ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಎರಡನೆ ದಿನದ ಕಾರ್ಯಕ್ರಮ

ಕೋಟ: ಸಾಸ್ತಾನದ ಕಾರ್ತಿಕ್ ಎಸ್ಟೇಟ್ ಇಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಇದರ ಎರಡನೆ ದಿನದ ಕಾರ್ಯಕ್ರಮದ ಅಂಗವಾಗಿ ಪೂರ್ವಾಹ್ನ ದೇವತಾ ಪ್ರಾರ್ಥನೆ ,ನವಗ್ರಹ ಹೋಮ ಇತ್ಯಾಧಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

ಧಾರ್ಮಿಕ ವಿಧಿಗಳನ್ನು ಡಾ.ವಿದ್ವಾನ್ ವಿಜಯ್ ಮಂಜರ್ ಮಾರ್ಗದರ್ಶನದಲ್ಲಿ ವೇ.ಮೂಪ್ರಸನ್ನ ತುಂಗ ಸಾರಥ್ಯದಲ್ಲಿ ಜರಗಿತು. ಕಲ್ಯಾಣೋತ್ಸವ ಧಾರ್ಮಿಕ ಕೈಂಕರ್ಯ ಸಮಿತಿಯ ಪ್ರಧಾನಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ದಂಪತಿಗಳು ಭಾಗಿಯಾದರು..ಅಪರಾಹ್ನ 12.ಗ ವಿವಿಧ ಹೋಮಗಳ ಪೂರ್ಣಾಹುತಿ ಪ್ರಸಾದ ವಿತರಣೆಗಳು
ನಡೆದುವು. ಸಾಂಸ್ಕöತಿಕ ಕಾರ್ಯಕ್ರಮದ ಅಂಗವಾಗಿ ಪ್ರವೀಣ್ ಕುಂದರ್ ನೇತೃತ್ವದಲ್ಲಿ ಕುಣಿತ, ಕೋಲಾಟ ಭಜನೆ, ಸಂಜೆ ಜಗದೀಶ್ ಪುತ್ತೂರು ಇವರಿಂದ ಭಕ್ತಿ ರಸಮಂಜರಿ,ರಾತ್ರಿ 7ರಿಂದ ಸಮಿತಿಯ ಮಾರ್ಗದರ್ಶಕ ಡಾ.ವಿದ್ವಾನ್ ವಿಜಯ ಮಂಜರ್ ಇವವರಿಂದ ಧಾರ್ಮಿಕ ಸಂದೇಶ, ಮೈಸೂರು ರಾಮಚಂದ್ರ ಆಚಾರ್ಯ ಇವರಿಂದ ಭಜನಾಮೃತ ಕಾರ್ಯಕ್ರಮ ಜರಗಿತು.

ಈ ವೇಳೆ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಎಂ.ಸಿ ಚಂದ್ರಶೇಖರ್, ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಕಾರ್ಯದರ್ಶಿ ರವೀಂದ್ರ ತಿoಗಳಾಯ, ಉಪಾಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ, ಪ್ರಶಾಂತ್ ಶೆಟ್ಟಿ ಸಾಸ್ತಾನ, ಸಮಿತಿಯ ಪ್ರಮುಖರಾದ ಗಣೇಶ್ ಜಿ ಚೆಲ್ಲೆಮಕ್ಕಿ, ಶ್ಯಾಮಸುಂದರ್ ನಾಯರಿ, ರತ್ನಾ ಜೆ ರಾಜ್, ಚಂದ್ರ ಮೋಹನ್ ಪೂಜಾರಿ,ಉಲ್ಲಾಸ್ ಶೆಟ್ಟಿ,ರಾಘವೇಂದ್ರ, ಗಣೇಶ್ ಪೂಜಾರಿ,ಲೀಲಾವತಿ ಗಂಗಾಧರ್, ಸುಲತಾ ಹೆಗ್ಡೆ, ನಾಗರಾಜ್ ಗಾಣಿಗ ಸಾಲಿಗ್ರಾಮ, ಶೇಖರ್ ಪೂಜಾರಿ, ಹರೀಶ್ ನಾಯಕ್,ವಿಠ್ಠಲ್ ಪೈ ಸಾಲಿಗ್ರಾಮ, ಸುರೇಶ್ ಪೂಜಾರಿ ಪಾಂಡೇಶ್ವರ ಮತ್ತಿತರರು ಉಪಸ್ಥಿತರಿದ್ದರು.

ಇಂದು ವೈಭವದ ಶ್ರೀನಿವಾಸ ಕಲ್ಯಾಣೋತ್ಸವ ಎ.3ರಂದು ವೈಭವದ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ಸಾಲಿಗ್ರಾಮ ಶ್ರೀ ಗುರುದೇನರಸಿಂಹ ದೇವಸ್ಥಾನದಿoದ ಕುಣಿತ ಭಜನೆ, ಸ್ತಬ್ದ ಚಿತ್ರ, ಚಂಡೆ ಹಾಗೂ ಸಕಲ ಮಂಗಳವಾದ್ಯಗಳೊoದಿಗೆ ಪದ್ಮಾವತಿ ಸಹಿತ ಶ್ರೀ ಶ್ರೀನಿವಾಸ ದೇವರ ದಿವ್ಯ ಶೋಭಾಯಾತ್ರೆ ನಡೆಯಲಿದೆ. ಸಂಜೆ 5ರಿoದ ಶ್ರೀ ದೇವರ ವಿವಾಹ ಮಂಟಪ ಪ್ರವೇಶ, ಸೀಮಾಂತ ಪೂಜೆ, ವಿವಾಹ ಮಂಟಪಕ್ಕೆ ಶ್ರೀ ಪದ್ಮಾವತಿ ದೇವಿಯ ಆಗಮನ, ಸ್ವರ್ಣಮಣಿ ಬಂಧನ, ಮಹೂರ್ತ ನಿರೀಕ್ಷಣೆ, ಮಾಲಾಧಾರಣೆ, ಸಂಜೆ6.30ಕ್ಕೆ ಓದಗುವ ಗೋಧೂಳಿ ಲಗ್ನ ಸುಮೂರ್ತದಲ್ಲಿ ಶ್ರೀ ಶ್ರೀನಿವಾಸ ದೇವರಿಗೆ ಶ್ರೀ ಪದ್ಮಾವತಿ ದೇವಿಯು ಕನ್ಯಾದಾನ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ” ಕಂಕಣ, ಮoಗಳಸೂತ್ರ ಸಮರ್ಪಣೆ, ವಿವಾಹ ಹೋಮ, ಮಂಗಳಾಚಾರಣೆ, ಮಹಾಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆ, ತೀರ್ಥ ಪ್ರಸಾದ ವಿನಿಯೋಗ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಇದರ ಎರಡನೆ ದಿನದ ಕಾರ್ಯಕ್ರಮದ ಅಂಗವಾಗಿ ಪೂರ್ವಾಹ್ನ ದೇವತಾ ಪ್ರಾರ್ಥನೆ ,ನವಗ್ರಹ ಹೋಮ
ಇತ್ಯಾಧಿ ಧಾರ್ಮಿಕ.ಕಾರ್ಯಕ್ರಮಗಳಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ದಂಪತಿಗಳು ಭಾಗಿಯಾದರು.. ಡಾ.ವಿದ್ವಾನ್ ವಿಜಯ್ ಮಂಜರ್, ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಎಂ.ಸಿ ಚoದ್ರಶೇಖರ್, ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಕಾರ್ಯದರ್ಶಿ ರವೀಂದ್ರ ತಿoಗಳಾಯ,ಉಪಾಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *