ಕೋಟ: ಹಂಗಾರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಅಲಯನ್ಸ್ ಕ್ಲಬ್ ಕೋಟ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಆಚರಿಸಲಾಯಿತು. ಮಕ್ಕಳ ವಿಜ್ಞಾನ ಮಾದರಿ ಪ್ರದರ್ಶನವನ್ನು ಜಿಲ್ಲಾ ಅಲಯನ್ಸ್ ಕ್ಲಬ್ ಅಸಿಸ್ಟೆಂಟ್ ಗವರ್ನರ್ ಸುಧಾಕರ ಹೆಗ್ಡೆ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಅಲಯನ್ಸ್ ಕ್ಲಬ್ ಕೋಟ ಬ್ರಹ್ಮಾವರ ಅಧ್ಯಕ್ಷ ಐರೋಡಿ ಕರುಣಾಕರ್ ಶೆಟ್ಟಿ ದೀಪ ಬೆಳಗಿಸಿ ಶುಭಹಾರೈಸಿದರು.
ಒಂದರಿoದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆ ವಿಜ್ಞಾನ ಚಿತ್ರಗಳ ರಂಗೋಲಿ ಬಿಡಿಸುವ ಸ್ಪರ್ಧೆ ಹಾಗೂ ವಿಜ್ಞಾನ ರಸಪ್ರಶ್ನೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ರೇಖಾ ಉಡುಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಅಲಯನ್ಸ್ ಕ್ಲಬ್ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಜಗದೀಶ ಹೊಳ್ಳ, ,ನಿವೃತ್ತ ಶಿಕ್ಷಕರಾದ ರಾಮ ದೇವ ಹಂದೆ , ಸೇಸು ಟೀಚರ್, ಹಂಗಾರಕಟ್ಟೆ ಕ್ಲಸ್ಟರ್ ಸಿಆರ್‌ಪಿ ಮಾಲಿನಿ, ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಅಧ್ಯಕ್ಷೆ ಜ್ಯೋತಿ ಉದಯಕುಮಾರ್ ಹಾಗೂ ಕೋಟಾ ಪೊಲೀಸ್ ಠಾಣೆಯ ದೀಕ್ಷಿತ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಷಾರಾಣಿ ನಿರೂಪಿಸಿ , ಶಿಕ್ಷಕಿ ವಿದ್ಯಾಶ್ರೀ ಪ್ರಾಸ್ತಾವನೆ ಸಲ್ಲಿಸಿ, ಮುಖ್ಯ ಶಿಕ್ಷಕಿ ಪ್ರೆಸ್ಸಿಲ್ಲ ಸ್ವಾಗತಿಸಿ ,ಅಭಿನಂದನಾ ಕಾರ್ಯಕ್ರಮವನ್ನು ವೀಣಾ ಶೆಟ್ಟಿ ನೆರವೆರಿಸಿದರು. ಶಿಕ್ಷಕಿ ಯಶೋಧ ವಂದಿಸಿದರು. ಶಿಕ್ಷಕಿ ರಮ್ಯಾ ಮತ್ತು ಲವಿನ ಸಹಕರಿಸಿದರು.
ಹಂಗಾರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು. ಅಲಯನ್ಸ್ ಕ್ಲಬ್ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಜಗದೀಶ ಹೊಳ್ಳ, ನಿವೃತ್ತ ಶಿಕ್ಷಕರಾದ ರಾಮ ದೇವ ಹಂದೆ, ಸೇಸು ಟೀಚರ್, ಹಂಗಾರಕಟ್ಟೆ ಕ್ಲಸ್ಟರ್ ಸಿಆರ್‌ಪಿ ಮಾಲಿನಿ, ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಅಧ್ಯಕ್ಷೆ ಜ್ಯೋತಿ ಉದಯಕುಮಾರ್ ಇದ್ದರು.












Leave a Reply