ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರಂಬಳ್ಳಿ:  ಉಚಿತ ಆರೋಗ್ಯ ಶಿಬಿರ ಸಂಪನ್ನ

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು, ಆಡಳಿತ ಮಂಡಳಿ ಶ್ರೀ ವೆಂಕಟರಮಣ ದೇವಸ್ಥಾನ ಕರಂಬಳ್ಳಿ, ಸಮುದಾಯ ವೈದ್ಯಕೀಯ ವಿಭಾಗ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಮಣಿಪಾಲ,  ಪತಂಜಲಿ ಯೋಗ ಸಮಿತಿ ಉಡುಪಿ, ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಹಾಗೂ ಉಡುಪಿ ಜಿಲ್ಲಾ ಕೃಷಿಕ ಸಂಘ ಇವರ ಸಹಭಾಗಿತ್ವದಲ್ಲಿ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀನಿವಾಸ ಸಭಾ ಭವನದಲ್ಲಿ ಸಾರ್ವಜನಿಕರಿಗಾಗಿ ನಡೆಸಿದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿಯಾಗಿ ನೆರವೇರಿತು.

ಕೆ ಎಮ್ ಸಿ  ಸಮುದಾಯ ವೈದ್ಯಕೀಯ  ವಿಭಾಗದ ವೈದ್ಯ ಡಾ. ಯಶ್,   ಪಿಸಿಯೋಥೆರಪಿಯ ರಾಜೇಶ್ ನಾವಡ, ವಿಜಯ ಗ್ರಾಮೀಣ ಅಭಿವೃದ್ಧಿ ಕರಂಬಳ್ಳಿ ಘಟಕದ ಸ್ಥಾಪಕ  ಅಧ್ಯಕ್ಷ  ಶ್ರೀನಿವಾಸ ಬಲ್ಲಾಳ್,  ಕರಂಬಳ್ಳಿ ಬ್ರಾಹ್ಮಣ ವಲಯದ ಅಧ್ಯಕ್ಷ  ಕೀಳಂಜೆ ಶ್ರೀ ಕೃಷ್ಣರಾಜ ಭಟ್, ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ರಾಘವೇಂದ್ರ ಭಟ್, ಅರ್ಚಕ ದಿವಾಕರ್ ಐತಾಳ್, ಕೃಷಿಕ ಸಂಘದ ಅಧ್ಯಕ್ಷ ಕೆ ಶ್ರೀಪತಿ ಭಟ್, ಆಡಳಿತ ಮಂಡಳಿಯ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ದೀಪ ಬೆಳಗಿಸುವುದರ ಮೂಲಕ ಶಿಬಿರವನ್ನು ಉದ್ಘಾಟಿಸದರು.

150 ಕ್ಕೂ ಹೆಚ್ಚು ಜನರು ಸಾಮಾನ್ಯ ಆರೋಗ್ಯ ತಪಾಸಣೆ,  ಇಸಿಜಿ, ರಕ್ತ ಪರೀಕ್ಷೆ, ENT,  ಕಣ್ಣಿನ ಪೊರೆ ತಪಾಸಣೆ, ಸ್ತ್ರೀ ರೋಗ  ಹಾಗೂ ಚರ್ಮ ವ್ಯಾಧಿ  ತಪಾಸಣೆ ಮಾಡಿಸಿ ಕೊಂಡು ಶಿಬಿರದ ಉಪಯೋಗ ಪಡೆದುಕೊಂಡರು.
ಈ ಸಂದರ್ಭದಲ್ಲಿ  ಉಡುಪಿಯ ಪ್ರಸಿದ್ಧ ಚರ್ಮರೋಗ ತಜ್ಞ ಶ್ರೀ ಸನತ್ ಕುಮಾರ್ ರಾವ್ ಅವರು ಶಿಬಿರಾರ್ಥಿಗಳಿಗೆ ತಪಾಸಣೆ ನಡೆಸಿದರು. ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ ಹಾಗೂ ವಿಜಯ ಗ್ರಾಮೀಣ ಅಭಿವೃದ್ಧಿಯ ಸದಸ್ಯ ನಾಗರಾಜ ಕೆದ್ಲಾಯ ಉಪಸ್ಥಿತರಿದ್ದರು. ಲಕ್ಷ್ಮಣ್ ಕಾಮತ್ ಸ್ವಾಗತಿಸಿ, ನಾಗರಾಜ ಭಟ್ ವಂದಿಸಿ, ರವೀಂದ್ರ ಗುಜ್ಜರಬೆಟ್ಟುಕಾರ್ಯಕ್ರಮವನ್ನು
ನಿರ್ವಹಿಸಿದರು.

Leave a Reply

Your email address will not be published. Required fields are marked *