ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸೌಕೂರು ಏತ ನೀರಾವರಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿ ರೈತ ಸಂಘ : ಕೆ. ವಿಕಾಸ್ ಹೆಗ್ಡೆ

ಕರ್ನಾಟಕ ನೀರಾವರಿ ನಿಗಮದಿಂದ ನಿರ್ವಹಿಸಲ್ಪಡುತ್ತಿರುವ ವರಾಹಿ ನೀರಾವರಿ ಯೋಜನೆಯ ಮೂಲಕ ನಿರ್ಮಾಣಗೊಂಡು ರೈತರಿಗೆ ವರವಾಗಿರುವ ಸೌಕೂರು ಏತ ನೀರಾವರಿ ಯೋಜನೆ ನೀರು ಹಾಯಿಸುವ ವಿದ್ಯುತ್ ಚಾಲಿತ ಪಂಪುಸೆಟ್ಗಳ ವಿದ್ಯುತ್ ಬಿಲ್ ವರಾಹಿ ನೀರಾವರಿ ಇಲಾಖೆ ಬಾಕಿ ಇಟ್ಟಿರುವ ಕಾರಣ ಮೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ಪ್ರಕರಣ ಶಾಶ್ವತ ಪರಿಹಾರಗೊಳ್ಳಲು ಸರ್ಕಾರ ಈ ಬಹು ಬೇಡಿಕೆಯ ಯೋಜನೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡಬೇಕೆಂದು ಕುಂದಾಪುರ ತಾಲ್ಲೂಕು ರೈತ ಸಂಘದ ಮುಖಂಡ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹ ಪಡಿಸಿದ್ದಾರೆ.

ಹಿಂದೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿರುವಾಗ ಶಕ್ತಿ ಯೋಜನೆಯ ಮೂಲಕ ರೈತರ ಹತ್ತು ಅಶ್ವಶಕ್ತಿ ತನಕದ ಕೃಷಿ ಪಂಪುಸೆಟ್ ಗಳಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿದ ಯೋಜನೆ ಇಂದಿಗೂ ರಾಜ್ಯದ ರೈತಾಪಿ ಬಂಧುಗಳಿಗೆ ವರವಾಗಿದೆ. ಇಂದಿನ ಸೌಕೂರು ಏತ ನೀರಾವರಿ ಯೋಜನೆ ಸಮಸ್ಯೆ ಶಾಶ್ವತ ಪರಿಹಾರವಾಗಬೇಕಾದರೆ ಸರ್ಕಾರ ಮೆಸ್ಕಾಂ ಇಲಾಖೆ ಮೂಲಕ ಈ ಯೋಜನೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡಬೇಕು. ಇಲ್ಲದೆ ಇದ್ದರೆ ಪ್ರತೀ ವರ್ಷ ಈ ಸಮಸ್ಯೆ ಏರ್ಪಡುತ್ತದೆ ಮತ್ತೆ ಜನಪ್ರತಿನಿದಿನಗಳ ಹೇಳಿಕೆ, ಮನವಿ, ರೈತರ ಹೋರಾಟಕ್ಕೆ ಕೊನೆ ಎನ್ನುವುದು ಇರುವುದಿಲ್ಲ. ಆದುದರಿಂದ ಸಂಬಂಧಪಟ್ಟ ಇಲಾಖಾ ಸಚಿವರು, ಅಧಿಕಾರಿಗಳು ಮತ್ತು ಶಾಸಕರು ಈ ಬಗ್ಗೆ ಕ್ರಮವಹಿಸಬೇಕು ಎಂದು ಅವರು ಆಗ್ರ ಹಿಸಿದ್ದಾರೆ.

Leave a Reply

Your email address will not be published. Required fields are marked *