ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶಂಕರನಾರಾಯಣ :  ಕಲ್ಲು ಬಂಡೆ ಸ್ಪೋಟ; ಇಬ್ಬರ ಬಂಧನ

ಜನವರಿ 31 ರಂದು ಬೆಳಿಗ್ಗೆ 7:30 ಗಂಟೆಗೆ ಶಂಕರನಾರಾಯಣ ಪೊಲೀಸ್ ಠಾಣ ವ್ಯಾಪ್ತಿಯ ಬೈಂದೂರು ತಾಲೂಕಿನಲ್ಲಿ ಹಳ್ಳಿಹೊಳೆ ಗ್ರಾಮದ ಅರಮನೆ ಕೊಡ್ಲು ಎಂಬಲ್ಲಿ ಅನಂತಮೂರ್ತಿ ಭಟ್ ಎಂಬುವವರ ಜಾಗದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಕಲ್ಲು ಬಂಡೆಗಳನ್ನು ಸ್ಪೋಟಿಸಿದ್ದು ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ 16/2025 ಕಲಂ. 3, 5, 6 explosive substance act and sec 9b substance act ಮತ್ತು 288 r/w 3(5) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟ ನಡೆಸಿದ ಜಾಗದ ಮಾಲೀಕರಾದ ಅನಂತಮೂರ್ತಿ ಮತ್ತು ಅವರಿಗೆ ಸಹಕರಿಸಿದ ಪ್ರವೀಣ್ ರವರನ್ನು ಶಂಕರನಾರಾಯಣ ಪೊಲೀಸ್ ಠಾಣೆ ಪಿಎಸ್ಐ ನಾಸಿರ್ ಹುಸೇನ್ ಹಾಗೂ ಸಿಬ್ಬಂದಿಯವರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಪ್ರಕರಣ ತನಿಖೆಯಲ್ಲಿರುತ್ತದೆ.

Leave a Reply

Your email address will not be published. Required fields are marked *