ಕೋಟ: ಶ್ರೀ ಕ್ಷೇತ್ರ ಸಾಲಿಗ್ರಾಮದ ಶ್ರೀಗುರುನರಸಿಂಹ ದೇಗುಲದಲ್ಲಿ ಶರನ್ನವರಾತ್ರಿಯ ಲಲಿತಾ ಪಂಚಮಿಯ ಪರ್ವ ದಿನದಂದು ಶ್ರೀ ಚಂಡಿಕಾ ಯಾಗವನ್ನು ಶ್ರದ್ದಾ ಭಕ್ತಿಯಿಂದ ನಡೆಯಿತು.
ದೇಗುಲದ ತಂತ್ರಿ ಕೃಷ್ಣ ಸೋಮಯಾಜಿ ಮತ್ತು ಅರ್ಚಕ ಮಿಥುನ ಅಡಿಗರ ಸಮ್ಮುಖದಲ್ಲಿ ಅಧ್ಯಕ್ಷ ಡಾ.ಕೆ.ಎಸ್. ಕಾರಂತ ರಶ್ಮಿ ದಂಪತಿಯ ಫಲಪ್ರಾರ್ಥನೆಯೊಂದಿಗೆ ದೇವಳದ ಜೋಯಿಸರಾದ ರತ್ನಾಕರ ಸೋಮಯಾಜಿ , ಹೊರ್ಲಾಳಿ ಸುಬ್ರಹ್ಮಣ್ಯ ಭಟ್ಟ, ಗುಂಡ್ಮಿ ಸುರೇಶ ಭಟ್ಟ, ಗೋಪಾಲ ಐತಾಳ, ಪಾರಂಪಳ್ಳಿ ಚಂದ್ರಶೇಖರ ಅಡಿಗ, ಪ್ರಸನ್ನ ಭಟ್ಟ ನೇತ್ರತ್ವದಲ್ಲಿ ವಿಧ್ಯುಕ್ತವಾಗಿ ಹವನವು ಸಂಪನ್ನಗೊoಡಿತು.
ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಊರ ಪರವೂರ ಭಕ್ತರು ಪಾಲ್ಗೊಂಡು ಶ್ರೀ ಮದ್ಯೋಗಾನಂದ ಗುರು ನರಸಿಂಹ ಮತ್ತು ಶ್ರೀ ದುರ್ಗಾಪರಮೇಶ್ವರಿಯ ಅನುಗ್ರಹಕ್ಕೆ ಪಾತ್ರರಾದರು.
ಸುಹಾಸಿನಿ ಪೂಜೆ ಮತ್ತು ವಿಪ್ರೋತ್ತಮರ ಆಶೀರ್ವಚನದ ನಂತರ ಅನ್ನ ಸಂತರ್ಪಣೆಯನ್ನು ನಡೆಯಿತು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿಯ ಕೋಶಾಧಿಕಾರಿ ಪರಶುರಾಮ ಭಟ್ಟ, ಅನಂತ ಪದ್ಮನಾಭ ಐತಾಳ, ಕಾಟಿಪಳ್ಳ ಕೃಷ್ಣಾಪುರದ ಪಿ.ಸದಾಶಿವ ಐತಾಳ ದಂಪತಿ ಮತ್ತು ಮೀಯಪದವು ಆರ್ .ಎಂ.ಶ್ರೀಧರ ರಾಯರು, ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಪೂರ್ವ ಪ್ರಧಾನ ಕಾರ್ಯದರ್ಶಿ ಪಿ. ಮಂಜುನಾಥ ಉಪಾಧ್ಯ, ವಲಯ ಒಂದರ ಸಂಘಟನಾ ಕಾರ್ಯದರ್ಶಿ ಐರೋಡಿ ಶ್ರೀಪತಿ ಅಧಿಕಾರಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯ ಕೇಂದ್ರ ಕಾರ್ಯಕಾರಿಣಿ ಸದಸ್ಯ ಗೆಳೆಯರ ಬಳಗ ತಾರಾನಾಥ ಹೊಳ್ಳ, ಗ್ರಾಮ ಮೊಕ್ತೇಸರ ವೃಂದದ ಕೋಡಿ ನಾಗೇಂದ್ರ ನಾವಡ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಸಾಲಿಗ್ರಾಮದ ಶ್ರೀಗುರುನರಸಿಂಹ ದೇಗುಲದಲ್ಲಿ ಶರನ್ನವರಾತ್ರಿಯ ಲಲಿತಾ ಪಂಚಮಿಯ ಪರ್ವ ದಿನದಂದು ಶ್ರೀ ಚಂಡಿಕಾ ಯಾಗವು ದೇಗುಲದ ತಂತ್ರಿ ಕೃಷ್ಣ ಸೋಮಯಾಜಿ ಮತ್ತು ಅರ್ಚಕ ಮಿಥುನ ಅಡಿಗರ ಸಮ್ಮುಖದಲ್ಲಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ರಶ್ಮಿ ದಂಪತಿಯ ಫಲಪ್ರಾರ್ಥನೆಯೊಂದಿಗೆ ಜರಗಿತು. ದೇವಳದ ಆಡಳಿತ ಮಂಡಳಿಯ ಕೋಶಾಧಿಕಾರಿ ಪರಶುರಾಮ ಭಟ್ಟ, ಅನಂತ ಪದ್ಮನಾಭ ಐತಾಳ, ಕಾಟಿಪಳ್ಳ ಕೃಷ್ಣಾಪುರದ ಪಿ.ಸದಾಶಿವ ಐತಾಳ ದಂಪತಿ ಇದ್ದರು.












Leave a Reply