾದ ಮಂಜುನಾಥ ಕುಂದರ್ ರವರ ರಾಜೀನಾಮೆ ಅನಿವಾರ್ಯ ಆಗುತ್ತದೆ. ಒಂದು ಮೂಲದ ಪ್ರಕಾರ ಮಂಜುನಾಥ ಕುಂದರ್ ರಾಜೀನಾಮೆ ಬಗ್ಗೆ ಪಕ್ಷದ ಒಳಗೆ ಒತ್ತಡ ಇದ್ದರೂ ತಾನು ಜಪ್ಪಯ್ಯಾ ಎಂದರೂ ರಾಜೀನಾಮೆ ಕೊಡುವುದಿಲ್ಲ ಎಂದು ತಿಳಿಸಿರುತ್ತಾರೆ. ರಾಜೀನಾಮೆ ನೀಡಲು ಅಧ್ಯಕ್ಷರು ಅಲ್ಲಗಳೆದಾಗ ಕಾಂಗ್ರೆಸ್ಸು ಆಗ್ರಹಿಸಿದ ವಿಶ್ವಾಸ ಗೊತ್ತುವಳಿ ಸಭೆಗಾಗಿ ಎಲ್ಲಾ ಸದಸ್ಯರ ಹಾಗೂ ನಿರ್ದೇಶಕರ ಚಿತ್ತ ಕಾಯುತ್ತಿದೆ.
ಈ ಭ್ರಷ್ಟಾಚಾರದ ಹಣದ 10ಲಕ್ಷ ಬೇಡಿಕೆಯ ಆಡಿಯೋ ವೈರಲ್ ಆದ ಬೆನ್ನಿಗೆ ಸಂಘದ ಹಿರಿಯ ಸದಸ್ಯರು ಅಧ್ಯಕ್ಷರ ರಾಜೀನಾಮೆ ಮತ್ತು ಆಡಿಯೋದ ಸತ್ಯ ಸತ್ಯಾ ತೆಯ ಬಗ್ಗೆ ಆಗ್ರಹಿಸಿದ್ದರು.ಸಹಕಾರಿ ಸಂಘದ ಬೈಲಾ ತಿಳುವಳಿಕೆ ಬಗ್ಗೆ ನೋಡುವಾಗ ಉದ್ಯೋಗ ನೇಮಕಾತಿ ಸ್ಥಳೀಯರಿಗೆ ನೀಡುವುದು ಸರಿಯಾದ ಕ್ರಮ ಆದರೆ ಇವರು ಇನ್ನೂ ಸರಿಯಾಗಿ ಉಡುಪಿ ಜಿಲ್ಲೆಯಿಂದ ಬೇರೆ ಜಿಲ್ಲೆಯಲ್ಲಿ ಒಂದು ಕಚೇರಿಯನ್ನೂ ತೆರೆಯದೆ ಉದ್ಯೋಗ ನೇಮಕಾತಿಯ ಬಗ್ಗೆ ರಾಜ್ಯ ಮಟ್ಟದ ಜಾಹೀರಾತು ಸಂಶಯಕ್ಕೆ ನಾಂದಿಯಾಯಿತು . ಸುಮಾರು 10 ಕ್ಕೂ ಅಧಿಕ ಯುವ ಉದ್ಯೋಗ ಆಕಾಂಕ್ಷಿಗಳು ಈ ಮೊದಲೇ ಮೌಖಿಕವಾಗಿ ಉದ್ಯೋಗ ಅವಕಾಶಕ್ಕಾಗಿ ಪ್ರಯತ್ನ ಪಟ್ಟಿದ್ದರು.ಆದರೆ ಸ್ಥಳೀಯ ಯುವ ಉದ್ಯೋಗ ಆಕಾಂಕ್ಷಿಗಳಿಗೆ ಯಾಕೆ ಉದ್ಯೋಗ ನೇಮಕಾತಿ ಆಗಿಲ್ಲ ಎಂಬುವುದನ್ನು AR/DR/ಸಂಘದ ಅಧ್ಯಕ್ಷರು/ಮುಖ್ಯ ಕಾರ್ಯನಿರ್ವಹಣಾಧಿಕಾರಿ/ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಅಶೋಕ್ ಪೂಜಾರಿಯವರೇ ಈ ಉದ್ಯೋಗ ನೇಮಕಾತಿಯ ಬಗ್ಗೆ ಉತ್ತರಿಸಬೇಕು. ಇಲ್ಲದೆ ಹೋದರೆ ಆಡಿಯೋದ ಸತ್ಯಾ ಸತ್ಯತೆಯು ಅಡಗಿ ಹೋಗುತ್ತದೆ.
ಅಧ್ಯಕ್ಷರಾದ ಮಂಜುನಾಥ ಕುಂದರ್ ಭ್ರಷ್ಟಾಚಾರದ ಆಡಿಯೋದಲ್ಲಿರುವ ಸ್ವರ ಒಬ್ಬೊಬ್ಬರ ಬಳಿ ಒಂದೊಂದು ರೀತಿಯಲ್ಲಿ ಹೇಳಿದ್ದು ದಾಖಲಾಗಿರುತ್ತದೆ. ಒಬ್ಬರ ಬಳಿ ಮಿಮಿಕ್ರಿ,ಮತ್ತೊಬ್ಬರ ಬಳಿ ಶ್ರೀನಿವಾಸ ಕುಂದರ್ ಸೆಟ್ಟಿಂಗ್ ಮಾಡಿದ್ದು ಎಂದರೆ ಇನ್ನೂ ಹಲವರ ಬಳಿ ಯಾರೋ ಹೋಟೆಲ್ ನಲ್ಲಿ ಕದ್ದು ರೇಕಾರ್ಡ್ ಮಾಡಿದ್ದು ಎಂದಿರುತ್ತಾರೆ. ಅಧ್ಯಕ್ಷರಿಗೆನೇ ಸಂಶಯ ಇರೋ ಭ್ರಷ್ಟಾಚಾರದ ಆಡಿಯೋ ಬಗ್ಗೆ ಅಧ್ಯಕ್ಷರಾದ ಮಂಜುನಾಥ ಕುಂದರ್ ಖುದ್ದು ತನಿಖೆಗೆ ಆಗ್ರಹಿಸದ್ದು ವಿಪರ್ಯಾಸ! ಮಾಧ್ಯಮದಲ್ಲಿ ಪ್ರಸಾರ ಆಗಿದ್ದಕ್ಕೆ ಮಾನನಷ್ಟ ಹೂಡುವ ಮಾತುಗಳನ್ನೂ ಕೂಡ ಮಂಜುನಾಥ ಕುಂದರ್ ಹೇಳುತ್ತಿದ್ದದ್ದೂ ಕೂಡ ಕೆಲವು ಮಾಧ್ಯಮದವರ ಬಳಿ ದಾಖಲೆ ಇದೆ. ಸಾರ್ವಜನಿಕ ಸಂಸ್ಥೆಯ ಅಧ್ಯಕ್ಷರಾಗಿ ತನ್ನನ್ನು ಯಾರೂ ಪ್ರಶ್ನೆ ಮಾಡಬಾರದು ಎಂಬುವುದು ಮಂಜುನಾಥ ಕುಂದರ್ ಬೇಡಿಕೆ ಆಗಿದೆ!?
ಏನೇ ಇರಲಿ ಸತ್ಯಾ ಸತ್ಯತೆಯ ಬಗ್ಗೆ ತನಿಖೆ ಆಗಲಿ ಎಂಬುವುದು ಸಾರ್ವಜನಿಕರ ಆಗ್ರಹ! ಮಂಜುನಾಥ ಕುಂದರ್ ನಮ್ಮ ಮಾಧ್ಯಮ ದ ಜೊತೆ ಅಭಿಪ್ರಾಯ ವ್ಯಕ್ತಪಡಿಸಿ ನಾನು ಪ್ರಾಮಾಣಿಕ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ನಿರ್ದೇಶಕರ ನಿರ್ಣಯದ ಮೂಲಕ ಮುಂದಿನ ನನ್ನ ಪದಚ್ಯುತಿ ಗೊಳಿಸಲಿ ಎಂದು ತಿಳಿಸಿರುತ್ತಾರೆ.ಜಿಲ್ಲೆಯಲ್ಲಿಯೇ ಇದು ಮೊದಲು ಎಂಬಂತೆ ಬಹುಮತ ಸಾಬೀತು ಪಡಿಸಬೇಕಾದ ಅನಿವಾರ್ಯತೆ ಅಧ್ಯಕ್ಷರಿಗೆ ಬಂದಿದೆ. ಬಿಜೆಪಿ ಎಂತಾ ದಿಟ್ಟ ನಿರ್ಧಾರ ಕೈಗೊಂಡರೂ ಅಧ್ಯಕ್ಷರಾದ ಮಂಜುನಾಥ ಕುಂದರ್ ರಾಜೀನಾಮೆ ಪಡೆಯಲು ಆಗಲಿಲ್ಲ.ಶ್ರೀನಿವಾಸ್ ಕುಂದರ್/ಮರಕಾಲ ಅಕ್ರೋಶ:ಹಿಂದಿನ ಸಭೆಯಲ್ಲಿ ಶ್ರೀನಿವಾಸ ಕುಂದರ್/ಮರಕಾಲ ಅಧ್ಯಕ್ಷರಾದ ಮಂಜುನಾಥ ಕುಂದರ್ ರಾಜೀನಾಮೆ ನೀಡಿ ಸಂಘದ ಗೌರವ ಕಾಪಾಡಬೇಕು ಎಂದು ಮತ್ತು ರಾಜೀನಾಮೆ ನೀಡಲೇಬೇಕು ಎಂದು ಅಕ್ರೋಶ ವ್ಯಕ್ತಪಡಿಸಿ ಏರು ಧ್ವನಿಯಲ್ಲಿ ಪರಸ್ಪರ ವಾದ ವಿವಾದ ಗಳಾಗಿ ಕೂಗಾಟ ಚೀರಾಟ ಕೂಡ ತಾರಕಕ್ಕೇರಿರುತ್ತದ. ಮುಂದುವರಿಯಲಿದೆ…….
ವರದಿ : ಕಿರಣ್ ಪೂಜಾರಿ
ಸಂಪಾದಕರು, ಹೊಸಕಿರಣ. Com











Leave a Reply