ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಾರ್ಕಡದ ಹೊಸ ಹಿ.ಪ್ರಾ.ಶಾಲೆಯ ಶಾಲೆ ಶೈಕ್ಷಣಿಕ ಸಾಧನೆ ಪ್ರಶಂಸನೀಯ- ರೂಪಶ್ರೀ

ಕೋಟ: ಸಾಲಿಗ್ರಾಮ ಹೊಸ ಕಾರ್ಕಡದ ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವ ಚಿಣ್ಣರ ಹಬ್ಬ ಚಿತ್ತಾರ- 2026 ಕಾರ್ಯಕ್ರಮ ಸಮಾರೋಪ ಸಮಾರಂಭ ಶಾಲಾ ಸಭಾಂಗಣದಲ್ಲಿ ಇತ್ತೀಚಿಗೆ ಜರಗಿತು.

ಅಂಬಲಪಾಡಿ ಜನಾರ್ಧನ ಮಹಾಕಾಳಿ ದೇಗುಲದ ಧರ್ಮದರ್ಶಿ ಡಾ| ನಿ.ಬಿ. ವಿಜಯ ಬಲ್ಲಾಳ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಚಿಣ್ಣರೆ ಹಬ್ಬದ ಮೂಲಕ ಮಕ್ಕಳ ಪ್ರತಿಭೆ ವಿಕಸನದ ಜತೆಗೆ ಶಾಲೆಯ ಅಭಿವೃದ್ಧಿಗೆ ಸಹಾಯಕವಾಗಲಿದೆ. ಅನುದಾನಿತ ಶಾಲೆಗಳು ಸಂಕಷ್ಟದ ಪರಿಸ್ಥಿತಿಯಲ್ಲಿರುವ ಈ ಕಾಲಘಟ್ಟದಲ್ಲಿ ಕಾರ್ಕಡ ಹಿ.ಪ್ರಾ. ಶಾಲೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಶಿಕ್ಷಣ ವ್ಯವಸ್ಥೆಗೆ ಮಾದರಿಯಾಗಿದೆ ಎಂದರು.

ಮಣಿಪಾಲ ಗ್ರೂಪ್ಸ್ ನ ಸಿ.ಎಸ್.ಆರ್. ಟೀಮ್ ಲೀಡರ್ ರೂಪಶ್ರೀ ಮಾತನಾಡಿ, ಹೊಸ ಕಾರ್ಕಡ ಶಾಲೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ನಮ್ಮ ಮಣಿಪಾಲ ಗ್ರೂಪ್ ನ ಹಿರಿಯರು ಈ ಸಂಸ್ಥೆ ಮಾದರಿ ಶಾಲೆ ಎನ್ನುವ ಗೌರವ ಹೊಂದಿದ್ದಾರೆ. ಹೀಗಾಗಿ ಪ್ರತಿ ವರ್ಷ ಶಾಲೆಯ ಅಭಿವೃದ್ಧಿಗೆ ಸಂಸ್ಥೆ ಒಂದಷ್ಟು ಕೊಡುಗೆ ನೀಡುತ್ತಿದೆ ಎಂದರು.

ಶಾಲಾ ಹಿಂದಿನ ವಿದ್ಯಾರ್ಥಿ ಟಿ.ಪಿ ಎಂಜಿ ಗ್ಲೋಬಲ್ ಸರ್ವಿಸ್ ಲಿ.ಬೆಂಗಳೂರು ಇದರ ಅಸೋಸಿಯೇಟ್ ಪಾಟ್ನರ್ ಅನಂತ ಕುಮಾರ್ ಸ್ವಸ್ತಿ ವಾಚನ ಗೈದರು
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೆ.ವಿಶ್ವೇಶ್ವರ ಹೊಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಶಾಲೆಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಉಡುಪಿ ಇಂಡಸ್ತ್ರೀಯಲ್  ಕೋ ಆಪ್ ರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ರಾಜೇಶ್ ಹೆಗ್ಡೆ ಉಪನ್ಯಾಸಕಸುಜಯೀಂದ್ರ ಹಂದೆ, ಬ್ರಹ್ಮಾವರ ತಾಲೂಕು ದೈ.ಶಿ.ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಸಾಮಂತ್, ಮುಖ್ಯ ಶಿಕ್ಷಕ ಬಿ.ಎನ್. ಸತ್ಯನಾರಾಯಣ, ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ಗುರುರಾಜ್ ಉಪಾಧ್ಯ, ಶಾಲಾ ವಿದ್ಯಾರ್ಥಿ ನಾಯಕ ಅಭಯ್ ಕೆ., ಮೊದಲಾದವರಿದ್ದರು. ಶಾಲಾ ಸಂಚಾಲಕ ಎನ್. ಪ್ರಭಾಕರ ಕಾಮತ್ ಸ್ವಾಗತಿಸಿ, ಗೌರವ ಶಿಕ್ಷಕಿ ಸುಮಾ ಜಿ. ಹಾಗೂ ಐಶ್ವರ್ಯ ಕಾರ್ಯಕ್ರಮ ನಿರೂಪಿಸಿ, ಸಹಾಯಕ ಶಿಕ್ಷಕ ಸುಧೀರ್ ಕಾಮತ್ ವಂದಿಸಿದರು.

ಸಾಲಿಗ್ರಾಮ ಹೊಸ ಕಾರ್ಕಡದ ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವ ಚಿಣ್ಣರ ಹಬ್ಬ ಚಿತ್ತಾರ- 2026 ಕಾರ್ಯಕ್ರಮ ಸಮಾರೋಪ ಶಾಲಾ ಸಭಾಂಗಣದಲ್ಲಿ ಮಣಿಪಾಲ ಗ್ರೂಪ್ಸ್ ನ ಸಿ.ಎಸ್.ಆರ್. ಟೀಮ್ ಲೀಡರ್ ರೂಪಶ್ರೀ ಮಾತನಾಡಿದರು. ಅಂಬಲಪಾಡಿ ಜನಾರ್ಧನ ಮಹಾಕಾಳಿ ದೇಗುಲದ ಧರ್ಮದರ್ಶಿ ಡಾ| ನಿ.ಬಿ. ವಿಜಯ ಬಲ್ಲಾಳ್, ಶಾಲಾ ಹಿಂದಿನ ವಿದ್ಯಾರ್ಥಿ ಟಿ.ಪಿ ಎಂಜಿ ಗ್ಲೋಬಲ್ ಸರ್ವಿಸ್ ಲಿ.ಬೆಂಗಳೂರು ಇದರ ಅಸೋಸಿಯೇಟ್ ಪಾಟ್ನರ್ ಅನಂತ ಕುಮಾರ್ ಇದ್ದರು

Leave a Reply

Your email address will not be published. Required fields are marked *