ಕೋಟ: ಇಲ್ಲಿನ ಸಾಸ್ತಾನದ ಶ್ರೀ ಕ್ಷೇತ್ರ ಗೋಳಿಗರಡಿಯ ಪಂಜುರ್ಲಿ ಕೃಪಾಪೋಷಿತ ಯಕ್ಷಗಾನ ಮೇಳದ ಈ ಬಾರಿಯ ̈ ಪ್ರಥಮ ದೇವರ ಸೇವೆಯ ಸಂದರ್ಭಲ್ಲಿ ನೀಡಲಾಗುವ ಗೋಳಿಗರಡಿ ದಿ| ಜಿ. ಚಂದು ಪೂಜಾರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನ.22 ರಂದು ಜರಗಿತು.ದಿ| ಜಿ.ಚಂದು ಪೂಜಾರಿ ಪ್ರಶಸ್ತಿಯನ್ನು ಹಿರಿಯ ಕಲಾವಿದ ತೀರ್ಥಹಳ್ಳಿ ಗೋಪಾಲ ಅಚಾರ್ಯ ಅವರಿಗೆ ನೀಡಿ ಗೌರವಿಸಲಾಯಿತು.
ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಎಚ್, ಸುಜಯೀಂದ್ರ ಹಂದೆ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಮಣಿಪಾಲ ಎಂ.ಐ.ಟಿ.ಯ ನಿವೃತ್ತ ಪ್ರಾಧ್ಯಾಪಕ ಪ್ರೊ| ಎಸ್.ವಿ. ಉದಯ ಕುಮಾರ್ ಶೆಟ್ಟ, ದೈವಸ್ಥಾನದ ಮುಕ್ತೇಸರ ಮೇಳದ ಸಂಚಾಲಕ ಜಿ.ವಿಠಲ ಪೂಜಾರಿ, ಶ್ರೀ ಕ್ಷೇತ್ರ ಗೋಳಿಗರಡಿಯ ಪಾತ್ರಿಗಳಾದ ̈ಶಂಕರ ಪೂಜಾರಿ,ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನದ ಕೆ.ವಿ ರಮೇಶ್ ರಾವ್, ಮೊಕ್ತೇಸರರ ಬಳಗದ ರಿತೇಶ್ ಶೆಟ್ಟಿ, ಮೇಳದ ಕೋಶಾಧಿಕಾರಿ ಗಣಪಯ್ಯ ಆಚಾರ್ಯ ಐರೋಡಿ, ಜತೆ ಕಾರ್ಯದ ರ್ಶಿ ಎ.ಎನ್.ಶಂಕರ ಕುಲಾಲ್ , ಸಂಘಟನಾ ಕಾರ್ಯದರ್ಶಿಗಳಾದ ಗೋಪಾಲ ಐರೋಡಿ, ಗಂಗಾಧರ ಪೂಜಾರಿ, ಉಪಸ್ಥಿತರಿದ್ದರು. ಮೇಳದ ಗೌರವಾಧ್ಯಕ್ಷ , ದೇವಾನಂದ್ ಸ್ವಾಗತಿಸಿದರು. ಕೇಶವ ಆಚಾರ್ಯ ಸಾಸ್ತಾನ ಸಮ್ಮಾನ ಪತ್ರ ವಾಚಿಸಿ, ವಂದಿಸಿದರು. ಕಾರ್ಯದರ್ಶಿ ಗಣೇಶ ಪೂಜಾರಿ ಪಾಂಡೇಶ್ವರ ̄ನಿರೂಪಿಸಿದರು.












Leave a Reply