ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ -ಅಯೋಧ್ಯಾ ಶ್ರೀರಾಮ ಮಂದಿರ ಮಂತ್ರಾಕ್ಷತೆ ಅಭಿಯಾನ

ರಾಮನ ಪ್ರಾಣಪ್ರತಿಷ್ಠೆಯಲ್ಲಿ ಭಾಗಿಯಾಗಿ ಮನೆ ಮನದಲ್ಲಿ ಶ್ರೀರಾಮದೀಪ ಪ್ರಜ್ವಲಿಸಲಿ- ಶಿರೂರು ಶ್ರೀ
ಕೋಟ: ಅಯೋಧ್ಯಾಪತಿ ಶ್ರೀರಾಮದ ದಿವ್ಯ ಪ್ರಾಣ ಪ್ರತಿಷ್ಠೆ ಯಲ್ಲಿ ಶ್ರೀರಾಮಭಕ್ತರು ಒಗ್ಗೂಡಿ ಮನೆ ಮನದಲ್ಲಿ ಶ್ರೀರಾಮದೀಪ ಪ್ರಜ್ವಲಿಸಲಿ ಆ ಮೂಲಕ ಕೋಟ್ಯಾನು ಕೋಟಿ ಶ್ರೀರಾಮ ಭಕ್ತರು ಸಂಭ್ರಮಿಸುವAತಾಗಲಿ ಎಂದು ಉಡುಪಿ ಶ್ರೀ ಕೃಷ್ಣಮಠದ ಶಿರೂರು ಪೀಠಾಧ್ಯಕ್ಷ ಶ್ರೀ.ಶ್ರೀ.ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳ ಹೇಳಿದರು.

ಸಾಲಿಗ್ರಾಮ ಕರಾವಳಿ ಮೊಗವೀರ ಸಭಾಭವನದಲ್ಲಿ ಹಿಂದೂ ಸಮಾಜ ಸಾಲಿಗ್ರಾಮ ತಾಲೂಕು ನೇತೃತ್ವದಲ್ಲಿ ಅಯೋಧ್ಯಾ ಶ್ರೀ ರಾಮ ಮಂದಿರ ಮಂತ್ರಾಕ್ಷತೆ ಅಭಿಯಾನದಲ್ಲಿ ಆಶ್ರೀವಚನ ನೀಡಿ ಶ್ರೀ ರಾಮ ಮಂತ್ರಾಕ್ಷತೆ ಅಭಿಯಾನದ ಮಹತ್ವ ಅರಿತು ಕಾರ್ಯನಿರ್ಹಿಸಿ ಎಂದರಲ್ಲದೆ ಶ್ರೀರಾಮನ ದಿವ್ಯ ಕಾರ್ಯದಲ್ಲಿ ಮಂತ್ರಮುಗ್ಧರಾಗಿ ಭಕ್ತಿ ಸೇವೆ ಸಲ್ಲಿಸಿ ಆ ಮೂಲಕ ರಾಮನನ್ನು ಹತ್ತಿರದಿಂದ ಕಾಣುವಂತಾಗಲಿ ಎಂದು ಹಾರೈಸಿದರು.

ಈ ವೇಳೆ ಸಾಲಿಗ್ರಾಮ ತಾಲೂಕು ವಿವಿಧ ಭಾಗಗಳ ಶ್ರೀರಾಮ ಭಕ್ತರಿಗೆ ಮಂತ್ರಾಕ್ಷತೆಯನ್ನು ಶ್ರೀಪಾದಂಗಳರವರು ನೀಡಿ ಆಶ್ರೀವದಿಸಿದರು.
ಮುಖ್ಯ ಅಭ್ಯಾಗತರಾಗಿ ರಾಷ್ಟಿçÃಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಕಾರ್ಯವಾಹ ವಾದಿರಾಜ್ ಭಟ್ ಗೋಪಾಡಿ ಮಾತನಾಡಿ ಅಯೋಧ್ಯಾ ಭವ್ಯ ಶ್ರೀ ರಾಮಮಂದಿರ ದೇಗುಲದ ಪ್ರಾಣಪ್ರತಿಷ್ಠೆ ಸಿದ್ಧಗೊಳ್ಳುತ್ತಿರುವ ಹಿನ್ನಲೆಯಲ್ಲಿ ಗ್ರಾಮಮಟ್ಟದಲ್ಲಿಇದರ ತಯಾರಿ ಸಿದ್ಧಗೊಳ್ಳಬೇಕು ಇದರ ಪೂರ್ವಭಾವಿಯಾಗಿ ಮಂತ್ರಾಕ್ಷತೆ ಅಭಿಯಾನಗೊಳ್ಳುತ್ತಿದೆ.ಹಿಂದೂ ಸಮಾಜ ಮತ್ತೊಮ್ಮೆ ದೀಪ ಹಚ್ಚಿ ದೀಪಾವಳಿ ಆಚರಿಸಿ ಮನೆ ಮನಗಳನ್ನು ಸಂಭ್ರಮಿಸಬೇಕಾಗಿದೆ.

ಸಂಘದ ಉಡುಪಿ ಜಿಲ್ಲಾ ಕಾರ್ಯವಾಹ ರಾಘವೇಂದ್ರ ಮುದ್ರಾಡಿ,ಸಾಲಿಗ್ರಾಮ ತಾಲೂಕು ಸಂಘಚಾಲಕ ಸಂದೀಪ್ ಶೆಟ್ಟಿ ಶಿರಿಯಾರ ಇದ್ದರು. ವಿಶ್ವಹಿಂದೂ ಪರಿಷತ್ ಮುಖಂಡ ಸುರೇಂದ್ರ ಮಾರ್ಕೋಡ್ ಪ್ರಾಸ್ತಾವನೆ ಸಲ್ಲಿಸಿದರು.ಕಾರ್ಯಕ್ರಮವನ್ನು ಶ್ರೀಕಾಂತ ಕಾರ್ಕಡ ನಿರೂಪಿಸಿದರು.ಸುರೇಂದ್ರ ಕೋಡಿ ವಂದಿಸಿದರು.ಈ ಮೊದಲು ಸಾಲಿಗ್ರಾಮ ಆಂಜನೇಯ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಯ ಮೂಲಕ ಮಂತ್ರಾಕ್ಷತೆಯನ್ನು ಸಭಾಂಗಣದವರೆಗೆ ಕೊಂಡ್ಯೊಯಲಾಯಿತು.

ಸಾಲಿಗ್ರಾಮ ಕರಾವಳಿ ಮೊಗವೀರ ಸಭಾಭವನದಲ್ಲಿ ಹಿಂದೂ ಸಮಾಜ ಸಾಲಿಗ್ರಾಮ ತಾಲೂಕು ನೇತೃತ್ವದಲ್ಲಿ ಅಯೋಧ್ಯಾ ಶ್ರೀ ರಾಮ ಮಂದಿರ ಮಂತ್ರಾಕ್ಷತೆ ಅಭಿಯಾನದಲ್ಲಿ ಉಡುಪಿ ಶ್ರೀ ಕೃಷ್ಣಮಠದ ಶಿರೂರು ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳ ಆಶ್ರೀವಚನ ನೀಡಿದರು.

Leave a Reply

Your email address will not be published. Required fields are marked *