ಕೋಟ: ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೆಜು ಮತ್ತು ಅಮ್ರತೇಶ್ವರಿ ಶಿಕ್ಷಣ ಸಂಸ್ಥೆಯ ನೇತ್ರತ್ವದಲ್ಲಿ ಅಮ್ರತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಕೋಟ, ಗೀತಾನಂದ ಪೌಂಡೇಶನ್ ಮತ್ತು ಜನತಾಫಿಶ್ ಮೀಲ್ ಕೋಟ ಇವರ ಸಹಯೋಗದೊಂದಿಗೆ ಉಚಿತ ಅಯುರ್ವೇದ ತಪಾಸಣೆ ಚಿಕಿತ್ಸೆ ಹಾಗೂ ಔಷಧ ವಿತರಣೆ ಕಾರ್ಯಕ್ರಮವು ನೆರವೆರಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಮೃತೇಶ್ವರಿ ಆಯುರ್ವೇದಿಕ ಕಾಲೇಜಿನ ಟ್ರಸ್ಟಿ ಆನಂದ.ಸಿ.ಕುಂದರ್ ಆಯುರ್ವೇದ ವ್ಯೆದ್ಯಕೀಯ ಪದ್ದತಿಯು ಬಹಳ ಪುರಾತನ ಕಾಲದಿಂದ ಬಂದಿದ್ದು ಇದು ಜನಸಾಮನ್ಯರಿಗೆ ಸುಲಭವಾಗಿ ಕ್ಯೆಗೆಟುಕುವ ರೀತಿಯಲ್ಲಿ ಮಾಡುವುದು ನಮ್ಮ ಸಂಸ್ಥೆಯ ಉದ್ದೇಶ ಮತ್ತು ಇಂತಹ ಹಲವು ಕಾರ್ಯಕ್ರಮಗಳನ್ನು ನಡೆಸಲು ನಾವು ಬದ್ದವಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಗೀತಾನಂದ ಪೌಂಡೇಶನ್ ವಿಶ್ವಸ್ಥರಾದ ಗೀತಾ ಆನಂದ ಸಿ ಕುಂದರ್, ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ, ಅಮೃತೇಶ್ವರಿ ಅಯುರ್ವೇದಿಕ್ ಕಾಲೇಜು ಪ್ರಾಂಶುಪಾಲ ಡಾ.ಪ್ರಸನ್ನಾ ಐತಾಳ್, ಕಾಲೇಜು ನಿಕಟಪೂರ್ವ ಅಧ್ಯಕ್ಷ ಡಾ.ಬಿ ಶ್ರೀಧರ ರಾವ್, ಕಾಲೇಜು ಮುಖ್ಯ ಲೆಕ್ಕಾಧಿಕಾರಿ ನಾಗರಾಜ ಶೆಟ್ಟಿ, ಕೋಟ ಪಂಚಾಯತ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಅಮೇಚೂರ್ ಕಬ್ಬಡಿ ಅಸೋಸಿಯೇಷನ್ ಅಧ್ಯಕ್ಷ ರಾಜೇಂದ್ರ ಸುವರ್ಣ ಉಪಸ್ಥತರಿದ್ದರು. ಗೀತಾನಂದ ಫೌಂಡೇಶನ್ ಸಂಯೋಜಕ ರವಿಕಿರಣ್ ಕೋಟ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ನಂತರ ಉಚಿತ ತಪಾಸಣೆ ಮತ್ತು ಔಷಧ ವಿತರಣೆ ನಡೆಯಿತು.
ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೆಜು ಮತ್ತು ಅಮ್ರತೇಶ್ವರಿ ಶಿಕ್ಷಣ ಸಂಸ್ಥೆಯ ನೇತ್ರತ್ವದಲ್ಲಿ ಉಚಿತ ಅಯುರ್ವೇದ ತಪಾಸಣೆ ಚಿಕಿತ್ಸೆ ಹಾಗೂ ಔಷಧ ವಿತರಣೆ ಕಾರ್ಯಕ್ರಮವನ್ನು ಅಮೃತೇಶ್ವರಿ ಆಯುರ್ವೇದಿಕ ಕಾಲೇಜಿನ ಟ್ರಸ್ಟಿ ಆನಂದ.ಸಿ.ಕುಂದರ್ ಉದ್ಘಾಟಿಸಿದರು.











Leave a Reply