ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಹಿತ್ಯ ಸಂಕ್ರಮಣಕ್ಕೆ ಶಿಕ್ಷಕರೇ ರಹದಾರಿ – ಸಿ. ಲೋಕೇಶ್

ಕೋಟ : ಹುಲುಸಾದ ಸಾಹಿತ್ಯದ ಹರವುಗಳನ್ನು ಮಕ್ಕಳ ಮೂಲಕ ರವಾನಿಸಿ ಆ ಮೂಲಕ ಸಂಸ್ಕöÈತಿಯನ್ನು ಬುನಾದಿಯಾಗಿಸುವ ದೊಡ್ಡ ಹೊಣೆ ಶಿಕ್ಷಕರ ಮೇಲಿದೆ. ಈ ದಿಸೆಯಲ್ಲಿ ಕಾರ್ಯತತ್ಪರರಾದರೆ  ಸಾಹಿತ್ಯ ಸಮೃದ್ದವಾಗಿ ಸೃಷ್ಟಿಯಾಗಬಹುದು ಎಂದು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ  ಲೋಕೇಶ.ಸಿ ನುಡಿದರು.

ಅವರು ಕಾರಂತ ಪ್ರತಿಷ್ಠಾನ  ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ , ರೋಟರಿ ಕ್ಲಬ್ ಹಂಗಾರಕಟ್ಟೆ – ಸಾಸ್ತಾನ, ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ, ನೆನಪು ಮೂವೀಸ್ ಮತ್ತು ಉಸಿರು ಕೋಟ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕರ ಕಾಲಮಿತಿ ಸಾಹಿತ್ಯ ಸಮ್ಮೇಳನ ಉತ್ತರೋತ್ತರದಲ್ಲಿ ಅವರು ಮಾತನಾಡುತ್ತಿದ್ದರು. ಶುಭ ಹಾರೈಸಿದ ಟ್ರಸ್ಟ್ನ ಗೌರವ ಅಧ್ಯಕ್ಷ ಆನಂದ ಸಿ ಕುಂದರ್ ಕಾಲಮಿತಿಯ ಸಾಹಿತ್ಯ ಸಮ್ಮೇಳನ ಅಪೂರ್ವವಾದದು ಸಮಯದ ಸಮನ್ವಯತೆಗೆ ಇದು ಪೂರಕ ಎಂದರು.

ಇದೇ ಸಂದರ್ಭದಲ್ಲಿ ಸಮ್ಮೇಳನ ಅಧ್ಯಕ್ಷ ಸುರೇಶ ಮರಕಾಲ ಸೇರಿದಂತೆ ಕಾರ್ಯಕ್ರಮ ಪೋಷಕರಾದ ರೋಟರಿ ಕ್ಲಬ್ ಹಂಗಾರಕಟ್ಟೆಯ ಅಧ್ಯಕ್ಷೆ  ಜ್ಯೋತಿ ಉದಯ ಪೂಜಾರಿ, ಕಾರ್ಯದರ್ಶಿ  ಮುರಲೀಧರ ನಾಯರಿ, ಯಕ್ಷ ಚಿಂತಕ  ವಿಘ್ನೇಶ್ ಜಿ. ಎಲ್ ರವರನ್ನು ಸನ್ಮಾನಿಸಲಾಯಿತು. ಬಳಿಕ ಅಧ್ಯಕ್ಷರೊಂದಿಗೆ ಸಂವಾದ, ಕವಿಗೋಷ್ಠಿ, ತಾಳಮದ್ದಳೆ ಸಂಗೊಳ್ಳಿ ರಾಯಣ್ಣ ಪ್ರದರ್ಶನ ನಡೆಯಿತು.

ವೇದಿಕೆಯಲ್ಲಿ ಕೋಟತಟ್ಟು ಪಂಚಾಯತ್ ಅಧ್ಯಕ್ಷ ಕೆ. ಸತೀಶ ಕುಂದರ್ ಬಾರಿಕೆರೆ, ಡಯಟ್‌ನ ಉಪನ್ಯಾಸಕ ಯೋಗಾನರಸಿಂಹ, ಟ್ರಸ್ಟಿಗಳಾದ ಸುಶೀಲ ಸೋಮಶೇಖರ, ಸುಬ್ರಾಯ ಆಚಾರ್, ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್, ಕಾರ್ಕಳ ಕ. ಸಾ.ಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯದರ್ಶಿ ನರೇಂದ್ರ ಕುಮಾರ್  ಕೋಟ ಸ್ವಾಗತಿಸಿ, ಟ್ರಸ್ಟಿಗಳಾದ  ಸತೀಶ್ ವಡ್ಡರ್ಸೆ ನಿರೂಪಿಸಿದರು.

ಕಾರಂತ ಪ್ರತಿಷ್ಠಾನ  ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ , ರೋಟರಿ ಕ್ಲಬ್ ಹಂಗಾರಕಟ್ಟೆ – ಸಾಸ್ತಾನ, ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ, ನೆನಪು ಮೂವೀಸ್ ಮತ್ತು ಉಸಿರು ಕೋಟ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕರ ಕಾಲಮಿತಿ ಸಾಹಿತ್ಯ ಸಮ್ಮೇಳನ ಉತ್ತರೋತ್ತರದಲ್ಲಿ ಸಮ್ಮೇಳನ ಅಧ್ಯಕ್ಷ ಸುರೇಶ ಮರಕಾಲ ಇವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *