ಕೋಟ: ಇಲ್ಲಿನ ಸಾಲಿಗ್ರಾಮದ ಸಮೀಪ ಗುಂಡ್ಮಿ ಮಯ್ಯ ಕುಟುಂಬದ ಮನೆಯೊಂದಕ್ಕೆ ಸೆಲ್ಸ್ ನೆಪದಲ್ಲಿ ಬಂದು ಗೋ ಕರುವಿನ ಬಾಲ ತುಂಡರಿಸಿ ಕಾಲ್ಕಿತ್ತ ಘಟನೆ ಮಂಗಳವಾರ ನಡೆದಿದೆ.
ಮಟಮಟ ಮಧ್ಯಾಹ್ನ ಗುಂಡ್ಮಿ ಮಯ್ಯರ ಮನೆಗೆ ಆಗಮಿಸಿದ ಸೆಲ್ಸ್ ಮೆನ್ ಮನೆಯಾಕೆಯನ್ನು ಕರೆದು ಪ್ರೊಡೆಕ್ಟ್ ತೆಗೆದುಕೊಳ್ಳಲು ಹೇಳಿದ್ದು ಮನೆಯಾಕೆ ತಿರಸ್ಕರಿಸಿ ಮನೆ ಒಳಗೆ ಪ್ರವೇಶಿಸಿ ಬಾಗಿಲು ಹಾಕಿಕೊಂಡಿದ್ದನ್ನು ಗಮನಿಸಿದ ಸೆಲ್ಸ್ ಮೆನ್ ಎರಡು ವರ್ಷದ ಗೋ ಕರುವಿನ ಬಾಲ ತುಂಡರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.
ಇತ್ತೀಚಿಗಿನ ವಿವಿಧ ಭಾಗಗಳಲ್ಲಿ ಕೆಲವು ಗೋವಿನ ಕೆಚ್ಚಲು ಇನ್ನಿತರ ಅಂಗ ಕತ್ತರಿಸಿದ ಗೋಗಳ್ಳತನ ಮಾಡಿದ ಪ್ರಕರಣಗಳು ಕಣ್ಮುಂದಿರುವಾಗ ಗುಂಡ್ಮಿ ಪ್ರಕರಣದ ಬಗ್ಗೆ ಸ್ಥಳೀಯ ಹೈನುಗಾರರು ಆತಂಕಕ್ಕಿಡಾಗಿದ್ದು ಗೋವಿನ ಭದ್ರತೆಗಾಗಿ ಕೋಟ ಆರಕ್ಷಕ ರಾಣೆಯ ಕದ ತಟ್ಟಿದ್ದಾರೆ.
ಜಾಗೃತಿಗಾಗಿ ಮನವಿ ಈ ಪ್ರಕರಣಕ್ಕೆ ಸಂಬoಧಿಸಿದoತೆ ಕೋಟ ಹಿಂದೂ ಜಾಗರಣಾ ವೇದಿಕೆ ಹೈನುಗಾರರಿಗೆ ಮಾಹಿತಿ ಹೊರಹಾಕಿದ್ದು ಮನೆಗೆ ಆಗಮಿಸುವ ಅಪರಿಚಿತ ವ್ಯಕ್ತಿಗಳ ಬಗ್ಗೆ ಪೋಲಿಸ್ ಇಲಾಖೆಗೆ ಮಾಹಿತಿ ನೀಡಲು ಸೂಚಿಸಿದೆ.












Leave a Reply