ಕೋಟ: ರಕ್ತದಾನ ಶ್ರೇಷ್ಠ ದಾನದಲ್ಲಿ ಒಂದಾಗಿದ್ದು ಇದಕ್ಕೆ ಬಂಡ ವಾಳ ಬೇಡ ಬದಲಾಗಿ ಒಳ್ಳೆಯ ಮನಸ್ಸು ಮುಖ್ಯವಾಗಿದೆ. ಬದುಕು ನಮಗಾಗಿ ಅಲ್ಲ, ಮಾನವ ಸಂಘ ಜೀವಿ, ಸಮು ದಾಯದ ಜತೆ ಬೆರೆತು ಸಂಪರ್ಕದ ಕೊಂಡಿಗಳನ್ನು ಬೆಸೆದು ಬದುಕಿ ಬಾಳಿದಾಗ ಬದುಕಿಗೊಂದು ಸಂತೃಪ್ತಿ ದೊರಕುವುದು ಎಂದು ಬೇಳೂರು ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ಶೆಟ್ಟಿ ಧನ್ಯಾಡಿ ಮನೆ ಅವರು ಹೇಳಿದರು.
ಅವರು ಭಾನುವಾರ ಬೇಳೂರು ದೇಲಟ್ಟು ಚಾರ್ಮಕ್ಕಿ ನಾರಾಯಣ ಶೆಟ್ಟಿ ಸಭಾ ಭವನದಲ್ಲಿ ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದೇಲಟ್ಟು-ಬೇಳೂರು, ಹಾಲು ಉತ್ಪಾ ದಕರಮಹಿಳಾ ಸಹಕಾರಿ ಸಂಘ, ಅಯ್ಯಪ್ಪ ಭಕ್ತವೃಂದ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ-2, ದೇಲಟ್ಟು ಫ್ರೆಂಡ್ಸ್ ಬೇಳೂರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತನಿಧಿ ಕುಂದಾಪುರ ಇವರ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಬೇಳೂರು ಗ್ರಾ. ಪಂ.ಮಾಜಿ ಅಧ್ಯಕ್ಷ ಬಿ.ಕರುಣಾಕರ ಶೆಟ್ಟಿ, ರೆಡ್ ಕ್ರಾಸ್ ಸಂಸ್ಥೆ ರಕ್ತ ನಿಧಿ ಅಧ್ಯಕ್ಷ ಜಯಕರ ಶೆಟ್ಟಿ ಹಿರಿಯ ಸಾವಯವ ಕೃಷಿಕ ಶಾನಾಡಿ ರಾಮಚಂದ್ರ ಭಟ್, ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ರಾಧಾ ಪೂಜಾರ್ತಿ, ಅಯ್ಯಪ್ಪ ಸ್ವಾಮಿ ಭಕ್ತವೃಂದದ ಅಧ್ಯಕ್ಷ ಬಸವ ಪೂಜಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ಘಟಕ ಯೋಜನಾಧಿಕಾರಿ ನಾರಾಯಣ ಪಾಲನ್, ಕೋಟ ಸಿಎ ಬ್ಯಾಂಕ್ ನಿರ್ದೇಶಕ ಮಹೇಶ್ ಶೆಟ್ಟಿ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷತಿಮ್ಮ ಪೂಜಾರಿ, ಕೆದೂರು ಗ್ರಾ. ಪಂ. ಅಧ್ಯಕ್ಷ ಉಳ್ಳೂರು ಪ್ರಶಾಂತ್ ಶೆಟ್ಟಿ ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಸುಧೀರ್ಶೆಟ್ಟಿ ಮಲ್ಯಾಡಿ, ಲಯನ್ಸ್ ಕ್ಲಬ್ ಬನ್ನಾಡಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ನಿವೃತ್ತ ಮುಖ್ಯೋಪಾಧ್ಯಾಯ ಸುರೇಂದ್ರ ಶೆಟ್ಟಿ, ಹರೀಶ್ ಶೆಟ್ಟಿ ದೇಲಟ್ಟು ಉಪಸ್ಥಿತರಿದ್ದರು.
ಬೇಳೂರು ಗ್ರಾಮದಲ್ಲಿ ಅತಿ ಹೆಚ್ಚು ರಕ್ತದಾನ ಮಾಡಿದವರು ನಿತ್ಯಾನಂದ ಕೊಠಾರಿ ದೇಲಟ್ಟು ಜಯಲಕ್ಷ್ಮಿ ಬಾಲಕೃಷ್ಣ ಐತಾಳ್, ಸಂತೋಷ್ ಪೂಜಾರಿ ದೇಲಟ್ಟು ಗಣೇಶ್ ಮೊಗವೀರ ದೇಲಟ್ಟು ನರಸಿಂಹ ಬೋವಿ, ರಕ್ಷಿತ್ ಶೆಟ್ಟಿದೇಲಟ್ಟು ಅವರನ್ನು ಗೌರವಿಸಲಾಯಿತು. 86 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ. ಶಿಕ್ಷಕ ಸೀತಾರಾಮ ಶೆಟ್ಟಿ ಸ್ವಾಗತಿಸಿ, ಜಯಕರ ಶೆಟ್ಟಿ ಅವರು ಪ್ರಸ್ತಾವನೆಗೈದು, ಪ್ರಗತಿ ಪ್ರಾರ್ಥಿಸಿ, ದಯಾನಂದ ಕೊಠಾರಿ ಸಂಘಟಿಸಿ, ನಿತ್ಯಾನಂದ ಕೊಠಾರಿ ದೇಲಟ್ಟು ನಿರೂಪಿಸಿ, ವಂದಿಸಿದರು.












Leave a Reply