ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಾರ್ಕಡ ಶ್ರೀಕ್ಷೇತ್ರ ಧರ್ಮಸ್ಥಳದಿಂದ ವೀಲ್‌ಚೇರ್ ಹಸ್ತಾಂತರ

ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಬ್ರಹ್ಮಾವರ ತಾಲೂಕು ಪಾಂಡೇಶ್ವರ ವಲಯದ ಕಾರ್ಕಡ ಪಡುಬೈಲು ಕಾರ್ಯಕ್ಷೇತ್ರದ ಚಿರು ಇವರಿಗೆ ಶ್ರೀ
ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯರು ಮತ್ತು ಅಮ್ಮನವರು ಮಂಜೂರು ಮಾಡಿದ ವೀಲ್‌ಚೇರ್ ಅನ್ನು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಅಚ್ಚುತ್ ಪೂಜಾರಿ ಇವರು ವಿತರಣೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ಸಂಜೀವ ದೇವಾಡಿಗ, ಪಾಂಡೇಶ್ವರ ವಲಯ
ಅಧ್ಯಕ್ಷೆ ರಾಧಾ ಎಸ್ ಪೂಜಾರಿ, ವಲಯದ ಮೇಲ್ವಿಚಾರಕರಾದ ಜಯಲಕ್ಷ್ಮೀ,  ಸ್ಥಳೀಯ ಸೇವ ಪ್ರತಿನಿಧಿಯಾದ ಶಾರದ ಹಾಗೂ ತಂಡದ ಸದಸ್ಯರಾದ
ಗಿರಿಜಾ, ಗೀತಾ ಉಪಸ್ಥಿತರಿದ್ದರು.ಕಾರ್ಕಡ ಶ್ರೀ ಕ್ಷೇತ್ರ
ಧರ್ಮಸ್ಥಳದಿಂದ ವೀಲ್‌ಚೇರ್ ಚಿರು ಇವರಿಗೆ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಅಚ್ಚುತ್ ಪೂಜಾರಿ ಇವರು ವಿತರಣೆ ಮಾಡಿದರು. ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ಸಂಜೀವ ದೇವಾಡಿಗ, ಪಾಂಡೇಶ್ವರ ವಲಯ
ಅಧ್ಯಕ್ಷೆ ರಾಧಾ ಎಸ್ ಪೂಜಾರಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *