ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಡಾ. ಕೋಟ ಶಿವರಾಮ ಕಾರಂತರ ಸಾಮಾಜಿಕ ಬದುಕು ಪ್ರಚಲಿತಗೊಳ್ಳಲಿಲ್ಲ- ಕೋಟ ಸದಾರಮೆ ಕಾರಂತ

ಕೋಟ:  ಡಾ. ಶಿವರಾಮ ಕಾರಂತರ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸೃಜನಶೀಲತೆಯು ಹೆಚ್ಚು ಜನಜನಿತವಾಗಿದ್ದರೆ; ಅವರ ಸಾಮಾಜಿಕ ಮುಖದ ಪರಿಚಯ ಅಷ್ಟಾಗಿ ಪ್ರಕಟವಾಗಿಲ್ಲ. ಆರ್ಥಿಕ ಬಡತನ ಹೊಂದಿದ ವಿದ್ಯಾರ್ಥಿಗಳು ಹಾಗೂ ಸಾಮಾನ್ಯಜನರೆಡೆಗಿನ ಅವರ ಸ್ಪಂದನ ನಿರಂತರವಾಗಿತ್ತು ಎಂದು ಕಲಾವಿದೆ,ಲೇಖಕಿ,ಕಾರಂತರ ಒಡನಾಡಿ ಕೋಟ ಸದಾರಮೆ ಕಾರಂತ ನುಡಿದರು.

ಅವರು ಇತ್ತೀಚಿಗೆ ರಸರಂಗ  ಕೋಟ ಇವರು ಹಯಗ್ರೀವ ಸಭಾಭವನ ತೆಕ್ಕಟ್ಟೆ ಇಲ್ಲಿ ಹಮ್ಮಿಕೊಂಡಿದ್ದ ಶಿವರಾಮಕಾರಂತರ ಸೃತಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.  ಅವರ ಜೀವನದ ದಾರಿ ಬರೆದು ತೋರಿಸುವುದಷ್ಟೇ ಆಗಿರಲಿಲ್ಲ, ಹೇಗೆ ಬದುಕಬಹುದು ಎನ್ನುವುದನ್ನು ನಡೆದು ತೋರಿಸಿದರು ಎಂದು ಅಂದರು.
ಕಾರoತ ಬಾಲ ಪುರಸ್ಕಾರ ಪಡೆದ ಬಾಲಕಲಾವಿದೆ ಕುಮಾರಿ ಪರಿಣಿತ ವೈದ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಸರಂಗದ ಅಧ್ಯಕ್ಷೆ ಸುಧಾ ಮಣೂರು,ಕಾರಂತ ಥೀಂ ಪಾರ್ಕಿನ ಟ್ರಸ್ಟಿ ಸುಶೀಲಾ ಸೋಮಶೇಖರ ಉಪಸ್ಥಿತರಿದ್ದರು.

ಭಾಗ್ಯಲಕ್ಷ್ಮೀ ವೈದ್ಯ ಸ್ವಾಗತಿಸಿದರು. ಪಾರ್ವತಿ ಮಯ್ಯ ವಂದಿಸಿದರು. ಸುಪ್ರೀತಾ ಪುರಾಣಿಕ್ ನಿರೂಪಿಸಿದರು.
ಸಂಸ್ಮರಣಾ ಕಾರ್ಯಕ್ರಮದ ಬಳಿಕ ಸುಧಾ ಮಣೂರು ಇವರ ಪರಿಕಲ್ಪನೆಯಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಇಲ್ಲಿನ  ಬಾಲಕಲಾವಿದರಿಂದ ಗಾನತಾಳ ಮದ್ದಲೆ ವೈದೇಹಿ ಹರಣ ಪ್ರಸ್ತುತಗೊಂಡಿತು.ಕಾರ್ಯಕ್ರಮಕ್ಕೆ ಯಶಸ್ವೀ ಕಲಾವೃಂದದ ಸಹಕಾರ ನೀಡಿತು.

ರಸರಂಗ  ಕೋಟ ಇವರು ಹಯಗ್ರೀವ ಸಭಾಭವನ ತೆಕ್ಕಟ್ಟೆ ಇಲ್ಲಿ ಹಮ್ಮಿಕೊಂಡಿದ್ದ ಶಿವರಾಮಕಾರಂತರ ಸೃತಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಾರಂತ ಬಾಲ ಪುರಸ್ಕಾರ ಪಡೆದ ಬಾಲಕಲಾವಿದೆ ಕುಮಾರಿ ಪರಿಣಿತ ವೈದ್ಯ, ಕೋಟ ಸದಾರಮೆ ಕಾರಂತ ಇವರುಗಳನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *