ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಪದಗ್ರಹಣ

ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಪದಗ್ರಹಣ

ಕೋಟ: ರೋಟರಿ ಸಂಸ್ಥೆ ಸಮಾಜ ಸೇವೆಯಲ್ಲಿ ತೊಡಗಿದೆ. ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ. ಸೇವೆಯಿಂದ ಮಾತ್ರ ಸಂತೃಪ್ತಿ ಕಾಣಲು ಸಾಧ್ಯ ಎಂದು ರೋಟರಿ ಪೂರ್ವ ಜಿಲ್ಲಾ ಗವರ್ನರ್ ಡಾ. ಪಿ. ನಾರಾಯಣ್ ತಿಳಿಸಿದರು.

ಇಲ್ಲಿನ ಹಂಗಾರಕಟ್ಟ ಚೇತನಾ ಪ್ರೌಢ ಶಾಲೆಯ ಸಭಾಂಗಣದಲ್ಲಿ ಜು. 8 ರಂದು ಆಯೋಜಿಸಿದ್ದ 2023-24 ನೇ ಸಾಲಿನ ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಅರವಿಂದ ಶರ್ಮಾ ಈ ವರ್ಷದ ಅಂತರಾಷ್ಟ್ರೀಯ ಅಧ್ಯಕ್ಷ ಗೋರ್ಡನ್ ಆರ್ ಮೆಕ್ನಾಲಿ ಅವರು ನೀಡಿರುವ ಧೈಯವಾಕ್ಯ ಜಗತ್ತಿನಲ್ಲಿ ಭರವಸೆಯನ್ನು ಸೃಷ್ಟಿಸಿ ” ಎಂಬ ಸಂದೇಶದಂತೆ ಈ ವರ್ಷವನ್ನು ಹೊಸ ಆಶಯ ಹೊಸ ಭರವಸೆ ಗಳೊಂದಿಗೆ ಆರಂಭಿಸೋಣ ಎಂದರು.
ಕ್ಲಬ್ಬಿಗೆ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸುತ್ತೇನೆ. ಎಲ್ಲರ ಸಲಹೆ, ಸಹಕಾರ ಪಡೆದು ರೋಟರಿ ಸೇವಾಕಾರ್ಯಗಳನ್ನು ಚಾಚೂ ತಪ್ಪದೆ ಅನುಷ್ಠಾನಗೊಳಿಸೋಣ,ನಮ್ಮ ಕ್ಲಬ್ಬಿನ ಹಿರಿಮೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ಯಲು ನಿಮ್ಮೆಲ್ಲರ ಸಹಕಾರ ಅತೀ ಅಗತ್ಯ ಎಂದು ಹೇಳಿದರು.

2022-23ರ ಸಹಾಯಕ ಗವರ್ನರ್ ರೂ. ಆನಂದ ಶೆಟ್ಟಿ, ವಲಯ ಪ್ರತಿನಿಧಿ ರೊ.ಆರ್ ಎಮ್ ಸಾಮಗ, 2023- 24ರ ಸಹಾಯಕ ಗವರ್ನರ್ ಆಲ್ವಿನ್ ಕ್ವಾಡ್ರಸ್, ವಲಯ ಪ್ರತಿನಿದಿ ರಾಜಾರಾಮ್ ಐತಾಳ್ ಉಪಸ್ಥಿತರಿದ್ದರು. ಕ್ಲಬ್ಬಿನ ಹಂಸ” ಪತ್ರಿಕೆಯನ್ನು ಸಹಾಯಕ ಗವರ್ನರ್ ಆಲ್ವಿನ್ ಕ್ವಾಡ್ರಸ್ ಬಿಡುಗಡೆಗೊಳಿಸಿದರು. 2022ರ ಸಾಲಿನ ಅಧ್ಯಕ್ಷರೊ.ಮನೋಜ್ ಕುಮಾರ್ ಸ್ವಾಗತಿಸಿದರು.2022ರ ಸಾಲಿನ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ವರದಿ ವಾಚಿಸಿದರು. ನೂತನ ಕಾರ್ಯದರ್ಶಿ ಕರುಣಾಕರ ಶೆಟ್ಟಿ ವಂದಿಸಿದರು. ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.

2023-24 ನೇ ಸಾಲಿನ ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪದಗ್ರಹಣ ಇತ್ತೀಚಿಗೆ ರೋಟರಿ ಭವನದಲ್ಲಿ ನಡೆಯಿತು.

Leave a Reply

Your email address will not be published. Required fields are marked *