ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಹಿತಿ ನಾರಾಯಣ ಖಾರ್ವಿ ನುಡಿ ನಮನ ಕಾರ್ಯಕ್ರಮ

ಕೋಟ: ಕೊಂಕಣಿ ಹಾಗೂ ಕನ್ನಡ ಭಾಷೆಯಲ್ಲಿ ಸಾಕಷ್ಟು ಸಾಧನೆ ಮಾಡರುವ ಕುಂದಾಪುರ ನಾರಾಯಣ ಖಾರ್ವಿ ಅವರ ಸಾಧನೆ ಅನನ್ಯವಾದುದು,ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ, ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಜನಮಾನಸದಲ್ಲಿ ಹಚ್ಚ ಹಸಿರಾಗಿದೆ. ಕಾರ್ಮಿಕರ ನಾಯಕರಾಗಿಯೂ ಅವರ ಕೊಡುಗೆ ಅಮೂಲ್ಯವಾಗಿದೆ.

ಅವರ ನಿಧನದಿಂದ ಸಾಂಸ್ಕೃತಿಕ  ಲೋಕಕ್ಕೆ ತುಂಬಲಾರದ ನಷ್ಟವೆಂದು ಇತ್ತೀಚಿಗೆ ಮಣೂರಿನಲ್ಲಿ ನಡೆದ ನಾರಾಯಣ ಖಾರ್ವಿ ನುಡಿ ನಮನ ಕಾರ್ಯಕ್ರಮದಲ್ಲಿ ಉಡುಪಿಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಸಾಹಿತ್ಯ ಪರಿಷತ್ತಿನ ಪರವಾಗಿ ಅಂತಿಮ ನಮನ ಸಲ್ಲಿಸಿದರು. ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ ಕುಂದಾಪುರ ನಾರಾಯಣ ಖಾರ್ವಿ ಅವರ ಸಾಧನೆ, ಕಾರ್ಯ ತತ್ಪರತೆ ಬಗ್ಗೆ ಬೆಳಕು ಚಲ್ಲಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಗಲಿದ ನಾರಾಯಣ ಖಾರ್ವಿಯವರ ಭಾವಚಿತ್ರಕ್ಕೆ ಪುಷ್ಭನಮನ ಸಲ್ಲಿಸಿದರು.

ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಸತೀಶ್ ಕುಂದರ್, ಸ್ಥಳೀಯ ಗಣ್ಯರಾದ ಗೋಪಾಲ ಪೈ,ತಿಮ್ಮ ಪೂಜಾರಿ, ರವಿ ಟಿ ನಾಯ್ಕ್, ಮಹೇಶ್ ಹೊಳ್ಳ, ಖಾರ್ವಿಯವರ ಪುತ್ರರಾದ ಸುನಿಲ್ ಕುಮಾರ್ ಖಾರ್ವಿ, ಸಮಿತ್ ಕುಮಾರ್, ಪುತ್ರಿ ಸುಷ್ಮಾ ರಾಣಿ, ಪತ್ನಿ ಕೆ ಭುವನೇಶ್ವರಿ ಉಪಸ್ಥಿತರಿದ್ದರು. ನೀಲಾವರ ಸುರೇಂದ್ರ ಅಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಇತ್ತೀಚಿಗೆ ಮಣೂರಿನಲ್ಲಿ  ನಡೆದ ನಾರಾಯಣ ಖಾರ್ವಿ ನುಡಿ ನಮನ ಕಾರ್ಯಕ್ರಮದಲ್ಲಿ ಉಡುಪಿಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಸಾಹಿತ್ಯ ಪರಿಷತ್ತಿನ ಪರವಾಗಿ ಅಂತಿಮ ನಮನ ಸಲ್ಲಿಸಿದರು. ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *