ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಚೇಂಪಿ ವೆಂಕಟರಮಣ ದೇವಸ್ಥಾನದ ದಶಮಾನೋತ್ಸವ ಹಿನ್ನಲ್ಲೆಯಲ್ಲಿ ಪಂಡಿತ್. ವೆಂಕಟೇಶ್ ಕುಮಾರ್‍ರಿಂದ ದಾಸವಾಣಿ ಕಾರ್ಯಕ್ರಮ

ಚೇಂಪಿ ವೆಂಕಟರಮಣ ದೇವಸ್ಥಾನದ ದಶಮಾನೋತ್ಸವ ಹಿನ್ನಲ್ಲೆಯಲ್ಲಿ ಪಂಡಿತ್. ವೆಂಕಟೇಶ್ ಕುಮಾರ್‍ರಿಂದ ದಾಸವಾಣಿ ಕಾರ್ಯಕ್ರಮ

ಕೋಟ : ಸಾಸ್ತನದ ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ದಶಮಾನೋತ್ಸವದ ಅಂಗವಾಗಿ ಸುಕೃತೀಂದ್ರ ಕಲಾ ಮಂಟಪದಲ್ಲಿ ದೇಶದ ಹೆಸರಾಂತ ಹಿಂದೂಸ್ಥಾನಿ ಗಾಯಕ ಪಂ.ವೆಂಕಟೇಶ್ ಕುಮಾರ್ ಅವರಿಂದ ದಾಸವಾಣಿ ಕಾರ್ಯಕ್ರಮ ಜು.13ರಂದು ನಡೆಯಿತು. ಭಕ್ತಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದರು, ಈ ಭಜನಾ ಕಾರ್ಯಕ್ರಮವನ್ನು ಚೇಂಪಿ ದೇವಸ್ಥಾನದ ಅರ್ಚಕ ವೇ.ಮೂ ಶ್ರೀಕಾಂತ್ ಭಟ್ ದೀಪ ಬೆಳಗಿಸಿದರು.

ಚೇಂಪಿ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಭಗವಂತ್ ದಿನಕರ ಶ್ಯಾನುಭಾಗ್, ಉಪಾಧ್ಯಕ್ಷರಾದ ಉಮೇಶ ಫ್ರಭು,ಕಾರ್ಯದರ್ಶಿ ಕೋಟ ಶ್ರೀಕಾಂತ ಶೆಣೈ,ಗೋವಿಂದರಾಯ ಶ್ಯಾನುಭಾಗ್ , ನಾರಾಯಣ ಶ್ಯಾನುಭಾಗ, ಶ್ರೀನಿವಾಸ್ ಶ್ಯಾನುಭಾಗ ಉಪಸ್ಥಿತರಿದ್ದರು. ಇದೇ ವೇಳೆ ದೇವಸ್ಥಾನದ ವತಿಯಿಂದ ಪಂಡಿತ್ ವೆಂಕಟೇಶ್ ಕುಮಾರ್ ತಂಡವನ್ನು ಸನ್ಮಾನಿಸಿ ಗೌರವಿಸಿತು.

ಭಕ್ತಿಗಾಯನದಲ್ಲಿ ಹಾರ್ಮೊನಿಯಂನಲ್ಲಿ ಪ್ರೋ. ನರೇಂದ್ರ ಎಲ್. ನಾಯಕ್, ತಬ್ಲಾದಲ್ಲಿ ಕೇಶವ ಜೋಶಿ ಹಾಗೂ ಶ್ರೀಧರ ಪ್ರಭು, ತಾಳದಲ್ಲಿ ಪ್ರತೀಕ್ಷಾ ಪ್ರಭು ಸಹಕರಿಸಿದರು. ಚೇಂಪಿ ವೆಂಕಟರಮಣ ದೇವಸ್ಥಾನದ ದಶಮಾನೋತ್ಸವ ಹಿನ್ನಲ್ಲೆಯಲಿ ಪಂಡಿತ್.ವೆಂಕಟೇಶ್ ಕುಮಾರ್ ಬಳಗದಿಂದ ಭಕ್ತಿಗಾಯನ ಜರಗಿತು.

Leave a Reply

Your email address will not be published. Required fields are marked *