ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವೈಭವದ ಕೋಟ ಅಮೃತೇಶ್ವರಿ ನಾಗಮಂಡಲ
ಶಿಸ್ತುಬದ್ಧ ಅನ್ನಪ್ರಸಾದಕ್ಕೆ ವ್ಯವಸ್ಥೆ ,ಹರಿದು ಬಂದ ಭಕ್ತಸಾಗರ

ಕೋಟ: ಇಲ್ಲಿನ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದ  ವತಿಯಿಂದ ನಡೆದ ಏಕ: ಪವಿತ್ರ ನಾಗಮಂಡಲೋತ್ಸವಕ್ಕೆ ಸಹಸ್ರಾರು  ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ನಾಗದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ನಾಗಮಂಡಲ ಪ್ರಯುಕ್ತ ಬೆಳಗ್ಗೆ ಗಣಪತಿಯಾಗ, ವಿವಿಧ ಹೋಮಗಳು, ಬ್ರಹ್ಮಕಲಶಾಭಿಷೇಕ, ದಂಪತಿ ಪೂಜೆ, ಆಚಾರ್ಯ ಪೂಜೆ, ನಾಗ ಸಂದರ್ಶನ,ಪಲ್ಲಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. ಕೆ.ವೆಂಕಟರಮಣ ಹೊಳ್ಳ ಕಾರ್ಕಡ ಇವರ ನಾಗದರ್ಶನದೊಂದಿಗೆ ಕೋಟ ಗಾಂಧಿ ಮೈದಾನದಲ್ಲಿ ಪಲ್ಲ ಪೂಜೆ ನೆರವೆರಿತು.

ಅನ್ನಪ್ರಸಾದಕ್ಕೆ ಐದು ಚಪ್ಪರಗಳಲ್ಲಿ ಕುಳಿತು ಪ್ರಸಾದ ಸ್ವೀಕರಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಒಂದೊಂದು ಚಪ್ಪರದಲ್ಲಿ 500 ಮಂದಿಯಂತೆ ಸುಮಾರು ಎರಡೂವರೆ ಸಾವಿರ ಮಂದಿ ಒಮ್ಮೆ ಕುಳಿತು ಪ್ರಸಾದ ಸ್ವೀಕರಿಸಿದರು. ಜತೆಗೆ ಸ್ವಯಂಸೇವಾ ಪದ್ಧತಿಯಲ್ಲಿ ಸಾವಿರಾರು ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು, ಕೋಟದ ರಾಜಶೇಖರ ದೇಗುಲದಲ್ಲಿ ಬ್ರಹ್ಮ ಸಮುದಾಯಕ್ಕೆ ಸಂತಪರ್ಣೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆಯಿಂದ ಸಂಜೆ ತನಕ ಮೂವತ್ತು ಸಾವಿರ ಅಧಿಕ ಮಂದಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿ‌ ಸಂಜೆಯ ತನಕ ನಿರಂತರವಾಗಿ ಅನ್ನದಾನ ಸೇವೆ ನಡೆದು ಮೂವತ್ತು ಸಾವಿರಕ್ಕೂ ಮಿಕ್ಕಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಭಕ್ತರಿಗೆ ಯಾವುದೇ ಸಮಸ್ಯೆಗಳಾಗದಂತೆ ನೋಡಿ ಕೊಳ್ಳಲು ಆಯಾಯ ಅನ್ನಸಂತರ್ಪಣೆ ಚಪ್ಪರಗಳಲ್ಲಿ ಸ್ವಯಂಸೇವಕರನ್ನ ನೇಮಿಸಲಾಗಿತ್ತು ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು.

ಅನ್ನಸಂತರ್ಪಣೆಯ ಅನಂತರ ಎಲ್ಲರೂ ಮೂಲ ನಾಗ ಸಾನಿಧ್ಯಕ್ಕೆ ಭೇಟಿ ನೀಡಿ, ಅಮೃತೇಶ್ವರೀ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಸುತ್ತಲಿನ 20 ಗ್ರಾಮಗಳ 50 ಕ್ಕೂ ಹೆಚ್ಚು ಸಂಘಟನೆಗಳು ಸ್ವಯಂ ಸೇವಕರಾಗಿ ಸೇವೆ ನೀಡಿದರು.

ವೇದಮೂರ್ತಿ ಮಧುಸೂದನ ಬಾಯರಿ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನೆರವೇರಿತು‌. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್, ಸದಸ್ಯರಾದ ಕೆ.ಸುಬ್ರಾಯ ಜೋಗಿ, ಸುಭಾಷ್ ಶೆಟ್ಟಿ, ಗಣೇಶ್ ಕೆ. ನೆಲ್ಲಿಬೆಟ್ಟು, ಜ್ಯೋತಿ ದೇವದಾಸ್ ಕಾಂಚನ್, ಸುಧಾ ಎ. ಪೂಜಾರಿ, ರತನ್ ಐತಾಳ, ಶಿವ ಪೂಜಾರಿ, ಚಂದ್ರಶೇಖರ ಆಚಾರ್, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ,ನಾಡೋಜ ಡಾ.ಜಿ.ಶಂಕರ್,ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ,ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

ವಿವಿಧ ಭಜನಾ ತಂಡಗಳಿಂದ ಭಜನೆ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಜನಾ ಕಾರ್ಯಕ್ರಮ ಬೆಳಿಗ್ಗೆ 9ರಿಂದ ವನಿತಾ ಉಪಾಧ್ಯ ಚಿತ್ರಪಾಡಿ,10 ರಿಂದ ಶ್ರೀ ವಿಠೋಬ ಭಜನಾ ಮಂಡಳಿ ಮಣೂರು ಪಡುಕೆರೆ,11ರಿಂದ ಶ್ರೀ ಭಗವತ್ ಭಜನಾ ಮಂಡಳಿ ಕೋಟತಟ್ಟು ಪಡುಕೆರೆ,ಮಧ್ಯಾಹ್ನ 12ರಿಂದ ಪಾಂಚಜನ್ಯ ಮಹಿಳಾ ಭಜನಾ ಮಂಡಳಿ ಕೋಟ, ಮಧ್ಯಾಹ್ನ 1ರಿಂದ ಶ್ರೀ ಬ್ರಹ್ಮಬೈದರ್ಕಳ ಮಹಿಳಾ ಭಜನಾ ತಂಡ ಸಾಸ್ತಾನ ಗೋಳಿಗರಡಿ, ಸಂಜೆ 4ರಿಂದ ಶ್ರೀ ಅಮೃತೇಶ್ವರಿ ಮಹಿಳಾ ಭಜನಾ ಮಂಡಳಿ ಕೋಟ ಭಜನಾ ಕಾರ್ಯಕ್ರಮ,ಭಕ್ತಿಗಾನ ಸುಧೆ,ಭಾಗ್ಯೇಶ್ವರಿ ಮಯ್ಯ ಇವರ ನೇತೃತ್ವದ ತಂಡದಿಂದ ಶತಕಂಠ ಗಾಯನ ಕಾರ್ಯಕ್ರಮ, ಸಂಜೆ 5ರಿಂದ  ವಿದ್ವಾನ್ ಸಗ್ರಿ ವೇದವ್ಯಾಸ ಐತಾಳ್ ಉಡುಪಿ ಇವರಿಂದ ಧಾರ್ಮಿಕ ಪ್ರವಚನ, ಸಂಜೆ 6ರಿಂದ ವಿದೂಷಿ  ಭಾಗೀರಥಿ ಎಂ.ರಾವ್ ಅವರ ಸಾರಥ್ಯದಲ್ಲಿ ಶ್ರೀ ನಟರಾಜ ನೃತ್ಯನಿಕೇತನ ಚಿತ್ರಪಾಡಿ ಸಾಲಿಗ್ರಾಮ ಭರತನಾಟ್ಯ, ರಾತ್ರಿ 7:00ಕ್ಕೆ ಸುಗಮ ಸಂಗೀತ ಇತ್ಯಾದಿ ಕಾರ್ಯಕ್ರಮಗಳು ಜರಗಿತು.

ಇಲ್ಲಿನ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದ  ವತಿಯಿಂದ ನಡೆದ ಏಕ: ಪವಿತ್ರ ನಾಗಮಂಡಲೋತ್ಸವಕ್ಕೆ ಸಹಸ್ರಾರು  ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ನಾಗದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

Leave a Reply

Your email address will not be published. Required fields are marked *