ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ರಂಗ ಮಂದಿರದಲ್ಲಿ ದಿ.ಗಂಗಾಧರ ಐತಾಳರು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಚಿಸಿದ ವಿಜ್ಞಾನ, ಗಣಿತ ಮತ್ತು ಖಗೋಳ ಮಾದರಿಗಳು ಎಂಬ ಕೃತಿಯನ್ನು ಶ್ರೀ ಗುರು ನರಸಿಂಹ ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಬಿಡುಗಡೆಗೊಳಿಸಿದರು. ಕೃತಿ ಮತ್ತು ಕೃತಿಕಾರರ ಬಗ್ಗೆ ಮಣಿಪಾಲದ ವೈ.ಸದಾರಾಮ ಹೇರ್ಳೆ ಸವಿಸ್ತಾರವಾದ ವಿವರಣೆಯನ್ನು ನೀಡಿದರು. ಸಂಪಾದಕಿ ಪಾರ್ವತಿ ಜಿ.ಐತಾಳ ಕೃತಿ ರಚನೆಯ ಹಿನ್ನೆಲೆ ಮತ್ತು ಕೃತಿಕಾರರ ಆಶಯವನ್ನು ತರೆದಿಟ್ಟರು.
ಶೃಂಗೇರಿ ಕೋಟೇಕಾರ್ ಶಂಕರ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ, ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ ಹಂದೆ, ದೇವಳದ ಆಡಳಿತ ಮಂಡಳಿಯ ಸದಸ್ಯರಾದ ಎ.ವಿ.ಶ್ರೀಧರ ಕಾರಂತ, ಕಾಸರಗೋಡು ಮೀಯಪದವು ಶ್ರೀಧರ ರಾವ್ ಮತ್ತು ಸುರತ್ಕಲ್ ಕಾಟಿಪಳ್ಳದ ಪಿ.ಸದಾಶಿವ ಐತಾಳ ಉಪಸ್ಥಿತರಿದ್ದರು. ಜ್ಯೋತಿ ಮತ್ತು ಸುಜಾತಾ ಬಾಯರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಸಾಲಿಗ್ರಾಮ ಶ್ರೀ ಗುರು ನರಸಿಂಹ ರಂಗ ಮಂದಿರದಲ್ಲಿ ದಿ.ಗಂಗಾಧರ ಐತಾಳರು ರಚಿಸಿದ ವಿಜ್ಞಾನ, ಗಣಿತ ಮತ್ತು ಖಗೋಳ ಮಾದರಿಗಳು ಎಂಬ ಕೃತಿಯನ್ನು ಶ್ರೀ ಗುರು ನರಸಿಂಹ ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಬಿಡುಗಡೆಗೊಳಿಸಿದರು.












Leave a Reply