ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಸ್ತಾನದಲ್ಲಿ ರೋಟರಿ ಜಿಲ್ಲೆ 3182 – ಧನ್ಯವಾದ್ ಪರಿಸರ ಜಾಗೃತಿ ಮಾಹಿತಿ ಶಿಬಿರ

​ಕೋಟ: ರೋಟರಿ ಜಿಲ್ಲೆ 3182 ವಲಯ- 3ರ ರೋಟರಿ ಕ್ಲಬ್ ಹಂಗಾರಕಟ್ಟೆ-ಸಾಸ್ತಾನ ರೋಟರಿ ಉಡುಪಿ ಮಿಡ್‌ಟೌನ್ ಮತ್ತು ರೋಟರಿ ಬಾರಕೂರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬ್ರಹ್ಮಾವರ ತಾಲೂಕು ಇವುಗಳ ಸಹಯೋಗದೊಂದಿಗೆ ‘ಧನ್ಯವಾದ್’ ಪರಿಸರ ಜಾಗೃತಿ ಮತ್ತು ಮಾಹಿತಿ ಶಿಬಿರ ಮತ್ತು ಒಂದು ಸಾವಿರ ಮಹಾಗನಿ ಸಸಿಗಳನ್ನು ನೆಡುವ ಬೃಹತ್ ಕಾರ್ಯಕ್ರಮವನ್ನು ಐರೋಡಿ ಪರಿಸರದಲ್ಲಿ ಜರಗಿತು.

ಕಾರ್ಯಕ್ರಮವನ್ನು ರೋಟರಿ ಜಿಲ್ಲೆ 3182 ರ ಜಿಲ್ಲಾ ಗವರ್ನರ್ ಬಿ. ಎಂ. ಭಟ್ ಗಿಡ ನೆಡುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಪರಿಸರಕ್ಕೆ ಪೂರಕವಾಗಿ ಒಂದು ಸಾವಿರ ಮಹಾಗನಿ ಗಿಡಗಳನ್ನು ನಾಟಿ ಮಾಡಿರುವುದು ಪರಿಸರ ಸ್ನೇಹಿ ಕಾಯಕವಾಗಿದ್ದು ದೇಶದಾದ್ಯಂತ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ರೋಟರಿಯ ಮೂಲಕ ಹಮ್ಮಿಕೊಳ್ಳಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಿಂದ ಈ ಮಹತ್ಕಾರ್ಯ ಅನುಷ್ಠಾನ ಗೊಂಡಿರುವುದು ಅತ್ಯಂತ ಪ್ರಶಂಸನೀಯ. ಮುಂದಿನ ಪೀಳಿಗೆಗೆ ಪರಿಸರ ಉಳಿಸುವ ಕಾಯಕಕ್ಕೆ ನಾವೆಲ್ಲರೂ ಕೈ ಜೋಡಿಸೋಣ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ‌ನೆ ಉಡುಪಿ ಜಿಲ್ಲೆಯ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಮಾತನಾಡಿ ರೋಟರಿ ಕ್ಲಬ್ ಜೊತೆಗೆ ಜಿಲ್ಲೆಯಲ್ಲಿ ಎರಡನೇ ಕಾರ್ಯಕ್ರಮ ಆಗಿದ್ದು, ಕಾರ್ಕಳ ತಾಲೂಕಿನಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಕೆರೆ ಅಭಿವೃದ್ಧಿ ಕಾರ್ಯಕ್ರಮ ಅತ್ಯಂತ ಯಶಸ್ವಿನಿಂದ ನೆರವೇರಿದೆ ಎಂದರು.

ಧನ್ಯವಾದ್ ಪರಿಸರ ಜಾಗೃತಿ ಕಾರ್ಯಕ್ರಮದ ಜಿಲ್ಲಾ ಸಭಾಪತಿ ರೊ.ಪಿ.ಡಿ.ಜಿ. ಡಾ.ಭರತೇಶ ಆದಿರಾಜ್, ಉಪ ಸಭಾಪತಿ ರತ್ನಾಕರ ಶೆಟ್ಟಿ, ಡಿಸ್ಟ್ರಿಕ್ಟ್ ಕೋ ಅಡ್ವಸೈರ್ ಗಳಾದ ರೊ ಪಿ.ಡಿ.ಜಿ. ಜ್ಞಾನ ವಸಂತ್ ಶೆಟ್ಟಿ, ಪಿ.ಡಿ.ಜಿ. ರಾಜಾರಾಂ ಭಟ್ ಬಿ.ಐಎಫ್ಎಸ್ ಕುಂದಾಪುರ ವಲಯ ಐ.ಎಫ್.ಎಸ್ ಆಕಾಶಕದಮ್, ಬ್ರಹ್ಮಾವರ ತಾಲೂಕು ಯೋಜನಾಧಿಕಾರಿ ರಮೇಶ್ ಪಿಕೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಡಿಸ್ಟ್ರಿಕ್ ಲರ್ನಿಂಗ್ ಫೆಲಿಸಿಟೇಟರ್ಟರ್ ರೊ .ಪಿ.ಡಿ.ಜಿ.ಸಿ.ಎ. ದೇವಾನಂದ್ ವಂದಿಸಿದರು.

ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಕಾರ್ಯದರ್ಶಿ ರಾಜಾರಾಮ ಐತಾಳ್ ನಿರೂಪಿಸಿದರು.ರೋಟರಿ ಕ್ಲಬ್ ಉಡುಪಿ ಮಿಡ್ ಟೌನ್ ಅಧ್ಯಕ್ಷ ರೊ.ಪ್ರಕಾಶ್ ನೇತಾಲ್ಕರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಒಂದು ಸಾವಿರಕ್ಕೂಅಧಿಕ ಮಹಾಗನಿ ಸಸಿಗಳನ್ನು ನೆಡಲಾಯಿತು. ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಅಧ್ಯಕ್ಷೆ ರೊ. ಕುಸುಮಾ ಮನೋಜ್, ಬಾರ್ಕೂರು ರೋಟರಿ ಅಧ್ಯಕ್ಷ ಅಜಿತ್ ಕುಮಾರ್ ಶೆಟ್ಟಿ, ಶ್ರೀ ಕ್ಷೇತ್ರ ಧ.ಗ್ರಾ.ಯೋ. ಬ್ರಹ್ಮಾವರ ವಲಯದ ಅಧಿಕಾರಿಗಳು, ಸದಸ್ಯರು, ರೋಟರಿ ಗಣ್ಯರು, ಗ್ರಾಮಸ್ಥರು ಭಾಗಿಯಾದರು.

ರೋಟರಿ ಜಿಲ್ಲೆ 3182 ವಲಯ- 3ರ ರೋಟರಿ ಕ್ಲಬ್ ಹಂಗಾರಕಟ್ಟೆ-ಸಾಸ್ತಾನ ರೋಟರಿ ಉಡುಪಿ ಮಿಡ್‌ಟೌನ್ ಮತ್ತು ರೋಟರಿ ಬಾರಕೂರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬ್ರಹ್ಮಾವರ ತಾಲೂಕು ಇವುಗಳ ಸಹಯೋಗದೊಂದಿಗೆ ‘ಧನ್ಯವಾದ್’ ಪರಿಸರ ಜಾಗೃತಿ ಒಂದು ಸಾವಿರ ಮಹಾಗನಿ ಗಿಡ ನಡುವ ಕಾರ್ಯಕ್ರಮವನ್ನು ರೋಟರಿ ಜಿಲ್ಲೆ 3182 ರ ಜಿಲ್ಲಾ ಗವರ್ನರ್ ಬಿ. ಎಂ. ಭಟ್ ಉದ್ಘಾಟಿಸಿದರು.

ಧನ್ಯವಾದ್ ಪರಿಸರ ಜಾಗೃತಿ ಕಾರ್ಯಕ್ರಮದ ಜಿಲ್ಲಾ ಸಭಾಪತಿ ರೊ.ಪಿ.ಡಿ.ಜಿ. ಡಾ.ಭರತೇಶ ಆದಿರಾಜ್, ಉಪ ಸಭಾಪತಿ ರತ್ನಾಕರ ಶೆಟ್ಟಿ, ಡಿಸ್ಟ್ರಿಕ್ಟ್ ಕೋ ಅಡ್ವಸೈರ್ ಗಳಾದ ರೊ ಪಿ.ಡಿ.ಜಿ. ಜ್ಞಾನ ವಸಂತ್ ಶೆಟ್ಟಿ, ಪಿ.ಡಿ.ಜಿ.ರಾಜಾರಾಂ ಭಟ್ ಬಿ ಇದ್ದರು.

Leave a Reply

Your email address will not be published. Required fields are marked *