ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬಂಜೆತನದ ಬಗ್ಗೆ ಅರಿವು ಅಗತ್ಯ -ಆನಂದ್ ಸಿ ಕುಂದರ್
ಕೋಟದಲ್ಲಿ ಬಂಜೆತನದ ಬಗ್ಗೆ ಉಚಿತ ಮಾಹಿತಿ ಕಾರ್ಯಾಗಾರ

ಕೋಟ: ಬಂಜೆತನದ ಬಗ್ಗೆ ಪ್ರಸ್ತುತ ಕಾಲಘಟ್ಟದಲ್ಲಿ ಅರಿವು ಮೂಡಿಸುವ ಅಗತ್ಯತೆ ಇದೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು.
ಕೋಟ ಗ್ರಾ.ಪಂ ಸಭಾಂಗಣದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ,ಕೋಟ ಗ್ರಾಮಪಂಚಾಯತ್ ನೇತ್ರತ್ವದಲ್ಲಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ,ಸ್ನೇಹಕೂಟ ಮಣೂರು ಸಹಯೋಗದೊಂದಿಗೆ ನೋವಾ ಐವಿಎಫ್ ಫರ್ಟಿಲಿಟಿ ಮಂಗಳೂರು ಸಾದರ ಪಡಿಸಿದ ಬಂಜೆತನದ ಬಗ್ಗೆ ಉಚಿತ ತಪಾಸಣೆ,ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ಸಂಘ ಸಂಸ್ಥೆಗಳು , ಸ್ಥಳೀಯಾಡತಗಳು ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಹತ್ತು ಹಲವು ಕಾರ್ಯಕ್ರಮಗಳನ್ನು ನೀಡಬೇಕು ಅದರಲ್ಲಿ ಇತ್ತೀಚಿಗಿನ ದಿನಗಳಲ್ಲಿ ಬಂಜೆತನ ಎನ್ನುವಂತ ಸಮಸ್ಯೆ ಸಾಕಷ್ಟು ದಂಪತಿಗಳ ಮಾನಸಿಕ ವೇದನೆಗೆ ಕಾರಣವಾಗಿದೆ ಇದನ್ನು ಸಮರ್ಥ ವೈದ್ಯರ ಮೂಲಕ ಮಾಹಿತಿ ಪಡೆದು ಔಷಧೋಪಚಾರ ಮಾಡಿ ಸರಿಪಡಿಸಿಕೊಳ್ಳಲು ಇಂಥಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ. ಪಂಚವರ್ಣ ಹಾಗೂ ಕೋಟ ಗ್ರಾ.ಪಂ ಸಾಮಾಜಮುಖಿ ಕಾರ್ಯಕ್ರಮಗಳು ಮನೆ ಮನಗಳನ್ನು ತಲುಪಲಿ ಎಂದು ಹಾರೈಸಿದರು.
ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸ್ನೇಹಕೂಟ ಮಣೂರು ಅಧ್ಯಕ್ಷೆ ಭಾರತಿ ವಿ ಮಯ್ಯ , ನೋವಾ ಐವಿಎಫ್ ಫರ್ಟಿಲಿಟಿ ಮಂಗಳೂರು ಇದರ ಡಾ. ಪರ್ಲ್ ,ಆಪ್ತಸಮಾಲೋಚಕಿ ಸುರೇಖ,ಕೋಟ ಗ್ರಾ.ಪಂ ಉಪಾಧ್ಯಕ್ಷ ಪಾಂಡು ಪೂಜಾರಿ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ದೇವಪ್ಪ ಪಟಗಾರ್, ಕೋಟ ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷ ಅಜಿತ್ ದೇವಾಡಿಗ,ಪ್ರಕೃತಿ ಸಂಜೀವಿ ಒಕ್ಕೂಟದ ಅಧ್ಯಕ್ಷೆ ಮಾಲತಿ ಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರೆ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಪ್ರಾಸ್ತಾವನೆ ಸಲ್ಲಿಸಿದರು.ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ನಿರೂಪಿಸಿ ವಂದಿಸಿದರು.ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.ಸಾಕಷ್ಟು ಫಲಾನುಭವಿಗಳು, ಸಾರ್ವಜನಿಕರು ಇದರ ಮಾಹಿತಿ ಪಡೆದುಕೊಂಡರು.

ಕೋಟ ಗ್ರಾ.ಪಂ ಸಭಾಂಗಣದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ , ಕೋಟ ಗ್ರಾಮಪಂಚಾಯತ್ ನೇತ್ರತ್ವದಲ್ಲಿ ನೋವಾ ಐವಿಎಫ್ ಫರ್ಟಿಲಿಟಿ ಮಂಗಳೂರು ಸಾದರ ಪಡಿಸಿದ ಬಂಜೆತನದ ಬಗ್ಗೆ ಉಚಿತ ತಪಾಸಣೆ,ಮಾಹಿತಿ ಕಾರ್ಯಾಗಾರವನ್ನು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿದರು. ಸ್ನೇಹಕೂಟ ಮಣೂರು ಅಧ್ಯಕ್ಷೆ ಭಾರತಿ ವಿ ಮಯ್ಯ , ನೋವಾ ಐವಿಎಫ್ ಫರ್ಟಿಲಿಟಿ ಮಂಗಳೂರು ಇದರ ಡಾ. ಪರ್ಲ್ ,ಆಪ್ತಸಮಾಲೋಚಕಿ ಸುರೇಖ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *