ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬಾಳ್ಕುದ್ರುಶಾಲೆಯಲ್ಲಿ ಸಾಹಿತ್ಯ ಸಂಚಾರ ಸರಣಿ ಕಾರ್ಯಕ್ರಮ

ಕೋಟ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಘಟಕದ ಆಶ್ರಯದಲ್ಲಿ ಸಾಹಿತ್ಯ ಸಂಚಾರ ೪೫ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳ್ಕುದ್ರು ಇಲ್ಲಿ ನೆರವೇರಿತು.

ಕಸಾಪ ಬ್ರಹ್ಮಾವರ ಘಟಕದ ಅಧ್ಯಕ್ಷ ಜಿ.ರಾಮಚಂದ್ರ ಐತಾಳ ಅಧ್ಯಕ್ಷತೆ ವಹಿಸಿ ಕಲೆ ಸಾಹಿತ್ಯ ಸಂಸ್ಕöÈತಿ ಹೆಚ್ಚು ಜನರನ್ನು ತಲುಪಿದ.ಮಾತ್ರದಿಂದಲೇ ಶ್ರೇಷ್ಠ ಎಂಬುದಲ್ಲ ಅಭಿರುಚಿ.ಇರುವ ಆಸಕ್ತ ವಿದ್ಯಾರ್ಥಿಗಳು ಪ್ರೇಕ್ಷಕರು
ಮುಖ್ಯ ಎಂದು ತಿಳಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನೆರವೇರಿತು. ಸಂಪನ್ಮೂಲ.ವ್ಯಕ್ತಿಗಳಾದ ನೀಲಾವರ ಸುರೇಂದ್ರ ಅಡಿಗ, ನಾಗೇಶಮಯ್ಯ, ನರಸಿಂಹ ತುಂಗ, ಅಚ್ಚುತ ಪೂಜಾರಿ, ಮೀನ ಕಾರಂತ, ಸುಜಯೀ೦ದ್ರ ಹಂದೆ, ವಿಶ್ವನಾಥ ಖಾರ್ವಿ, ನರಸಿಂಹ ಮೂರ್ತಿ ಚಟುವಟಿಕೆ ಆಧಾರಿತ ಕಥೆ, ಕವನ, ರಚಿಸಿ ಹಾಡಿ,
ಹಾಡಿಸಿದರು.

ಮುಖ್ಯ ಶಿಕ್ಷಕಿ ಕುಸುಮ ಇಂತಹ ಸಾಹಿತ್ಯ.ಪ್ರೇರಣೆ ಕಾರ್ಯಕ್ರಮ ಇನ್ನಷ್ಟು ನಮ್ಮ ಶಾಲೆಯಲ್ಲಿ ನಡೆಯ ಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನ್ನು ಪ್ರಶಂಸಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶ್ರೀಕಾಂತ್ ಸಾಮಂತ್ ಅವರು ಶಾಲೆಯ ಪರವಾಗಿ ಕಸಾಪ ಜಿಲ್ಲಾ ಅಧ್ಯಕ್ಷ ಸುರೇಂದ್ರ ಅಡಿಗ ಇವರನ್ನು ಶಾಲೆಯ ಪರವಾಗಿ ಸನ್ಮಾನಿಸಿ ಕ.ಸಾ.ಪ. ಅವರ ಸಾಹಿತ್ಯ ಪ್ರೇರಣೆ ಕಾರ್ಯಕ್ರಮ ರಾಜ್ಯದಲ್ಲೇ ಒಂದು ಉತ್ತಮ ಕಾರ್ಯಕ್ರಮ ಎಂದು ಶ್ಲಾಘಿಸಿ ಧನ್ಯವಾದಗೈದರು.

Leave a Reply

Your email address will not be published. Required fields are marked *