ಕೋಟ: ಕನ್ನಡ ಶಾಲೆ ಉಳಿಸಿ ಬೆಳಸುವಲ್ಲಿ ನಾವೆಲ್ಲ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರ ಹಾಗೂ ಪೋಷಕರ ಸಹಕಾರದಿಂದ ಈ ಶಾಲೆ ಕನ್ನಡ ಶಾಲೆಯಾಗಿ , ಸುಮಾರು 160 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿರುವುದು ತುಂಬಾ ಶ್ಲಾಘನೀಯ ಕಾರ್ಯ ಎಂದು ಸಾಮಾಜಿಕ ಚಿಂತಕ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಹೇಳಿದರು.
ಇಲ್ಲಿನ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ಇದರ ಮಕ್ಕಳ ಹಬ್ಬ ಚಿತ್ತಾರ 2026 ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸರಕಾರಿ ಶಾಲೆಗಳ ಉಳಿವಿಗೆ ಸರಕಾರ ಹೊಸ ಯೋಜನೆಗಳನ್ನು ರೂಪಿಸಬೇಕು ಎಂದರು.
ಧ್ವಜಾರೋಹಣವನ್ನು ಸಾಲಿಗ್ರಾಮ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್ ನಿರ್ವಹಿಸಿದರು.
ಶಾಲಾ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜಯಶಾಲಿಗಳಾದ ವಿದ್ಯಾರ್ಥಿಗಳಿಗೆ ಬ್ರಹ್ಮಾವರ ಕ್ಷೇತ್ರ ದೈಹಿಕ ಶಿಕ್ಷಣಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ನೆರವೆರಿಸಿದರು.
ಮುಖ್ಯ ಅಭ್ಯಾಗತರಾಗಿ ಪಟ್ಟಣಪಂಚಾಯತ್ ಹಿರಿಯ ಲೆಕ್ಕಾಧಿಕಾರಿ ಚಂದ್ರಶೇಖರ ಸೋಮಯಾಜಿ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ವಿಶ್ವೇಶ್ವರ ಹೊಳ್ಳ, ಸಂಚಾಲಕ ಎನ್ ಪ್ರಭಾಕರ್ ಕಾಮತ್, ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಕೆ.ಗುರುರಾಜ್ ಉಪಾಧ್ಯಾ, ಶಾಲಾ ವಿದ್ಯಾರ್ಥಿ ನಾಯಕ ಅಭಯ್ ಕೆ, ಉಪಸ್ಥಿತರಿದ್ದರು. ಯುವ ಉದ್ಯಮಿ ಕೆ.ಅನಂತ ಕುಮಾರ್ ಕಾರ್ಕಡ ಸ್ವಸ್ತಿವಾಚನಗೈದರು. ಶಾಲಾ ಮುಖ್ಯ ಶಿಕ್ಷಕ ಬಿ.ಎನ್ ಸತ್ಯನಾರಾಯಣ ಸ್ವಾಗತಿಸಿದರು. ಸಹ ಶಿಕ್ಷಕ ಸುಧೀರ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸ್ವರ್ಣ ಬಹಮಾನ ಪತ್ರವಾಚಿಸಿದರು.
ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ಇದರ ಮಕ್ಕಳ ಹಬ್ಬ ಚಿತ್ತಾರ 2026 ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಹಿರಿಯ ಲೆಕ್ಕಾಧಿಕಾರಿ ಚಂದ್ರಶೇಖರ ಸೋಮಯಾಜಿ ಬಹುಮಾನ ವಿತರಿಸಿದರು. ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ವಿಶ್ವೇಶ್ವರ ಹೊಳ್ಳ,ಸಂಚಾಲಕ ಎನ್ ಪ್ರಭಾಕರ್ ಕಾಮತ್ ಇದ್ದರು.












Leave a Reply