ಕೋಟ: ತೆಕ್ಕಟ್ಟೆ ಗ್ರಾಮ ಪಂಚಾಯತ್‍ನಲ್ಲಿ ಬಿಲ್ ಕಲೆಕ್ಟರ್ ಹುದ್ದೆ ಮೂರು ವರ್ಷದಿಂದ ಖಾಲಿ ಇದ್ದು ಇದೀಗ ಈ ಹುದ್ದೆ ದಲಿತ ಸಮುದಾಯಕ್ಕೆ ಮೀಸಲಿದ್ದು ಆದರೆ ಇದೀಗ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಸಾಮಾನ್ಯ ಮೀಸಲಾತಿಯಡಿ ನೇಮಕಕ್ಕೆ ಮುಂದಾಗಿರುವ ವಿಚಾರದ ಹಿನ್ನಲ್ಲೆಯಲ್ಲಿ ಭಾನುವಾರ ತೆಕ್ಕಟ್ಟೆ ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ದಲಿತ ಸಂಘಟನೆ ತೆಕ್ಕಟ್ಟೆ ನೇತ್ರತ್ವದಲ್ಲಿ ಸಮುದಾಯದ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷಗಳನ್ನು ಸಿದ್ಧಪಡಿಸಿತು
ಈ ವೇಳೆ ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡ ಸತೀಶ್ ಕುಮಾರ್ ತೆಕ್ಕಟ್ಟೆ ಗ್ರಾಮ ಪಂಚಾಯತ್‍ನ ದಲಿತ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ. ಗ್ರಾಮ ಪಂಚಾಯತ್‍ನ ದಲಿತ ವಿರೋಧಿ ನೀತಿ ಖಂಡಿಸಿ ದಲಿತ ಸಂಘಟನೆ ಸಭೆ ನೆಡೆಸಿ ಗ್ರಾಮ ಪಂಚಾಯತ್ ಬಿಲ್ ಆಪರೇಟರ್ ಕಂ ಆಪರೇಟರ್ ಹುದ್ದೆ ದಲಿತ ಸಮುದಾಯಕ್ಕೆ ಮೀಸಲಿಡದಿದ್ದಲ್ಲಿ ಮುಂದಿನ ಸೋಮವಾರ ಗ್ರಾಮ ಪಂಚಾಯತ್ ಎದುರು ದಲಿತ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನೆಡೆಸುವುದಾಗಿ ಎಚ್ಚರಿಸಿದ್ದಾರೆ. ಸಭೆಯಲ್ಲಿ ದಲಿತ ಮುಖಂಡರಾದ ಶ್ರೀನಿವಾಸ ಮಲ್ಯಾಡಿ, ಮಹೇಶ್ ಕುಮಾರ್, ನರಸಿಂಹ ತೆಕ್ಕಟ್ಟೆ, ಶರತ ಕುಮಾರ್, ಗಾಯತ್ರಿ ತೆಕ್ಕಟ್ಟೆ, ವೈಕುಂಠ ಕೊಮೆ ಮೊದಲಾದವರು ಉಪಸ್ಥಿತರಿದ್ದರು
ತೆಕ್ಕಟ್ಟೆ ಗ್ರಾಮ ಪಂಚಾಯತ್ ದಲಿತ ವಿರೋಧಿ ನೀತಿ ಖಂಡಿಸಿ ದಸಂಸ ಸಭೆ ಆಯೋಜಿಸಿತು.











Leave a Reply