ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಖೇಲೋ ಇಂಡಿಯಾ ಯೂತ್ ಗೇಮ್ಸ್ ನ ಅಥ್ಲೆಟಿಕ್ಸ್  ಕ್ರೀಡಾಕೂಟದಲ್ಲಿ ರಜತ ಪದಕ ಗೆದ್ದ  ಸುತ್ತಿ ಪಿ ಶೆಟ್ಟಿ

ಉಡುಪಿ : ಇತ್ತೀಚೆಗೆ ಚೆನ್ನೈಯಲ್ಲಿ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್ ನ ಅಥ್ಲೆಟಿಕ್ಸ್  ಕ್ರೀಡಾಕೂಟದಲ್ಲಿ ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿ ಸ್ತುತಿ ಪಿ ಶೆಟ್ಟಿ, ಕಿದಿಯೂರು ಇವರು  ಮಿಡ್ಲೇ ರಿಲೇಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಾ ರಜತ ಪದಕವನ್ನು ಪಡೆದಿರುತ್ತಾರೆ.                      

ಪ್ರಸ್ತುತ ಇವರು ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಖೇಲೋ ಇಂಡಿಯಾ ಉಡುಪಿ ಇದರ ಅಥ್ಲೆಟಿಕ್ಸ್ ವಿಭಾಗದ ಕೋಚ್ ಸಮರ್ಥ್ ಸದಾಶಿವ ಇವರಿಂದ ತರಬೇತಿ ಪಡೆಯುತ್ತಿದ್ದಾರೆ. ಸಾಧಕ ವಿದ್ಯಾರ್ಥಿನಿಯನ್ನು  ಕಾಲೇಜು ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ -ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು
ಕೋಚ್ ಸಮರ್ಥ್ ಸದಾಶಿವ ಅವರು ಅಭಿನಂದಿಸಿದರು.

Leave a Reply

Your email address will not be published. Required fields are marked *