ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಗೃಹಲಕ್ಷ್ಮೀ ಸೇರಿದಂತೆ ಸರಕಾರದ ಯೋಜನೆಯ ಅಡೆತಡೆಗಳನ್ನು ನಿವಾರಿಸಿ ಪ್ರಜಾಸೇವೆಯಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧಿಕಾರಿಗಳಿಗೆ ಖಡಕ್ ಸೂಚನೆ

ಕೋಟ: ಸರಕಾರದ ಯೋಜನೆಗಳಾದ ಗೃಹಲಕ್ಷ್ಮೀ ಸೇರಿದಂತೆ ಇನ್ನುಳಿದ ಯಾವುದೇ ಸಮಸ್ಯೆಗಳಿಗೆ ಶೀಘ್ರದಲ್ಲಿ ಮುಕ್ತಿಗಾಣಿಸಿ ಪ್ರಜಾಸೇವೆ ಆಂದೋಲನದವರೆಗೆ ಅವಕಾಶ ನೀಡದಿರಿ ಎಂದು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಶನಿವಾರ ಸಾಲಿಗ್ರಾಮ ಪಟ್ಟಣಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಪ್ರಜಾಸೇವೆ ಆಂದೋನಲದ ಅಹವಾಲು ಸ್ವೀಕಾರ ಕೋಟ ಹೋಬಳಿಯ ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಅಧಿಕಾರಿಗಳು ತಮ್ಮ ಕಾರ್ಯದಲ್ಲಿ ನಿರಾಸಕ್ತಿ ಸಲ್ಲ ಬದಲಾಗಿ ಯಾವುದೇ ಯೋಜನೆಗಳನ್ನು ಕರಾರುವಾಕ್ಕಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು.

ಪಟ್ಟಣಪಂಚಾಯತ್ ವ್ಯಾಪ್ತಿಯ ನೂರಾರು ಜನಸಾಮಾನ್ಯರು ತಮ್ಮ ಭಾಗಗಳ ಸಮಸ್ಯೆಗಳನ್ನು ಶಾಸಕರಲ್ಲಿ ಹಾಗೂ ಅಧಿಕಾರಿಗಳ ಮೂಲಕ ಅಳಲು ತೋಡಿಕೊಂಡರು. ಪಟ್ಟಣಪಂಚಾಯತ್ ವ್ಯಾಪ್ತಿಯ ಸಮಸ್ಯೆಗಳುಪ್ರಜಾಸೇವೆಯಲ್ಲಿ ರಸ್ತೆ ಕಾಂಕ್ರೀಟೀಕರಣ, ಕುಡಿಯುವ ನೀರು, ಗೃಹಲಕ್ಷ್ಮೀ ಯೋಜನೆ, ರಸ್ತೆ ಗಿಡಗಂಟಿಗಳು ತೆರವು,ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ಮನೆ ನಿರ್ಮಾಣದ ಹಣ ಬಿಡುಗಡೆಯಲ್ಲಿ ವಿಳಂಬ,ಎಸ್ ಸಿ ಕುಟುಂಬಗಳ ಕೇರಿಗಳಲ್ಲಿ ರಸ್ತೆ ನಿರ್ಮಾಣ, ರಸ್ತೆ, ದಾರಿ ದೀಪ ನಿರ್ವಹಣೆ, ಕಾರ್ಕಡ ಸರಕಾರಿ ಶಾಲೆ ಮುಖ್ಯ ಶಿಕ್ಷಕರ ವರ್ಗಾವಣೆ ಹೀಗೆ ಹಲವು ಸಮಸ್ಯಗಳು ಕಂಡುಬಂತು. ಶಾಸಕ ಕೊಡ್ಗಿ ಅಧಿಕಾರಿಗಳಿಗೆ ಸೂಚನೆಸರಕಾರದ ಯೋಜನೆಗಳ ಬಗ್ಗೆ ವಿಳಂಬ ಸಲ್ಲ ಅಲ್ಲದೆ ಸರಕಾರಿ ಕಛೇರಿ ಅಲೆಯುವಂತೆ ಅವಕಾಶ ನೀಡಬೇಡಿ ಪ್ರಜಾಸೇವೆಯಲ್ಲಿ ಒಟ್ಟು 65 ಅರ್ಜಿಗಳಿಗೆ 21ದಿನಗಳವರೆಗೆ ವಿಲೇವಾರಿ ಮಾಡಬೇಕು ಅಲ್ಲಿಯವರೆಗೆ ವಿಳಂಬ ಮಾಡದಿರಿ ಎಂದು ಆಂದೋಲನದಲ್ಲಿ ಅಧಿಕಾರಿಗಳಿವೆ ಸೂಚಿಸಿದರು.

ಸಭೆಯಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷೆ ಡಾ.ಸುನಿತಾ ಶೆಟ್ಟಿ,ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ, ಬ್ರಹ್ಮಾವರ ತಾಲೂಕು ಪಂಚಾಯತ್ ಇ.ಒ ಕೆ.ಜಿ ರಾಮದಾಸ್, ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್, ಕೋಟ ಠಾಣೆಯ ಠಾಣಾಧಿಕಾರಿ ಪ್ರವೀಣ್ ಕುಮಾರ್, ಕಂದಾಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖಾಧಿಕಾರಿ ಉಪಸ್ಥಿತರಿದ್ದರು.

ಪ್ರಜಾಸೇವೆಯಲ್ಲಿ ಜಿಲ್ಲೆ ವಿವಿಧ ಇಲಾಖಾಧಿಕಾರಿಗಳು, ಮಾಜಿ ಜನಪ್ರತಿನಿಧಿಗಳು ಭಾಗಿಯಾದರು‌. ಸಭಾಕಾರ್ಯಕ್ರಮವನ್ನು ಚಿತ್ರಪಾಡಿ ಶಾಲಾ ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ನಿರೂಪಿಸಿದರು. ಸಾಲಿಗ್ರಾಮ ಪಟ್ಟಣಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಪ್ರಜಾಸೇವೆ ಆಂದೋನಲದ ಅಹವಾಲು ಸ್ವೀಕಾರ ಕೋಟ ಹೋಬಳಿಯ ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ಅಹವಾಲು ಸ್ವೀಕರಿಸಿ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿದರು.

ಗ್ಯಾರಂಟಿ ಸಮಿತಿ ಅಧ್ಯಕ್ಷೆ ಡಾ.ಸುನಿತಾ ಶೆಟ್ಟಿ, ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ, ಬ್ರಹ್ಮಾವರ ತಾಲೂಕು ಪಂಚಾಯತ್ ಇ.ಒ ಕೆ.ಜಿ ರಾಮದಾಸ್, ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್ ಇದ್ದರು.

Leave a Reply

Your email address will not be published. Required fields are marked *