ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಪಡುಕರೆಯಲ್ಲಿ ಆರ್ಟ್ ಆಫ್ ಲೀವಿಂಗ್‌ನ ಆನಂದೊತ್ಸವ ಶಿಬಿರ ಸಂಪನ್ನ

ಕೋಟ: ಗೀತಾನಂದ ಫೌಂಡೇಶನ್ ಮತ್ತು ಜನತಾ ಫಿಶ್‌ಮೀಲ್ ಸಂಸ್ಥೆಯ ಜಂಟಿ ಆಯೋಜನೆಯಲ್ಲಿ ಆರ್ಟ್ ಆಫ್ ಲೀವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 6 ದಿನಗಳ ಆನಂದೊತ್ಸವ ಶಿಬಿರ (ಸುದರ್ಶನ ಕ್ರೀಯಾಯೋಗ) ವನ್ನು ಸರಕಾರಿ ಸಂಯುಕ್ತ ಫ್ರೌಢಶಾಲೆಯ ಕೆ ಸಿ ಕುಂದರ್ ಸ್ಮಾರಕ ಸಭಾ ಭವನದಲ್ಲಿ ಆಯೋಜಿಸಲಾಯಿತು. ಗೀತಾನಂದ ಫೌಂಡೇಶನ್ ಮತ್ತು ಜನತಾ ಫಿಶ್ ಮೀಲ್ ಸಂಸ್ಥೆಯ ಸಂಸ್ಥೆಯ ಸಿಬ್ಬoದಿಗಳು ಮತ್ತು ಸ್ಥಳೀಯರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು. ಆರ್ಟ್ ಆಪ್ ಲೀವಿಂಗ್‌ನ ತರಬೇತುದಾರರಾದ ದಿನೇಶ ಗುರೂಜಿ ಮತ್ತು ಆನಂದ
ಕೊಟೇಶ್ವರ ಅವರು ವಿವಿಧ ಪ್ರಕ್ರೀಯೆಗಳನ್ನು ತಿಳಿಸಿದರು. ಈ ವೇಳೆ ಇರ್ವರನ್ನು ಗೌರವಿಸಲಾಯಿತು.ವಿವಿಧ
ಸಂಸ್ಥೆಗಳ ಆಡಳಿತ ವರ್ಗ, ಸಿಬ್ಬಂದಿವರ್ಗ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *