ದಿನಾಂಕ 15-09 2024 ನೇ ಆದಿತ್ಯವಾರ ಸಂಜೆ “ಇಂಜಿನಿಯರ್ಸ್ ಡೇ” ಪ್ರಯುಕ್ತ, ಸಮಾಜಮುಖಿ ಸೇವಾ ಮನೋಭಾವದ, ಪರೋಪಕಾರಿ, ಪ್ರಾಮಾಣಿಕ, ಕರ್ತವ್ಯ ಪ್ರಜ್ನೆಯ ಸರಕಾರಿ ಅಧಿಕಾರಿ, ಕೋಟ ಮೆಸ್ಕಾಂ ನಲ್ಲಿ ಇಂಜಿನಿಯರ್ ಆಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ, ಜನಮನ್ನಣೆ ಗಳಿಸಿದ ಲಯನ್ ಇಂಜಿನಿಯರ್ ಹಾಲಾಡಿ ಪ್ರಶಾಂತ್ ಶೆಟ್ಟಿಯವರನ್ನು ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ವತಿಯಿಂದ ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಬನ್ನಾಡಿ ಪ್ರವೀಣ್ ಹೆಗ್ಡೆಯವರು “ಇಂಜಿನಿಯರ್ಸ್ ಡೇ” ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು.
ಲಯನ್ಸ್ ಕ್ಲಬ್ ನ ಸ್ಥಾಪಕ ಕಾರ್ಯದರ್ಶಿ ಲಯನ್ ಪ್ರೊಫೆಸರ್ ಕಲ್ಕಟ್ಟೆ ಚಂದ್ರ ಶೇಖರ್ ಶೆಟ್ಟಿಯವರು ಸನ್ನಾನಿತಗೊಂಡ ಲಯನ್ ಇಂಜಿನಿಯರ್ ಹಾಲಾಡಿ ಪ್ರಶಾಂತ್ ಶೆಟ್ಟಿಯವರ ಬಗ್ಗೆ ಹಾಗೂ “ಇಂಜಿನಿಯರ್ಸ್ ಡೇ” ಮಹತ್ವದ ಕುರಿತು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಲಯನ್ ಇಂಜಿನಿಯರ್ ಹಾಲಾಡಿ ಪ್ರಶಾಂತ್ ಶೆಟ್ಟಿಯವರು, ಸರ್ ಎಮ್. ವಿಶ್ವೇಶ್ವರಯ್ಯ ನವರ ಜೀವನ ಕುರಿತು ಮಾತನಾಡಿ, “ಇಂಜಿನಿಯರ್ಸ್ ಡೇ” ಪ್ರಯುಕ್ತ ತನ್ನನ್ನು ಸನ್ಮಾನಿಸಿದ ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಯ ಸದಸ್ಯರಿಗೆ ಕೃತಜ್ನತೆಗಳನ್ನು ಸಲ್ಲಿಸಿ ಶುಭ ಹಾರೈಸಿದರು.
ಈ ಸಂಧರ್ಭ ಲಯನ್ ಇಂಜಿನಿಯರ್ ಹಾಲಾಡಿ ಪ್ರಶಾಂತ್ ಶೆಟ್ಟಿಯವರ ತಂದೆ, ತಾಯಿ, ಪತ್ನಿ & ಮಕ್ಕಳು ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು. ಲಯನ್ಸ್ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಲಯನ್ ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿ ವಂದಿಸಿದರು. ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷರು ಹಾಗೂ ಪ್ರಸ್ತುತ ರೀಜನ್ V ರ ರೀಜನ್ ಚೆಯರ್ ಪರ್ಸನ್ ಲಯನ್ Adv ಬನ್ನಾಡಿ ಸೋಮನಾಥ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.












Leave a Reply