ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮೂಡುಗಿಳಿಯಾರು ಸರ್ವಕ್ಷೇಮ ಯೋಗಬನದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜನೆ

ಕೋಟ: ಇಲ್ಲಿನ ಕೋಟದ ಮೂಡುಗಿಳಿಯಾರಿನ ಸರ್ವಕ್ಷೇಮ ಆಸ್ಪತ್ರೆ  ಮತ್ತು ಸಂಶೋಧನಾ ಪ್ರತಿಷ್ಠಾನ ಯೋಗಬನ ಮತ್ತು  ಕರ್ನಾಟಕ ಸರಕಾರ ಉಡುಪಿ ಜಿಲ್ಲಾ ಅಂದತ್ವ ನಿವಾರಣಾ ವಿಭಾಗ ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಕೋಟ ಇವರ ಸಂಯೋಜನೆಯೊoದಿಗೆ ಉಚಿತ ನೇತ್ರ ತಪಾಸಣೆ,  ಮತ್ತು ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ನೆಡೆಯಿತು.

ಉಡುಪಿಯ ಪ್ರಸಾದ್ ನೇತ್ರಾಲಯ ಇದರ  ನೇತ್ರ ತಜ್ಞರಾದ ಡಾ| ಪ್ರೇಮ್ ಕಾರ್ಯಕ್ರಮವನ್ನು ಉದ್ಘಾಟಿಸಿ ಕಣ್ಣಿನ ಮಹತ್ವ ಹಾಗೂ ಅದರ ಆರೋಗ್ಯದ ಬಗ್ಗೆ ವಿವಿರವಾಗಿ ತಿಳಿಸಿದರು. ಕೋಟ ಸಮುದಾಯ ಅರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ| ಮಾಧವ ಪೈ  ಆರೋಗ್ಯ ಸಂಬoಧಿಸಿದ ಮಾಹಿತಿ ನೀಡಿದರು. ಸರ್ವಕ್ಷೇಮ ಯೋಗಬನದ  ಡಾ| ಶ್ರೀಗಣೇಶ್, ಪ್ರಸಾದ್ ನೇತ್ರಾಲಯದ ಪಿಆರ್‌ಓ ಗಣೇಶ್  ಉಪಸ್ಥಿತರಿದ್ದರು.
ಸುಮಾರು 60  ಜನರಿಗೆ ತಪಾಸಣೆ ಹಾಗೂ ಮಾರ್ಗದರ್ಶನ ಮಾಡಲಾಯಿತು.

ಕೋಟದ ಮೂಡುಗಿಳಿಯಾರಿನ ಸರ್ವಕ್ಷೇಮ ಆಸ್ಪತ್ರೆ  ಮತ್ತು ಸಂಶೋಧನಾ ಪ್ರತಿಷ್ಠಾನ ಯೋಗಬನ ಇವರ ನೇತೃತ್ವದಲ್ಲಿ ಉಚಿತ ನೇತ್ರ ತಪಾಸಣೆ,  ಮತ್ತು ಪೊರೆ ಶಸ್ತç ಚಿಕಿತ್ಸಾ ಶಿಬಿರವನ್ನು  ಉಡುಪಿಯ ಪ್ರಸಾದ್ ನೇತ್ರಾಲಯ ಇದರ  ನೇತ್ರ ತಜ್ಞರಾದ ಡಾ| ಪ್ರೇಮ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೋಟ ಸಮುದಾಯ ಅರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ| ಮಾಧವ ಪೈ,  ಸರ್ವಕ್ಷೇಮ ಯೋಗಬನದ  ಡಾ| ಶ್ರೀಗಣೇಶ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *