ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜ.16.ಯುವ ವೇದಿಕೆ ವತಿಯಿಂದ ಸಾಂಸ್ಕೃತಿಕ ಪರ್ವ, ಸಾಧಕರಿಗೆ ಸನ್ಮಾನ

ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಜಾತ್ರೋತ್ಸವದ ಅಂಗವಾಗಿ ಗುರುನರಸಿಂಹ ಬಯಲು ರಂಗವೇದಿಕೆಯಲ್ಲಿ ಯುವ ವೇದಿಕೆ, ಕೂಟ ಮಹಾಜಗತ್ತು ಸಾಲಿಗ್ರಾಮ  ಅಂಗಸoಸ್ಥೆ 8ನೇ ವರ್ಷದ ವಾರ್ಷಿಕೋತ್ಸವ, ಗೌರವ ಸನ್ಮಾನ, ವಿದ್ಯಾನಿಧಿ ವಿತರಣೆ ಮತ್ತು ಸಾಂಸ್ಕöತಿಕ ಕಾರ್ಯಕ್ರಮ  ಜ.16ರಂದು ಸಂಜೆ 6.30ಕ್ಕೆ ನಡೆಯಲಿದ್ದು ಈ ಪ್ರಯುಕ್ರ ಸಭಾ ಕಾರ್ಯಕ್ರಮ ಸಾಧಕರಾದಜಯದೇವ ಹೃದ್ರೋಗ ಆಸ್ಪತ್ರೆ ಬೆಂಗಳೂರು  ಖ್ಯಾತ ಹೃದ್ರೋಗ ತಜ್ಞೆ ಡಾ. ಪ್ರಭಾವತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöತ ಕೆ. ತಾರನಾಥ ಹೊಳ್ಳ,ಪ್ರಗತಿಪರ ಕೃಷಿಕಶ್ರೀಪತಿ ಅಧಿಕಾರಿ ಕರ್ನಾಟಕ ಸರ್ಕಾರದ ಶೌರ್ಯ ಪ್ರಶಸ್ತಿ ಪುರಸ್ಕತ ಮಾ.ಧೀರಜ್ ಐತಾಳ್ ಇವರುಗಳನ್ನು ಗುರುತಿಸಿ ಗೌರವಿಸಲಿದೆ. ಸಾಂಸ್ಕöತಿಕ ಕಾರ್ಯಕ್ರಮದ ಭಾಗವಾಗಿ ಕರಾವಳಿಯ ಸುಪ್ರಸಿದ್ಧ ಅಂತರಾಷ್ಟಿçಯ ಮಟ್ಟದ ಗಾಯಕ-ಗಾಯಕಿಯರ ಹಾಗೂ ಝೀ ಕನ್ನಡ ಟಿವಿ ವಾಹಿನಿಯಲ್ಲಿ ಭಾಗವಹಿಸಿದ-ಹಲವಾರು ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಹೆಮ್ಮೆಯ ತಂಡ ಸ್ಟೆಪ್ & ಸ್ಟೆöಲ್ ಡ್ಯಾನ್ಸ್ ಸ್ಟುಡಿಯೋ ಸಾಸ್ತಾನ ಇವರ ಕೂಡುವಿಕೆಯಲ್ಲಿ ಸಂಗೀತ ಸಂಜೆ ನೃತ್ಯೋಲ್ಲಾಸ-2025 ಹಾಡು ಹೆಜ್ಜೆಗಳ ಭಾವ ದಿಬ್ಬಣ ಕಾರ್ಯಕ್ರಮಗಳು ಜರಗಲಿದೆ. ಎಂದು ಸಂಘಟಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *