ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರ್ಣಾಟಕ ಬ್ಯಾಂಕ್ ಜನಸ್ನೇಹಿ ಬ್ಯಾಂಕ್ ಗೌರವ- ಕೆ.ಅನಂತಪದ್ಮನಾಭ ಐತಾಳ್

ಕೋಟ: ಕರ್ಣಾಟಕ ಬ್ಯಾಂಕ್ ಜನಸ್ನೇಹಿ ಬ್ಯಾಂಕ್ ಇಲ್ಲಿನ ಸೇವೆ ಜನಮನದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಸದಸ್ಯ ಕೆ.ಅನಂತಪದ್ಮನಾಭ ಐತಾಳ್ ಹೇಳಿದರು. ಶುಕ್ರವಾರ ಕರ್ಣಾಟಕ ಬ್ಯಾಂಕ್ ಕೋಟ ಶಾಖೆಯ 59ನೇ ವರ್ಷದ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ ನಾವಡ ಮಾತನಾಡಿ ಕರ್ಣಾಟಕ ಬ್ಯಾಂಕ್ ಗ್ರಾಹಕ ಸ್ನೇಹಿ ಬ್ಯಾಂಕ್ ಮನ್ನಣೆ ಪಡೆದಿದೆ,ಅದರ ಸಾಮಾಜಿಕ ಕಾರ್ಯ ಕೂಡಾ ಪ್ರಶಂಸನೀಯ ಎಂದರು.

ಸಭೆ ಅಧ್ಯಕ್ಷತೆಯನ್ನು ಕರ್ಣಾಟಕ ಬ್ಯಾಂಕ್ ಕ್ಲಸ್ಟರ್ ಹೆಡ್ ವಿಷ್ಣಮೂರ್ತಿ ಉಪಾಧ್ಯಾ ವಹಿಸಿದರು. ಶಾಖೆಗೆ 59ನೇ ವರ್ಷದ ಹಿನ್ನಲ್ಲೆಯಲ್ಲಿ ಕೇಕ್ ಕತ್ತರಿಸಿ ಬ್ಯಾಂಕ್‌ನ ಪರಿವಾರ ಸಂಭ್ರಮಿಸಿದರು. ಕೋಟ ಶಾಖೆ ಪ್ರಭಂಧಕ ಗುರುರಾಜ್ ಸರಳಾಯ,ಕೆ ಶ್ರೀಕಾಂತ್ ಶೆಣೈ,ಸದಾನಂದ ಗಿಳಿಯಾರು, ನಿವೃತ್ತ ಡಿಜಿಎಂ ಅನಂದರಾಮ ಅಡಿಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬ್ಯಾಂಕ್ ಸಿಬ್ಬಂದಿ ವಿನಯ್ ಸ್ವಾಗತಿಸಿ ನಿರೂಪಿಸಿದರು.ಸಹಾಯಕ ಪ್ರಭಂಧಕಿ ಜ್ಯೋತಿ ವಂದಿಸಿದರು.

ಕರ್ಣಾಟಕ ಬ್ಯಾಂಕ್ ಕೋಟ ಶಾಖೆಯ 59ನೇ ವರ್ಷದ ವರ್ಷಾಚರಣೆ ಕಾರ್ಯಕ್ರಮದಲ್ಲಿ ್ಲ ಕೇಕ್ ಕತ್ತರಿಸಿ ಬ್ಯಾಂಕ್‌ನ ಪರಿವಾರ ಸಂಭ್ರಮಿಸಿದರು. ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ, ಕರ್ಣಾಟಕ ಬ್ಯಾಂಕ್ ಕ್ಲಸ್ಟರ್ ಹೆಡ್ ವಿಷ್ಣಮೂರ್ತಿ ಉಪಾಧ್ಯಾ, ನಿವೃತ್ತ ಡಿಜಿಎಂ ಅನಂದರಾಮ ಅಡಿಗ ಇದ್ದರು.

Leave a Reply

Your email address will not be published. Required fields are marked *