ಕೋಟ: ಕೋಟ ಸಮುದ್ಯುತಾ ಸಂಸ್ಥೆಯ ನೇತೃತ್ವದಲ್ಲಿ
ಡಾ.ಸಿ.ಅಶ್ವಥ್ ಅವರ ಸ್ಮರ ಸಂಯೋಜನೆಯ ಗೀತೆಗಳ ಮಧುರ ಪ್ರಸ್ತುತಿಯ ಸತ್ಯವತಾರ ಕಾರ್ಯಕ್ರಮ ಡಿ.20ರಂದುಸಂಜೆ ಗಂಟೆ 5.00 ರಿಂದ ನಡೆಯಲಿದೆ ಎಂದು ರಾಘವೇಂದ್ರ ಕಾಂಚನ್ ತಿಳಿಸಿದರು. ಕೊಟದ. ಸಮುದ್ಯುತಾ ಸಭಾಂಗಣಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಸಿ.ಅಶ್ವಥ್ ಅವರ ಕಂಠ ಮಾಧುರ್ಯದಲ್ಲಿ ಕೇಳುಗರ ಮನ ತಲುಪಿದ್ದ ಹಾಗೂ ಅವರದೇ ಶೈಲಿಯಲ್ಲಿ ರಾಗ ಸಂಯೋಜನೆಗೊಂಡಿದ್ದ ಮರೆಯಲಾರದ ಹಾಡುಗಳನ್ನು ಗಾಯಕರು ಪ್ರಸ್ತುತ ಪಡಿಸಲಿದ್ದಾರೆ. ಎಂ.ಡಿ.ಪಲ್ಲವಿ, ರಾಮಚಂದ್ರ ಹಡಪದ ಹಾಗೂ ಕರಾವಳಿಯ ಪ್ರತಿಭೆ ಮೇಘನಾ ಕುಂದಾಪುರ ಹಾಡುಗಳನ್ನು ಹಾಡಲಿದ್ದಾರೆ. ಡಾ.ಸಿ.ಅಶ್ವಥ್ ಅವರ ಒಡನಾಡಿಗಳಾಗಿದ್ದ ಬಿ.ಆರ್.ಲಕ್ಷಣ ರಾವ್, ಟಿ.ಎಸ್.ನಾಗಾಭರಣ, ಜೋಗಿ, ಡಾ.ವಿ.ನಾಗೇಂದ್ರಪ್ರಸಾದ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಳ್ಳಲಿದ್ದಾರೆ. ನ್ಯೂಸ್ ಫಸ್ಟ್ ಆಡಳಿತ ನಿರ್ದೇಶಕ ರವಿಕುಮಾರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಪ್ರಸಿದ್ಧ ನಿರೂಪಕ ರಾಘವೇಂದ್ರ ಕಾಂಚನ್ ಅವರ ನಿರೂಪಣೆಯಲ್ಲಿ ಸುಮಾರು 2 ಗಂಟೆ 30 ನಿಮಿಷಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮ ಉಚಿತವಾಗಿದ್ದು, ಕಾರ್ಯಕ್ರಮ ನಿಗದಿತ ಸಮಯಕ್ಕೆ ಪ್ರಾರಂಭವಾಗಲಿದೆ ಎಂದು ಸಮುದ್ಯುತಾ ಗ್ರೂಫ್ ನ ಸಂದೀಪ್ ಶೆಟ್ಟಿ ನುಡಿದರು.
ಪತ್ರಿಕಾಗೋಷ್ಟಿಯಲ್ಲಿ ಉದಯಕುಮಾರ್ ಶೆಟ್ಟಿ ಪಡುಕೆರೆ, ಯೋಗೇಂದ್ರ ತಿಂಗಳಾಯ, ಹರೀಶ್, ಗಿರೀಶ್ ಬಂಗೇರ
ಉಪಸ್ಥಿತರಿದ್ದರು.
ಡಿ.20 ರಂದು ಸಮುದ್ಯತಾ ಗ್ರೂಪ್ಸ್ ಸಾರಥ್ಯದಲ್ಲಿ ತೆಕ್ಕಟ್ಟೆಯಲ್ಲಿ ‘ಸತ್ಯಾವತಾರ’












Leave a Reply