ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹಾಡಿಕೆರೆ ಗ್ರಾಮಸ್ಥರ ಯಕ್ಷಸೇವೆ,ರಾಜ್ಯೋತ್ಸವ ಪ್ರಶಸ್ತಿ ಪುರುಸ್ಕೃತ  ಕೋಟ ಸುರೇಶ್ ಬಂಗೇರರಿಗೆ ಸನ್ಮಾನ

ಕೋಟ: ಇಲ್ಲಿನ ಕೋಟದ ಹಾಡಿಕೆರೆ ಬೆಟ್ಟು ಗ್ರಾಮಸ್ಥರಿಂದ ಕೋಟ ಅಮೃತೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ 36ನೇ ವಾರ್ಷಿಕ ಯಕ್ಷ ಸೇವೆಯಾಟ ಕಾರ್ಯಕ್ರಮದಲ್ಲಿ ಇತ್ತೀಚಿಗೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಕಲಾವಿದ ಕೋಟ ಸುರೇಶ್ ಬಂಗೇರ ಇವರಿಗೆ ವಿಶೇಷ ಅಭಿನಂದನೆ ಸಲ್ಲಿಸಿತು.

ಯಕ್ಷಗಾನ ಮೇಳದ ಹಾಗೂ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್, ದೇಗುಲದ ಟ್ರಸ್ಟಿಗಳಾದ ಸುಧಾ ಎ ಪೂಜಾರಿ, ಶಿವ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ಕೋಟ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ಕೋಟ ಶನೀಶ್ವರ ದೇಗುಲದ ಧರ್ಮದರ್ಶಿ ಭಾಸ್ಕರ್ ಸ್ವಾಮಿ, ಸ್ಥಳೀಯರಾದ ಸುರೇಶ್ ಪೂಜಾರಿ, ಚಂದ್ರ ನಾಯ್ಕ್ ಮತ್ತಿತರರು ಇದ್ದರು. ಕೋಟ ಚಂದ್ರ ಆಚಾರ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಕುಶಲವ, ಚಂದ್ರಾವಳಿ, ಶ್ರೀನಿವಾಸ್ ಕಲ್ಯಾಣ ಪ್ರಸಂಗ ಪ್ರದರ್ಶನಗೊಂಡಿತು. ಹಾಡಿಕೆರೆ ಗ್ರಾಮಸ್ಥರ ಯಕ್ಷಸೇವೆಯಾಟದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಕೋಟ ಸುರೇಶ್ ಬಂಗೇರರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *