ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜಗತ್ತಿನಲ್ಲಿಯೇ ಅಮರಶಿಲ್ಪಿಗಳಾಗಿ ಗುರುತಿಸಿಕೊಂಡವರು ಜಕಣಾಚಾರ್ಯರು- ಬೆಂಗಳೂರಿನ ಚಾರ್ಟಡ್ ಅಕೌಂಟೆoಟ್ ಸಿ.ಎ.ನಾಗರಾಜ ಆಚಾರ್ಯ

ಕೋಟ: ಎಲ್ಲಾ ರಂಗದಲ್ಲಿಯೂ ಕೂಡ ಒಬೋಬ್ಬರೂ ಶ್ರೇಷ್ಠ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ಇದರಂತೆ ನಮ್ಮ ವಿಶ್ವಕರ್ಮ ಸಮಾಜದಲ್ಲಿಯೂ ಕೂಡ ವಿಶೇಷವಾಗಿ ಗುರುತಿಸಿಕೊಂಡು ಸತತ ಪ್ರಯತ್ನ ಹಾಗೂ ಪರಿಶ್ರಮದ ಮೂಲಕ ಜಗತ್ತಿನಲ್ಲಿಯೇ ಅಮರಶಿಲ್ಪಿಗಳಾಗಿ ಜಕಣಾಚಾರ್ಯರು ಸಾಕಷ್ಟು ಕಲೆಗಳ ಕೊಡುಗೆಗಳನ್ನು ನೀಡಿದ್ದಾರೆ ಎಂದು ಬೆಂಗಳೂರಿನ ಚಾರ್ಟಡ್ ಅಕೌಂಟೆoಟ್ ಸಿ.ಎ.ನಾಗರಾಜ ಆಚಾರ್ಯ ಹೇಳಿದರು.

ವಿಶ್ವಕರ್ಮ ಒಕ್ಕೂಟ ಕೇಂದ್ರ ಸಂಘ ದಕ್ಷಿಣ ಕನ್ನಡ ಇವರ ನೇತೃತ್ವದಲ್ಲಿ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ ಕೋಟೇಶ್ವರ,  ಶ್ರೀ ವಿಶ್ವಬ್ರಾಹ್ಮಣ ಸಂಘ ವಿಶ್ವ ಬ್ರಾಹ್ಮಣಾಪುರ ವಕ್ವಾಡಿ, ವಿಶ್ವಕರ್ಮ ಸಹಕಾರ ಬ್ಯಾಂಕ್ ಮಂಗಳೂರು, ಎಸ್‌ಕೆಜೆಬಿ ಕೋಅಪರೇಟಿವ್ ಸೊಸೈಟಿ ಮಂಗಳೂರು, ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ಕುಂಭಾಸಿ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಕುಂಭಾಸಿ ವಿವಾ ಕನ್ವೆಷನ್ ಹಾಲ್‌ನಲ್ಲಿ ಜರುಗಿದ ಅಮರಶಿಲ್ಪಿ ಜಕಣಾಚಾರ್ಯ ಸಂಸ್ಮರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಬೇಲೂರು ಹಳೆಬೀಡು ಸೋಮನಾಥೇಶ್ವರ ದೇವಸ್ಥಾನ ಶಿಲ್ಪಿಗಳಾಗಿದ್ದ ಜಕಣಾಚಾರ್ಯರು ನಮಗೆಲ್ಲ ಸ್ಪೂರ್ತಿಯಾಗಿದ್ದಾರೆ. ಮಾನವ ನಿರ್ಮಿತವೂ ಅಥಾವ ದೈವಸೃಷ್ಟಿ ನಿರ್ಮಿತವೂ ಎನ್ನುವರಷ್ಟಿಗೆ ಶಿಲ್ಪಕಲೆಯ ಕೈಚಳಕವನ್ನು ಸಮಾಜಕ್ಕೆ ತೋರ್ಪಡಿಸಿದ್ದಾರೆ. ರಾಷ್ಟçಕವಿ ಕುವೆಂಪು ಅವರ ನಾಡಗೀತೆಯಲ್ಲಿಯೂ ಕೂಡ ಜಕಣಾಚಾರ್ಯರ ಕುರಿತು ಪದಗಳ ಮೂಲಕ ಉಲ್ಲೇಖಿಸಿದ್ದಾರೆ. ಕಷ್ಟದ ದಿನದ ಸಂದರ್ಭ ಬಡತನದಲ್ಲಿಯೂ ಕೂಡ ಸಾಧನೆ ಮಾಡಿದ ವ್ಯಕ್ತಿ ಜಕಣಾಚಾರ್ಯರು ಎಂದರು. 

ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ಖ್ಯಾತ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ  ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಅಮರಶಿಲ್ಪಿ ಜಕಣಾಚಾರ್ಯ ಸಂಸ್ಮರಣೆಯ ಕರ‍್ಯಕ್ರಮವನ್ನು ಉದ್ಘಾಟಿಸಿದರು. ಪಿಯುಸಿ ಸಾಧಕ ವಿದ್ಯಾರ್ಥಿ ಪ್ರಥಮ್ ಆಚಾರ್ಯ ಶೈಕ್ಷಣಿಕ ದತ್ತಿನಿಧಿ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣೆಯ ಕರ‍್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ವಿಶ್ವಕರ್ಮ ಒಕ್ಕೂಟದ ಗೌರವಾಧ್ಯಕ್ಷ ಯು.ಕೆ.ಎಸ್. ಸೀತಾರಾಮ ಆಚಾರ್ಯ, ಕೋಟೇಶ್ವರ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಸತ್ಯನಾರಾಯಣ ಆಚಾರ್ಯ, ಕೋಟೇಶ್ವರ ಶ್ರೀವಿಶ್ವಕರ್ಮ ಯುವಕ ದಳದ ಅಧ್ಯಕ್ಷ ಚಂದ್ರಯ್ಯ ಆಚಾರ್ಯ, ಕೋಟೇಶ್ವರ ಶ್ರೀದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ನಾಗರತ್ನ ಆಚಾರ್ಯ ಉಪಸ್ಥಿತರಿದ್ದರು. ಈ ಸಂದರ್ಭ ಕಾರ್ಕಳ ಪೆರ್ವಾಜೆಯ ಶಿಲ್ಪಿ ಪಿ.ದಾಮೋದರ ಆಚಾರ್ಯ ಇವರಿಗೆ ಅಮರಶಿಲ್ಪಿ ಜಕಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಟ್ಟು 121 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ದತ್ತಿನಿಧಿ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಗಾಯಿತ್ರಿ ಪ್ರಕಾಶ್ ಆಚಾರ್ ಪ್ರಾರ್ಥಿಸಿದರು. ಒಕ್ಕೂಟದ ಪ್ರಧಾನ ಕರ‍್ಯದರ್ಶಿ ಕೆ.ಮುರಳೀಧರ ಉಡುಪಿ ಕರ‍್ಯಕ್ರಮ ನಿರ್ವಹಿಸಿದರು.  ಕರ‍್ಯದರ್ಶಿ ಪ್ರಕಾಶ್ ಆಚಾರ್ಯ ನೇರಂಬಳ್ಳಿ ವಂದಿಸಿದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ಖ್ಯಾತ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅಮರಶಿಲ್ಪಿ ಜಕಣಾಚಾರ್ಯ ಸಂಸ್ಮರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ವಿಶ್ವಕರ್ಮ ಒಕ್ಕೂಟದ ಗೌರವಾಧ್ಯಕ್ಷ ಯು.ಕೆ.ಎಸ್.ಸೀತಾರಾಮ ಆಚಾರ್ಯ, ಕೋಟೇಶ್ವರ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಸತ್ಯನಾರಾಯಣ ಆಚಾರ್ಯ ಇದ್ದರು.

Leave a Reply

Your email address will not be published. Required fields are marked *