ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶಿಕ್ಷಕರ ದಿನಾಚರಣೆ ಪ್ರಯುಕ್ತ ಅಚ್ಲಾಡಿ ಅಡಾರ್ ಮನೆ ಶ್ರೀ ರಾಜೀವ ಶೆಟ್ಟಿಯವರಿಗೆ ಸನ್ಮಾನ

“ಶಿಕ್ಷಕರ ದಿನಾಚರಣೆ” ಪ್ರಯುಕ್ತ, 1971 ರಂದು ಸರ್ಕಾರಿ ಸೇವೆಗೆ ನಿಯುಕ್ತಿಗೊಂಡು, ತಮ್ಮ ಆರಂಭಿಕ ವೃತ್ತಿ ಜೀವನವನ್ನು ಮರವಂತೆ ಪ್ರಾಥಮಿಕ ಶಾಲೆಯಲ್ಲಿ ಮಾಡಿ, ತದನಂತರ ಬಡಾಬೆಟ್ಟು ಮತ್ತು ಬೇಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಡುಕೆರೆ ಅಚ್ಲಾಡಿ ಇಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ  ಕರ್ತವ್ಯ, ದಕ್ಷತೆ ಹಾಗೂ ಶಿಸ್ತಿಗೆ ಹೆಸರುವಾಸಿಯಾದ, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ, ಹಲವಾರು ಮಂದಿ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಲು‌ ಕಾರಣೀಭೂತರಾದ, ಸದಾ ಲವಲವಿಕೆಯಿಂದಿರುವ ನೀವು ಶಿಸ್ತುಬದ್ದ ಜೀವನವನ್ನು ಮೈಗೂಡಿಸಿಕೊಂಡ ಅಚ್ಲಾಡಿ ಅಡಾರ್ ಮನೆ ರಾಜೀವ್ ಶೆಟ್ಟಿಯವರನ್ನು ದಿನಾಂಕ 21-09-2025 ನೇ ಆದಿತ್ಯವಾರ ಅವರ ಸ್ವಗೃಹ ಅಚ್ಲಾಡಿಯಲ್ಲಿ ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ವತಿಯಿಂದ  ಗೌರವಿಸಲಾಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿಯವರು ಶಿಕ್ಷಕರ ದಿನಾಚರಣೆಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ನೂತನ ಸದಸ್ಯರು ಹಾಗೂ ಶ್ರೀ ಅಚ್ಲಾಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರೂ ಆದ ಅಚ್ಲಾಡಿ ಅಡಾರ್ ಮನೆ ಲಯನ್ ಬಾಲಕೃಷ್ಣ ಶೆಟ್ಟಿಯವರು  ಶ್ರೀ ರಾಜೀವ ಶೆಟ್ಟಿಯವರ ಪರಿಚಯ ಮಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ  ಶ್ರೀ ಅಚ್ಲಾಡಿ ಅಡಾರ್ ಮನೆ ಶ್ರೀ ರಾಜೀವ ಶೆಟ್ಟಿಯವರು  ಮಾತನಾಡಿ *”ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಸಾಕಸ್ಟು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದು, ಶಿಕ್ಷಕರ ದಿನಾಚರಣೆಯ ಪ್ರಯುಕ್ತ ತಮ್ಮನ್ನು ಸನ್ಮಾನಿಸಿದ ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಯ ಸದಸ್ಯರಿಗೆ ಕೃತಜ್ನತೆಗಳನ್ನು ಸಲ್ಲಿಸಿ ಶುಭ ಹಾರೈಸಿದರು”.

ಈ ಸಂದರ್ಭ ಶ್ರೀ ರಾಜೀವ ಶೆಟ್ಟಿ ಯವರ ಪತ್ನಿ ಶ್ರೀಮತಿ ಶೆಡ್ತಿ, ಅಳಿಯ ಅಮರ್ ಶೆಟ್ಟಿ, ಮಗಳು ಪ್ರಜ್ವಲ್ ಶೆಟ್ಟಿ, ಮೊಮ್ಮಗಳು ಶ್ರೀ ದೇವಿ ಶೆಟ್ಟಿ ಹಾಜರಿದ್ದರು. ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ನಿಕಟಪೂರ್ವ ಅಧ್ಯಕ್ಷರಾದ ಲಯನ್ ಬನ್ನಾಡಿ ಪ್ರವೀಣ್ ಹೆಗ್ಡೆ,  ಮಾಜಿ ಅಧ್ಯಕ್ಷರಾದ ಲಯನ್ ಸುರೇಂದ್ರ ಶೆಟ್ಟಿ ಕೊಮೆ,  ಲಯನ್ ಬನ್ನಾಡಿ ಸುಭಾಶ್ಚಂದ್ರ ಶೆಟ್ಟಿ, ಲಯನ್ ಉಪ್ಲಾಡಿ ಸುಗುಣಾಕರ್ ಶೆಟ್ಟಿ, ಲಯನ್ ಅಚ್ಲಾಡಿ ಅಡಾರ್ ಮನೆ  ರಾಜೀವ್ ಶೆಟ್ಟಿ, ಲಯನ್ ಸಂತೋಷ್ ಕುಮಾರ್ ಶೆಟ್ಟಿ ಟಿ.ಸಿ.ಬಿ., ಲಯನ್ ಕೊತ್ತಾಡಿ ಅಜಿತ್ ಶೆಟ್ಟಿ, ಲಯನ್‌ ರಂಜಿತ್ ಶೆಟ್ಟಿ ಮಧುವನ
ಮುಂತಾದವರು ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಲಯನ್ ಯಾಳಕ್ಲು ಚಂದ್ರ ಶೆಟ್ಟಿ ವಂದಿಸಿದರು &  ಕೋಶಾಧಿಕಾರಿ ಲಯನ್ ನಿತೀಶ್ ಆಚಾರ್ ಮಧುವನ ಕಾರ್ಯಕ್ರಮ ಆಯೋಜಿಸಿದ್ದರು. ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷರು ಹಾಗೂ ನಿಕಟಪೂರ್ವ ರೀಜನ್ ಚೆಯರ್ ಪರ್ಸನ್  ಲಯನ್ Adv ಬನ್ನಾಡಿ ಸೋಮನಾಥ್ ಹೆಗ್ಡೆ  ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *