ಕೋಟ: ಶ್ರೀ ಭಗವತೀ ಅಮ್ಮನವರ ದೇವಸ್ಥಾನ ಗುಂಡ್ಮಿ ಇಲ್ಲಿ ಶರನ್ನವರಾತ್ರಿಯ ಪ್ರಯುಕ್ತ ವರ್ಷಂಪ್ರತಿಯoತೆ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ ಇದರ ಮಹಿಳಾ ಸದಸ್ಯರಿಂದ ಪ್ರತಿ ದಿನ ಸಂಜೆ ನಡೆಯಲಿರುವ ಶ್ರೀ ಲಲಿತಾ ಸಹಸ್ರ ನಾಮ ಪಾರಾಯಣಕ್ಕೆ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಯಂ.ಶಿವರಾಮ ಉಡುಪ ದೀಪ ಬೆಳಗಿಸಿ ಚಾಲನೆ ನೀಡಿದರು.
ದೇವಳದ ಪ್ರಧಾನ ಅರ್ಚಕ ಶ್ರೀ ರಾಮದಾಸ ಅಡಿಗರು ಆಶೀರ್ವಚನ ನೀಡುತ್ತಾ ಶ್ರೀ ಭಗವತೀ ಅಮ್ಮನವರ ಮಹಿಮೆ ಕುರಿತು ತಿಳಿಸಿದರು. ದೇವಳದ ಆಡಳಿತದ ಶ್ರೀ ರಾಮಚಂದ್ರ ಐತಾಳರು ಸ್ವಾಗತಿಸಿದರು. ದೇವಳದ ಆಡಳಿತದ ಶ್ರೀ ಉದಯ ಕುಮಾರ ಮೈಯ್ಯ, ಶ್ರೀ ಶಿವಾನಂದ ಮೈಯ್ಯ, ವಿ.ಜಿ.ಮೈಯ್ಯ, ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಪಟ್ಟಾಭಿರಾಮ ಸೋಮಯಾಜಿ, ಶ್ರೀ ಮಹಾಗಣಪತಿ ಭಜನಾ ಮಂಡಳಿ ಕಾರ್ಕಡ ಇದರ ಸುಕನ್ಯಾ ಸೋಮಯಾಜಿ ಮತ್ತಿತರರು ಉಪಸ್ಥಿತರಿದ್ದರು. ಸಭಾದ ಕಾರ್ಯದರ್ಶಿ ಕೆ. ರಾಜಾರಾಮ ಐತಾಳ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಭಗವತೀ ಅಮ್ಮನವರ ದೇವಸ್ಥಾನ ಗುಂಡ್ಮಿ ಶ್ರೀ ಲಲಿತಾ ಸಹಸ್ರ ನಾಮ ಪಾರಾಯಣಕ್ಕೆ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಯಂ.ಶಿವರಾಮ ಉಡುಪ ದೀಪ ಬೆಳಗಿಸಿ ಚಾಲನೆ ನೀಡಿದರು. ವಿ.ಜಿ.ಮೈಯ್ಯ, ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಪಟ್ಟಾಭಿರಾಮ ಸೋಮಯಾಜಿ ಇದ್ದರು.












Leave a Reply