ಕೋಟ: ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ವಿಶೇಷ ಕಾರ್ಯಕ್ರಮ ಸಾಹಿತ್ಯ ಪ್ರೇರಣೆ ಸಾಹಿತ್ಯ ಸಂಚಾರ 59ನೇ ಸರಣಿ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವಡ್ಡರ್ಸೆ ಇಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಯಿತು ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಗೀತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಅವರು ಸಂಪನ್ಮೂಲ ವ್ಯಕ್ತಿಗಳನ್ನು ಸ್ವಾಗತಿಸಿ ಕನ್ನಡವನ್ನು ಅನ್ನದ ಭಾಷೆಯಾಗಿ ರೂಪಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಹತ್ತರ ಪಾತ್ರವನ್ನು ವಹಿಸುತ್ತಿದೆ ಎಂದು ಶ್ಲಾಘಿಸಿದರು. ನೀಲಾವರ ಸುರೇಂದ್ರ ಅಡಿಗ ಅವರು ಕಥೆ, ಶಬ್ದ ರಚನೆ, ಪ್ರಾಸ ರಚನೆಯ ಬಗ್ಗೆ ತಿಳಿಸಿ ಮಕ್ಕಳೊಂದಿಗೆ ಅಭಿನಯಿಸಿ ಹುರಿದುಂಬಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್ ಸ್ವರದ ಏರಿಳಿತ ಮತ್ತು ಸ್ಪಷ್ಟ ಉಚ್ಚಾರದ ಬಗ್ಗೆ ಜೀವನದಲ್ಲಿ ಭಾವನೆಗಳನ್ನು ತುಂಬುವ ಬಗ್ಗೆ ವಿವರಿಸಿದರು. ಪರಿಷತ್ನ ನಾಗೇಶಮಯ್ಯ ಅವರು ತಾಯಿಯ ಮಹತ್ವವನ್ನು ಕಥೆಗಳ ಮೂಲಕ ವಿವರಿಸಿದರು. ಕಲಾಪೀಠದ ನರಸಿಂಹ ತುಂಗ ಅವರು ಯಕ್ಷಗಾನದ ಪ್ರಾತ್ಯಕ್ಷಿಕೆಯನ್ನು ತೋರಿಸಿ ಹಾಸ್ಯರಸದ ಮಹತ್ವವನ್ನು ತಿಳಿಸಿ ಅಭಿನಯಿಸಿದರು.
ಸಾಹಿತ್ಯ ಪರಿಷತ್ನ ಕಾರ್ಕಡ ಅಚ್ಯುತ ಪೂಜಾರಿ ಹಾಗೂ ಸುಜಾತ ಬಾಯರಿ ವೇದಿಕೆಯಲ್ಲಿ ಮಾತನಾಡುವ ಕ್ರಮ, ಕನ್ನಡ ಪದ್ಯಗಳನ್ನು ಹಾಡಿ ಅಭಿನಯಿಸಿ ತೋರಿಸಿದರು. ಒಟ್ಟಿನಲ್ಲಿ ಈ ಜ್ಞಾನ ದೇಗುಲದಲ್ಲಿ ಭಾವನೆಗಳನ್ನು ತುಂಬುವ ಕೆಲಸ ಮಾಡಿದರು. ವಿದ್ಯಾರ್ಥಿಗಳು ಖುಷಿಯಿಂದ ತಮ್ಮ ಅನಿಸಿಕೆಗಳನ್ನು ತಿಳಿಸಿದರು, ಶಿಕ್ಷಕಿ ಯಶೋದ ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಪನ್ಮೂಲ ವ್ಯಕ್ತಿಗಳಿಗೆ ಧನ್ಯವಾದ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ವಿಶೇಷ ಕಾರ್ಯಕ್ರಮ ಸಾಹಿತ್ಯ ಪ್ರೇರಣೆ ಸಾಹಿತ್ಯ ಸಂಚಾರ 59ನೇ ಸರಣಿ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವಡ್ಡರ್ಸೆ ಇಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಯಿತು. ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಗೀತಾ, ಕಸಾಪ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್ , ಸಾಹಿತ್ಯ ಪರಿಷತ್ನ ಕಾರ್ಕಡ ಅಚ್ಯುತ ಪೂಜಾರಿ ಹಾಗೂ ಸುಜಾತ ಬಾಯರಿ ಇದ್ದರು.












Leave a Reply